Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.02.2021
Share:

By Village Missionary Movement

Tuesday, 02-Feb-2021

ಧೈನಂದಿನ ಧ್ಯಾನ(Kannada) – 02.02.2021

ಯಾರು ಕ್ರೈಸ್ತರು?

"ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಮೊದಲು ಬಂತು" - ಅಪೊಸ್ತಲ 11:26

ಹೊರದೇಶಗಳಲ್ಲಿ ಯೇಸುವನ್ನು ಸ್ವಂತ ರಕ್ಷಕನಾಗಿ ಅಂಗೀಕರಿಸಿಕೊಂಡವರನ್ನು ಕ್ರೈಸ್ತರು ಎಂದು ಕರೆಯುತ್ತಾರೆ. ನಮ್ಮ ದೇಶದಲ್ಲಿ ಕ್ರೈಸ್ತ ಕುಟುಂಬದಲ್ಲಿ ಹುಟ್ಟಿದ ಅನೇಕರು ತಮ್ಮನ್ನು ಕ್ರೈಸ್ತರು ಎಂದು ಕರೆದುಕೊಳ್ಳುವುದುಂಟು. ಆದರೆ ಸತ್ಯವೇದವು, ಕ್ರಿಸ್ತನ ಶಿಷ್ಯರೇ ಕ್ರೈಸ್ತರು ಎಂದು ಸ್ಪಷ್ಟವಾಗಿ ತಿಳಿಸುತ್ತದೆ. ಹಾಗಾದರೆ "ಶಿಷ್ಯರು ಯಾರು" ಎಂದು ತಿಳಿದು ಕೊಂಡರೇನೆ "ಕ್ರೈಸ್ತರು"ಎಂದು ಕರೆಯಲ್ಪಡುವ ಅರ್ಹತೆ ಯಾರಿಗಿದೆ ಎಂಬುದನ್ನೂ ತಿಳಿದುಕೊಳ್ಳಲು ಸಾಧ್ಯ.

ಒಬ್ಬರಲ್ಲೊಬ್ಬರು ಪ್ರೀತಿಯಿಂದ ಇರುವವರು (ಯೋಹಾನ.13:35), ಬಹಳ ಫಲಗಳನ್ನು ಕೊಡುವವರು (ಯೋಹಾನ15:8) ಇವರನ್ನೇ ಯೇಸುಕ್ರಿಸ್ತನು ಶಿಷ್ಯರೆಂದು ತಿಳಿಸಿದ್ದಾರೆ. ತನಗಿರುವ ಎಲ್ಲವನ್ನು ತ್ಯಜಿಸದೆ ಹೋದರೆ ಒಬ್ಬನೂ ತನಗೆ ಶಿಷ್ಯನಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು. ಅಂದರೆ ತನಗೆ ಶಿಷ್ಯನಾಗಿರುವವನಿಗೆ ಅವರಂತೆ ತನ್ನನ್ನು ನಿರಾಕರಿಸುವವನು, ನಿಸ್ವಾರ್ಥತೆ, ಪಾಡುಗಳನ್ನು ಸಹಿಸುವಂತಹ ಗುಣಲಕ್ಷಣಗಳು ಇರಬೇಕೆಂದು ಹೇಳುತ್ತಿದ್ದಾರೆ.

