Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.06.2022
Share:

By Village Missionary Movement

Wednesday, 29-Jun-2022

ಧೈನಂದಿನ ಧ್ಯಾನ(Kannada) – 29.06.2022

 

ಉಚಿತ ಉಚಿತ

 

“ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು" - ಮತ್ತಾಯ 6:33

 

ಸುಗಿ, ಅವಳ ಸ್ನೇಹಿತೆ ರಾಣಿಯ ಮನೆಗೆ ಶುಂಠಿ ಚಹಾ ಕುಡಿಯಲು ಹೋಗುವುದು ಅಭ್ಯಾಸ. ಹಾಗೆ ಒಂದು ದಿನ ಹೋದಾಗ ಸುಗಿ ಸ್ಟೀಲ್ ಲೋಟದ ಬದಲು ಪಿಂಗಾಣಿ ಕಪ್ ನಲ್ಲಿ ತಂದಳು. ಆಸೆಯಾಗಿ ತೆಗೆದುಕೊಂಡು ಕುಡಿದಳು, ಅದು ಟೀ ಅಲ್ಲ ಕಾಫಿ! ಶುಂಠಿ ಚಹಾವನ್ನು ಏಕೆ ಮಾಡಲಿಲ್ಲ? ಎಂದು ಕೇಳಿದಾಗ ಅವಳು, "ಸನ್‌ರೈಸ್ ತೆಗೆದುಕೊಂಡರೆ, ಅದರೊಂದಿಗೆ ಉಚಿತವಾಗಿ ಒಂದು ಕಪ್ ನೀಡಲಾಗುತ್ತದೆ ಎಂದು ಹೇಳಿದ ಕೂಡಲೇ, ನಾನು ಎರಡು ಸನ್‌ರೈಸ್ ಪಾಕೆಟ್‌ಗಳನ್ನು ತೆಗೆದುಕೊಂಡು ಬಂದೆ. ಹಾಗಾಗಿ ಟೀ ಪೌಡರ್ ಇಲ್ಲ. ನಾವೆಲ್ಲರೂ ಕಾಫಿಗೆ ಬದಲಾಗಿಬಿಟ್ಟೋ" ಎಂದಳು. ಗೃಹಿಣಿಯರಿಗೆ ಉಚಿತವೆಂದರೆ ಸಂತೋಷ.

 

ಸತ್ಯವೇದದಲ್ಲಿಯೂ ಸಹ, ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡುವಾಗ, ಆಹಾರ, ಬಟ್ಟೆ ಮತ್ತು ಜೀವನಕ್ಕೆ ಬೇಕಾದ ಎಲ್ಲಾ ಕಾರ್ಯಗಳನ್ನೂ ಅಂದರೆ ಉಚಿತವಾಗಿಯೇ ಪಡೆದುಕೊಳ್ಳುತ್ತೇವೆ. ನಾವು ದುಡಿಯುವುದು ಈ ಒಂದು ಗೇಣುದ್ದ ಹೊಟ್ಟೆಗಾಗಿಯೇ ಎಂದು ಹೇಳುವುದನ್ನು ಕೇಳಿರುತ್ತೇವೆ. ಜೀವನಕ್ಕೆ ಇದೆಲ್ಲವೂ ಉಚಿತ! ಯಾವಾಗ? ನಾವು ದೇವರನ್ನು ಮೊದಲು ಹುಡುಕುವಾಗ, ಅಂದರೆ, ದೇವರಿಗೆ ಮೊದಲ ಸ್ಥಾನವನ್ನು ನೀಡಿ, ಆತನ ರಾಜ್ಯ ಮತ್ತು ನೀತಿಯ ವಿಷಯಗಳನ್ನು ಹುಡುಕುವಾಗ! ಈ ಒತ್ತಡದ ಜಗತ್ತಿನಲ್ಲಿ, ಉಚಿತವನ್ನು ಮಾತ್ರವೇ ಬಯಸುತ್ತೇವೆ. ಮುಖ್ಯವಾದದ್ದೊಂದನ್ನು ಮಾಡಲಿಲ್ಲ. ನಮ್ಮ ಜೀವನದಲ್ಲಿ ಕಾರ್ಯಗಳು ಹೇಗಿದ್ದರೂ, ಅರ್ಧ ಗಂಟೆಯಾದರೂ ಅವರ ಪಾದದಲ್ಲಿ ಮೊದಲು ಕಳೆದರೆ, ಆ ದಿನದ ಉಳಿದ 23 ½ ಗಂಟೆಗಳು ಪೂರ್ತಿ ಯಾವುದೇ ತೊಂದರೆಯಿಲ್ಲದೆ ಮುಂದುವರೆಯುತ್ತದೆ ಮತ್ತು ಆನಂದದಾಯಕವಾಗಿರುತ್ತದೆ. ಅಗತ್ಯವಾದದ್ದನ್ನೂ ಸಹ ಕೊಡಲಾಗುವುದು ಎಂದು ಸತ್ಯವೇದವು ಹೇಳುತ್ತಿದೆ. ನಿಮಗೆ ಬೇಕಾದದ್ದೂ ಸಹ ದೊರೆತರೆ ಸಂತೋಷ ತಾನೇ!

