Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.07.2022 (Youth Special)
Share:

By Village Missionary Movement

Monday, 04-Jul-2022

ಧೈನಂದಿನ ಧ್ಯಾನ(Kannada) – 04.07.2022 (Youth Special)

 

ಚಿಂತೆಗಳನ್ನು ವಿಚಾರಿಸುವವರು

 

"ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ" - 1 ಪೇತ್ರ 5:7

 

ನಾವು ಪ್ರತಿದಿನವೂ ದಿನಪತ್ರಿಕೆಯನ್ನು ನೋಡುವಾಗ ಅನೇಕರು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿರುವ ಸುದ್ದಿಯನ್ನು ಓದುತ್ತಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತೇರ್ಗಡೆಯಾಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಏಕೆ ನಡೆಯುತ್ತಿದೆ? ಇದನ್ನು ಹೇಗೆ ತಡೆಯಬಹುದು?

 

ಈ ಲೋಕ ಜೀವನದ ಹಿರಿಮೆಯನ್ನು ತಿಳಿಯದವರು ತಮ್ಮ ಅಮೂಲ್ಯವಾದ ಆತ್ಮವನ್ನು ಕಳೆದುಕೊಂಡು ನರಕಕ್ಕೆ ಹೋಗುತ್ತಿದ್ದಾರೆ. ಕಷ್ಟದಲ್ಲಿ, ನಷ್ಟದಲ್ಲಿದ್ದಾಗ ಅವರನ್ನು ತಟ್ಟಿ ಸಾಂತ್ವನದ ಮಾತುಗಳನ್ನಾಡಿದರೆ, ಅವರನ್ನು ಮೇಲೆತ್ತಲು ಜೀವನದಲ್ಲಿ ಯಾರಾದರೊಬ್ಬರು ಇದ್ದರೆ ಅವರಿಗೆ ಈ ದುರ್ಘಟನೆಗಳು ಸಂಭವಿಸುವುದಿಲ್ಲ. ಅವರಿಗೆ ನಮ್ಮನ್ನು ವಿಚಾರಿಸಲು ಯಾರಾದರೂ ಇದ್ದಾರೆ ಎಂದು ತಿಳಿದಿದ್ದರೆ ಇಂತಹ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ.

 

ಆತ್ಮಹತ್ಯೆ ಮಾಡಿಕೊಳ್ಳುವಂತಹ ಮನಸ್ಥಿತಿಯಲ್ಲಿರುವವರಿಗೆ ಯೇಸುವನ್ನು ಪರಿಚಯಿಸಲು ಜನರಿಲ್ಲ. ಅದಕ್ಕಾಗಿಯೇ ಅವರು ಸಾಯುತ್ತಿದ್ದಾರೆ. ಇನ್ನು ಮುಂದೆಯಾದರೂ ಯಾರೂ ಈ ತಪ್ಪು ನಿರ್ಧಾರ ತೆಗೆದುಕೊಳ್ಳದಂತೆ ನಮ್ಮ ರಕ್ಷಕನಾದ ಯೇಸುವನ್ನು ಪರಿಚಯಿಸೋಣ. ಇದು ನಮ್ಮ ಕರ್ತವ್ಯವಾಗಿದೆ.

 