ಕ್ರೈಸ್ತ ಕುಟುಂಬದಲ್ಲಿ ಹುಟ್ಟುವುದರಿಂದ ನಾವು ಕ್ರೈಸ್ತರಲ್ಲ. ಬಿಸ್ಕೆಟ್ ಡಬ್ಬದಲ್ಲಿ ಇಲಿ ಮರಿ ಹಾಕಿದರೆ, ಇಲಿ ಮರಿ ಬಿಸ್ಕೆಟ್ ಆಗಲು ಸಾಧ್ಯವಾ? ಇಲ್ಲ... ಎಂದೋ ಒಂದು ದಿನ ಮಾನಸಾಂತರ ಹೊಂದಿ, ಪಾಪಗಳನ್ನು ಹರಿಕೆ ಮಾಡಿ, ಯೇಸುವನ್ನು ಸ್ವಂತ ರಕ್ಷಕನಾಗಿ ಅಂಗೀಕರಿಸಿದ್ದೇವೆ ಎಂಬ ತೃಪ್ತಿಯಲ್ಲಿ ಇದ್ದುಬಿಡಲು ಸಾಧ್ಯವಿಲ್ಲ. ಮಾನಸಾಂತರಕ್ಕೆ ತಕ್ಕ ಫಲಗಳನ್ನು ಅನುದಿನವು ಕೊಡಬೇಕು. ಆತ್ಮ ಫಲ, ಸಕಲ ಸತ್ಕಾರ್ಯಗಳಲ್ಲಿ, ನೀತಿಯಲ್ಲಿ, ನಂಬಿಗಸ್ತಿಕೆಯಲ್ಲಿ ಕಾಣಲ್ಪಡುತ್ತದೆ. ಫಲವಿಲ್ಲದ ಅಂಧಕಾರ ಕ್ರಿಯೆಗಳಿಗೆ ಒಳಗಾಗದಂತೆ ಅವುಗಳನ್ನು ಖಂಡಿಸಬೇಕು. ಫಲವಿಲ್ಲದವರಾಗಿರದಂತೆ ಸತ್ಕಾರ್ಯಗಳನ್ನು ಮಾಡಲು ಅಭ್ಯಾಸ ಮಾಡಿಕೊಳ್ಳಬೇಕು. ದೇವರಿಗಾಗಿ ಫಲಕೊಡಲು ಸಮರ್ಪಿಸಿ ಕೊಳ್ಳುವಾಗ, ಪರಿಶುದ್ಧಾತ್ಮನು, ದೇವರ ವಾಕ್ಯಗಳ ಮುಖಾಂತರ, ಶಿಕ್ಷಿಸಿ ಉಪಯೋಗಿಸಿ ಅಧಿಕವಾದ ಫಲಗಳನ್ನು ಕೊಡುವಂತೆ ನಮ್ಮನ್ನು ಶುದ್ಧೀಕರಿಸುತ್ತಾರೆ. ಯೇಸುವಿಲ್ಲದೆ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ದ್ರಾಕ್ಷಿ ಗಿಡವಾಗಿರುವ ಯೇಸುವೊಂದಿಗೆ ನಾವು ಬಳ್ಳಿಗಳಾಗಿ ಅಂಟಿಕೊಂಡು, ಅವರೊಂದಿಗಿರುವ ಐಕ್ಯತೆಯಲ್ಲಿ ನಾವು ನೆಲೆಗೊಂಡಿದ್ದರೇನೆ ಬಹಳ ಫಲಗಳನ್ನು ಕೊಡುತ್ತೇವೆ.

ಹೀಗೆ ದೇವರ ಆಲೋಚನೆಯಂತೆ ಯೇಸುವಿನ ಶಿಷ್ಯರಾಗಿ ಬಾಳುವವರೇ ಕ್ರೈಸ್ತರು. ನಾವು ಸತ್ಯವೇದವು ಹೇಳುವ ಕ್ರೈಸ್ತರಾಗಿ ಜೀವಿಸುತ್ತಿದ್ದೇವಾ ಆಲೋಚಿಸೋಣ.
-    Mrs. ಗೀತಾ ರಿಚರ್ಡ್


ಪ್ರಾರ್ಥನಾ ಅಂಶ:-
ಸಾವಿರ ಜನರು ಕೂಡಿ ಆರಾಧಿಸಲು ಕಟ್ಟುತ್ತಿರುವ "ಪ್ರಾರ್ಥನಾ ಗುಡಾರ" ಕಟ್ಟಡದ ಕೆಲಸಗಳ ಅವಶ್ಯಕತೆಗಳು ಪೂರೈಸಲ್ಪಡಲು ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş