By Village Missionary Movement
Tuesday, 05-Jul-2022ಧೈನಂದಿನ ಧ್ಯಾನ(Kannada) – 05.07.2022
ಪ್ರೀತಿ
"...ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ" - ಗಲಾತ್ಯ 5:13
ಲಿಯೋ ಟಾಲ್ ಸ್ಟಾಯ್ ಎಂಬವರು ಪ್ರಸಿದ್ಧ ಬರಹಗಾರರು. ಅವರ ಅತ್ಯುತ್ತಮ ಕಥೆಗಳಲ್ಲಿ ಒಂದನ್ನು ದೇವರ ವಾಕ್ಯದ ಮೂಲಕ ಯೋಚಿಸೋಣವಾ?
ಒಬ್ಬ ಮನುಷ್ಯನಿಗೆ ದೇವರಿಂದ ವರ ಸಿಕ್ಕಿತಂತೆ. ನಿನಗೆ ಏನು ಬೇಕು ಎಂದು ಕೇಳಿದಾಗ, "ಎಲ್ಲಾ ಮನುಷ್ಯರೂ ನನ್ನ ಮೇಲೆ ಅಪಾರ ಪ್ರೀತಿಯನ್ನು ತೋರಿಸಬೇಕು" ಎಂದು ಹೇಳಿದನಂತೆ. ಆರಂಭದಲ್ಲಿ ಖುಷಿಯಾಗಿದ್ದ ಅವನು, ಬೇರೆಯವರನ್ನು ಪ್ರೀತಿಸದೆ ತಾನು ಮಾತ್ರ ಪ್ರೀತಿಯನ್ನು ಅನುಭವಿಸುತ್ತಿದ್ದ ಕಾರಣ ಬೇಸರವಾಯಿತು. ಅವನು ಮತ್ತೆ ದೇವರ ಬಳಿಗೆ ಬಂದು ನಾನು “ಎಲ್ಲರ ಮೇಲೂ ಪ್ರೀತಿ ತೋರಬೇಕು” ಎಂದು ಕೇಳಿಕೊಂಡನಂತೆ ಅದು ಕೂಡ ನೆರವೇರಿತು. ಅವನು ಎಲ್ಲರನ್ನೂ ಪ್ರೀತಿಸುತ್ತಿದ್ದನು, ಆದರೆ ಯಾರೂ ಅವನನ್ನು ಪ್ರೀತಿಸಲಿಲ್ಲ! ಅಯ್ಯೋ, ಆ ಭಯಾನಕ ಸ್ಥಿತಿಯ ಬಗ್ಗೆ ಯೋಚಿಸಿ! ಅಂತಿಮವಾಗಿ ನಾವು ಇತರರನ್ನು ಪ್ರೀತಿಸಿ, ಅವರಿಂದ ಪ್ರೀತಿಯನ್ನು ಪಡೆಯುವುದೇ ನಿಜವಾದ ಸಂತೋಷ ಎಂದು ಅರಿತುಕೊಂಡನಂತೆ.
ಸತ್ಯವೇದದಲ್ಲಿ ಇದಕ್ಕೆ ಒಂದು ಸರಿಯಾದ ಉದಾಹರಣೆ ಎಂದರೆ, ಅದು ನಮ್ಮ ಕರ್ತನಾದ ಯೇಸು ಕ್ರಿಸ್ತನೇ. ಅವರು ನಮ್ಮ ಮೇಲಿನ ಪ್ರೀತಿಯಿಂದಲೇ, ಮನುಷ್ಯನಾಗಿ ಭೂಮಿಯಲ್ಲಿ ಜನಿಸಿದರು. ಅದು ಮಾತ್ರವಲ್ಲದೇ ನಮಗಾಗಿಯೇ ಈ ಭೂಮಿಯಲ್ಲಿ ಜೀವಿಸಿದರು. ಕೊನೆಗೆ ನಮಗಾಗಿ ಪ್ರಾಣವನ್ನೇ ಕೊಟ್ಟರು. ಅವರು ತನ್ನ ಶರೀರದ ಕೊನೆ ರಕ್ತದ ಹನಿಯನ್ನೂ ನಮಗಾಗಿಯೇ ಸುರಿಸಿದರು. "ಇದೇ ಪ್ರೀತಿಯನ್ನು ನಾವು ಸಹ ಇತರರಿಗೆ ತೋರಿಸಬೇಕು" ಎಂದು ಬದುಕಿ ತೋರಿಸಿದ್ದು ಮಾತ್ರವಲ್ಲದೇ, ಅದನ್ನೇ ಆಜ್ಞೆಯಾಗಿಯೂ ನೀಡಿದರು." "ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು" ಎಂಬದೇ ಮೊದಲನೆಯ ಮುಖ್ಯವಾದ ಆಜ್ಞೆಗೆ ಸಮಾನವಾದ ಎರಡನೆಯ ಆಜ್ಞೆಯಾಗಿದೆ.
ದೇವರ ಮಕ್ಕಳೇ, ನಮ್ಮಲ್ಲಿ ಎಷ್ಟು ಮಂದಿ ಇತರರನ್ನು ಪ್ರೀತಿಸಲು ಸಿದ್ಧರಿದ್ದಾರೆ? ಈ ಜಗತ್ತಿನಲ್ಲಿ ಒಂದು ದೊಡ್ಡ ಪ್ರೀತಿ ಇದೆ ಎಂದರೆ, ಅದು ನಾವು ಯಾವುದೇ ನಿರೀಕ್ಷೆಯಿಲ್ಲದೆ ಇತರರಿಗೆ ನೀಡುವ ಪ್ರೀತಿಯೇ ಆಗಿದೆ. ಮದರ್ ತೆರೇಸಾ ಅವರ ಸುಂದರ ಮಾತುಗಳಿವು – “ನಿನಗಾಗಿ ಬದುಕುತ್ತಿದ್ದೇನೆ, ಎಂದು ಹೇಳುವುದಕ್ಕಿಂತ, ನಿನ್ನಿಂದಲೇ ಬದುಕುತ್ತಿದ್ದೇನೆ ಎಂದು ಯಾರಾದರೊಬ್ಬರು ಹೇಳುವಂತೆ ಮಾಡು” ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಇತರರನ್ನು ಉತ್ಸಾಹದಿಂದ ಪ್ರೀತಿಸೋಣ! ದೇವರ ಆಜ್ಞೆಯನ್ನು ಪಾಲಿಸೋಣ!!
- Mrs. ಜ್ಞಾನಜ್ಯೋತಿ ಸಿಮ್ಸನ್
ಪ್ರಾರ್ಥನಾ ಅಂಶ:
ಪ್ರಸ್ತುತ ಶಾಲಾ ವರ್ಷಕ್ಕೆ ನಮ್ಮ ಮಿಷನರಿ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಬೇಕೆಂದು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482