ನನ್ನ ಜೀವನದಲ್ಲಿ ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಎರಡು ಚಿನ್ನದ ಪದಕಗಳನ್ನು ತೆಗೆದುಕೊಳ್ಳಲು ದೇವರು ನನಗೆ ಸಹಾಯ ಮಾಡಿದರು. ಆದರೆ, ಉನ್ನತ ವ್ಯಾಸಂಗಕ್ಕೆ ಹೋದಾಗ ಓದಲು ಸಾಧ್ಯವಾಗದೆ ಫೇಲ್ ಆಗಿ ಬಿಡುತ್ತೇನೋ ಎಂಬ ಪರಿಸ್ಥಿತಿಯೂ ಇತ್ತು. ಸೋಲು ಎಂದರೇನೆ ಏನೆಂದು ತಿಳಿಯದಿದ್ದ ನಾನು, ಅದನ್ನು ಎದುರಿಸಲು ಹೆದರಿದೆನು. ಸೋತು ಬಿಟ್ಟರೆ ಅದರಿಂದ ಉಂಟಾಗುವ ನಿಂದೆಯನ್ನು ಅಂಗೀಕರಿಸಲೂ ಸಹ ಭಯ, ಈ ಭಯವು ನನ್ನನ್ನು ಸಾಯಲು ಪ್ರೇರೇಪಿಸಿತು. ಈ ಪರಿಸ್ಥಿತಿಯಲ್ಲೇ ನಾನು ಯೇಸುವನ್ನು ನನ್ನ ಸ್ವಂತ ರಕ್ಷಕನನ್ನಾಗಿ ಸ್ವೀಕರಿಸಿದೆ. ಸೋಲು ಮತ್ತು ನಿಂದೆಯನ್ನು ಅಂಗೀಕರಿಸುವ ಮನಸ್ಸನ್ನು ಕೊಟ್ಟರು. ಸೋಲನ್ನು ಜೀವನದ ಅನುಭವ ಪಾಠವಾಗಿ ಸ್ವೀಕರಿಸುವಂತೆ ಮಾಡಿದರು. ನಂತರ ಬಿಡುಗಡೆ ಹೊಂದಿ ದೇವರನ್ನು ಸಂಪೂರ್ಣವಾಗಿ ಹಿಡಿದುಕೊಂಡೆ. ನನ್ನ ಆಸೆಗಳು ಮತ್ತು ಕನಸುಗಳು ಮುಗಿದು ಹೋಗಲಿಲ್ಲ. ದೇವರು ನನ್ನನ್ನು ಮೇಲಕ್ಕೆತ್ತಿ ನೇರವಾಗಿ ಬ್ಯಾಂಕ್‌ನಲ್ಲಿ ಅಧಿಕಾರಿ (Probatioary officer) ಹುದ್ದೆಯಲ್ಲಿ ಕೂರುವಂತೆ ಮಾಡಿದರು. 35 ವರ್ಷಗಳು ಬ್ಯಾಂಕ್ ನಲ್ಲಿ ಕೆಲಸವನ್ನು ಪೂರ್ಣಗೊಳಿಸಲು ಕೃಪೆ ತೋರಿಸಿದರು. ನಾನು ಯೇಸುವನ್ನು ಸ್ವೀಕರಿಸದೇ ಇದ್ದಿದ್ದರೆ, ನನ್ನ ದೇಹ ಮತ್ತು ಆತ್ಮವು ನಾಶವಾಗಿ ನರಕಕ್ಕೆ ಹೋಗುತ್ತಿತ್ತು. ಆದರೆ ಅದೆಲ್ಲವನ್ನೂ ಬದಲಿಸಿ ನನ್ನ ಜೀವನವನ್ನು ಆಶೀರ್ವದಿಸಿದವರು ಯೇಸು ಒಬ್ಬರೇ.

 

ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ಆತ್ಮೀಯ ವಿದ್ಯಾರ್ಥಿಗಳೇ, ಸೋಲನ್ನು ಕಂಡು ಹೆದರಬೇಡಿರಿ; ಬೇಸರಗೊಳ್ಳಬೇಡಿರಿ, ನಮ್ಮ ಚಿಂತೆಗಳನ್ನು ಕಣ್ಣೀರನ್ನು ಮಾರ್ಪಡಿಸುವ ದೇವರ ಬಳಿ ನಿಮ್ಮ ಜೀವನವನ್ನು ಒಪ್ಪಿಸಿಕೊಡಿರಿ. ಆತನು ನಿಮ್ಮ ವಕ್ರವಾದ ಜೀವನವನ್ನು ನೇರಗೊಳಿಸುತ್ತಾರೆ. ಆಮೆನ್.

- Mrs. ಭುವನ ಧನಪಾಲನ್

 

ಪ್ರಾರ್ಥನಾ ಅಂಶ:

ಈ ಹೊಸ ತಿಂಗಳಲ್ಲಿ ಸೇವೆಯನ್ನು ವಿಸ್ತರಿಸುವಂತೆ, ದೇವರು ಕೊಟ್ಟ ದರ್ಶನಗಳು ತಡೆಯಿಲ್ಲದೆ ನೆರವೇರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin