By Village Missionary Movement
Friday, 01-Jul-2022ಧೈನಂದಿನ ಧ್ಯಾನ(Kannada) – 02.07.2022
ನ್ಯಾಯ ಮಾಡುವಂತಹ ಕರ್ತನು
“...ಭೂಮಿಯ ಮೇಲೆ ನೀತಿವಂತರು ಪ್ರತಿಫಲವನ್ನು ಹೊಂದುವರು; ದುಷ್ಟನೂ ಪಾಪಿಯೂ ಎಷ್ಟೋ ಹೆಚ್ಚಾಗಿ ಪ್ರತಿಫಲ ವನ್ನು ಹೊಂದುತ್ತಾರೆ" - ಜ್ಞಾನೋಕ್ತಿಗಳು 11.31
ಮನುನೀತಿ ಚೋಳ ಎಂಬ ರಾಜನ ಬಗ್ಗೆ ನಮಗೆ ತಿಳಿದಿದೆ. ಅವರ ಈ ಹೆಸರಿಗೆ ಕಾರಣವಾಗಿದ್ದದ್ದು ನ್ಯಾಯ ಮಾಡುವಂತಹ ಗುಣ. ಒಮ್ಮೆ ಅವರ ರಥವನ್ನು ತನ್ನ ಮಗ ಓಡಿಸುತ್ತಿದ್ದಾಗ, ಅವನು ಅದನ್ನು ಅನಿರೀಕ್ಷಿತವಾಗಿ ಕರುವಿನ ಮೇಲೆ ಏರಿಸಿದನು. ಆಗ ತಾಯಿ ಹಸು ಕಣ್ಣೀರು ಹಾಕಿತು. ರಾಜನು ಸ್ವಲ್ಪವೂ ಚಿಂತಿಸದೆ, ತನ್ನ ಮಗನೆಂದೂ ಯೋಚಿಸದೆ ರಥದ ಚಕ್ರದ ಕೆಳಗೆ ಮಲಗುವಂತೆ ಹೇಳಿ ಅವನ ಮೇಲೆ ರಥವನ್ನು ಏರಿಸಿ ಕೊಂದನು. ಈ ಕಾರಣದಿಂದಲೇ "ಮನು" ಎಂಬ ಅವರ ಹೆಸರು ತಮಿಳು ಇತಿಹಾಸದಲ್ಲಿ "ಮನುನೀತಿ" ಎಂದು ಬರೆಯಲ್ಪಟ್ಟಿತು.
2 ತಿಮೊಥಿ. 4:8 ರಲ್ಲಿ ಪೌಲನು ಕರ್ತನನ್ನು ನೀತಿಯುಳ್ಳ ನ್ಯಾಯಾಧಿಪತಿ ಎಂದು ಉಲ್ಲೇಖಿಸಿದ್ದಾರೆ. ತೀತ 1:3 ರಲ್ಲಿ ಅವರು "ಸುಳ್ಳಾಡದ ದೇವರು" ಎಂದು ಸತ್ಯವೇದವು ಹೇಳುತ್ತದೆ. ಲೂಕ 16 ನೇ ಅಧ್ಯಾಯದಲ್ಲಿ, ಲಾಜರನು ಮತ್ತು ಐಶ್ವರ್ಯವಂತನಾದ ಒಬ್ಬ ಮನುಷ್ಯನ ಬಗ್ಗೆ ನೋಡಬಹುದು. ಅದರಲ್ಲಿ ಲಾಜರನು ಲೋಕದಲ್ಲಿ ಅತ್ಯಂತ ದರಿದ್ರನಾಗಿಯೂ, ಹುಣ್ಣುಗಳಿಂದ ತುಂಬಿರುವ ದುರ್ಬಲ ದೇಹವಾಗಿಯೂ ಇದ್ದಾರೆ. ಆದರೆ ಐಶ್ವರ್ಯವಂತನು ಯಾವ ಸುಖಗಳಿಗೂ ಕೊರತೆಯಿಲ್ಲದವರಾಗಿದ್ದಾರೆ. ಆದರೆ ಇವರಿಬ್ಬರೂ ಸತ್ತಾಗ, ಲಾಜರನು ಅಬ್ರಹಾಮನ ಎದೆಗೆ ಒರಗಿಕೊಂಡನು, ಐಶ್ವರ್ಯವಂತನು ನಿತ್ಯಾಗ್ನಿಗೆ ಆಹಾರವಾಗಿ ಮಾರ್ಪಡುತ್ತಾರೆ ಲೂಕ 16:25 ರಲ್ಲಿ ಅಬ್ರಹಾಮನು ಐಶ್ವರ್ಯವಂತನನ್ನು ನೋಡಿ" ಜೀವಂತವಾಗಿರುವ ದಿನಗಳಲ್ಲಿ ನೀನು ಒಳ್ಳೆಯದನ್ನೇ ಅನುಭವಿಸಿದೆ. ಈಗ ದುಃಖಿಸುತ್ತಿದ್ದೀಯ" ಎಂದು "ಲಾಜರನು ಕೆಟ್ಟದ್ದನ್ನು ದಾರಿದ್ರ್ಯವನ್ನು ಅನುಭವಿಸಿದನು, ಈಗ ಸಂತೈಸಲ್ಪಡುತ್ತಿದ್ದಾನೆ". ಎಂದೂ ಹೇಳಿದರು. ಹೌದು ನಮ್ಮ ದೇವರು ನೀತಿಯುಳ್ಳ ನ್ಯಾಯಾಧಿಪತಿ.
ಹೌದು, ಪ್ರಿಯರೇ, ಅವರು ನೀತಿಯುಳ್ಳ ನ್ಯಾಯಾಧಿಪತಿ. ಆತನ ಬಳಿ ಅನ್ಯಾಯವಿಲ್ಲ. ಪ್ರಸಂಗಿ 11: 9 ರಲ್ಲಿ ಹೇಳಿರುವಂತೆ, “ನಮಗೆ ಇಷ್ಟಬಂದಂತೆ ಮಾಡುವ ಹಕ್ಕು ನಮಗಿದೆ. ಆದರೆ ಅವೆಲ್ಲವುಗಳ ನಿಮಿತ್ತವಾಗಿ ನ್ಯಾಯ ವಿಚಾರಣೆಗೆ ಒಳಗಾಗುತ್ತೇವೆ. ಒಂದು ವೇಳೆ ಲೋಕದ ಕಣ್ಣುಗಳಿಗೆ ಮರೆಯಾಗಿ ನಾವು ಆಂತರಿಕವಾಗಿ ಪಾಪ ಮಾಡಬಹುದು. ಯಾರಿಗೆ ಗೊತ್ತಾಗುತ್ತದೆ ಎಂದು ಸಹ ಯೋಚಿಸಬಹುದು. ನಾವು ಮಾಡುವುದು ಮಾತ್ರವೇ ಸರಿ ಎಂದು ಕೂಡ ನಿರ್ಧರಿಸಬಹುದು. ಆದರೆ ನ್ಯಾಯ ತೀರ್ಪಿನ ದಿನದಂದು ಕಲ್ಲುಗಳು ಮತ್ತು ಗೋಡೆಗಳು ಸಹ ನಮ್ಮ ವಿರುದ್ಧ ಸಾಕ್ಷಿ ಹೇಳುತ್ತವೆ. ದೇವರು ನೀತಿಯಾಗಿ ನ್ಯಾಯ ಮಾಡುತ್ತಾರೆ. ಕೃಪೆಯ ಕಾಲ ಮುಗಿಯುವ ದಿನಗಳಲ್ಲಿ, ಮನುನೀತಿ ಚೋಳನು ತನ್ನ ಮಗನೆಂದೂ ನೋಡದ ಹಾಗೆ, ದೇವರು ಕೂಡ ಪ್ರತಿಯೊಬ್ಬರಿಗೂ ಪಕ್ಷಪಾತವಿಲ್ಲದೆ ನ್ಯಾಯ ತೀರಿಸುತ್ತಾರೆ. ಆದ್ದರಿಂದ ನಾವು ಎಚ್ಚರಿಕೆಯಿಂದ ನಡೆಯೋಣ, ನಿತ್ಯಜೀವವನ್ನು ಸ್ವತಂತ್ರಿಸಿಕೊಳ್ಳಲು ಶ್ರಮಿಸೋಣ.
- Mrs. ಸ್ಟೆಫಿ ರಾಕ್ಸನ್
ಪ್ರಾರ್ಥನಾ ಅಂಶ:
ಈರೋಡ್ ಕಾರ್ಯಸ್ಥಳದಲ್ಲಿ ಇಂದು ನಡೆಯುವಂತಹ ಉಜ್ಜೀವನವನ್ನು ಬಯಸುವವರ ಶಿಬಿರದಲ್ಲಿ ದೇವರ ಶಕ್ತಿ ಪ್ರಕಟವಾಗುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482