 

ಪ್ರಿಯರೇ! ನೀವು ಏನನ್ನು ಹುಡುಕುತ್ತಿದ್ದೀರಿ, ಉಚಿತವನ್ನಾ? ದೇವರ ರಾಜ್ಯವನ್ನಾ? ಸಂಪಾದಿಸಲು ಅಡುಗೆ ಮಾಡಲು ಶಾಪಿಂಗ್‌ ಗೆ ಹೋಗಲು ಇದಕ್ಕೆಲ್ಲಾ ಸಮಯ ಕಳೆಯುವ ನಾವು ದೇವರ ಪಾದವನ್ನು ಹುಡುಕಲು ಸಮಯವಿಲ್ಲ ಎನ್ನುತ್ತೇವೆ. ಮಕ್ಕಳು ಗಂಡ ಸ್ನೇಹಿತರು ಸಂಬಂಧಿಕರು ಎಂದು ಎಲ್ಲರೊಂದಿಗೆ ಕಾಲ ಕಳೆಯುತ್ತೇವೆ. ಆದರೆ ನಾವು ಕರ್ತನನ್ನು ಮರೆತು ಬಿಡುತ್ತೇವೆ. ಆಮೇಲೆ ಅಯ್ಯೋ, ಜೀವನ ತುಂಬಾ ಕಷ್ಟವಾಗಿದೆ. ನಿರಾಶೆ ಮತ್ತು ಸೋಲು ಎಂದು ದುಃಖಿಸುತ್ತೇವೆ. ದೇವರೊಂದಿಗೆ ಸಮಯ ಕಳೆಯುವಾಗ ಮತ್ತು ಹುಡುಕುವಾಗ, ಎಲ್ಲಾ ಮೂಲಭೂತ ಅವಶ್ಯಕತೆಗಳು ಉಚಿತ. ಜಗತ್ತು ಏನಾದರೂ ಉಚಿತ ಎಂದು ಹೇಳಿದಾಗ, ನಾವು ಅದರ ಕಡೆಗೆ ತಿರುಗುತ್ತೇವೆ. ಕಾಫಿ ಪುಡಿಗೆ ಕಪ್‌ಗಳು ಉಚಿತ ಎಂದು ಸುಗಿ ಹೇಳಿದಾಗ ಕಾಫಿಗೆ ಬದಲಾದ ಹಾಗೆ! ದೇವರು ಕೊಡುವ ಉಚಿತವನ್ನು ನಂಬಿ ನಮ್ಮನ್ನು ನಾವು ಬದಲಾಯಿಸಿಕೊಳ್ಳೋಣ. ನಮ್ಮ ಸತ್ಯವೇದವು ಹೇಳುವ ಉಚಿತವನ್ನು ಪಡೆಯದ ಹಾಗೆ ಸೈತಾನನೇ ನಮ್ಮನ್ನು ಬದಲಾಯಿಸುತ್ತಿದ್ದಾನೆ ನಂಬಬೇಡಿರಿ! ದೇವರ ಕಾರ್ಯಗಳಿಗೆ ಮೊದಲ ಸ್ಥಾನವನ್ನು ನೀಡಿ. ಉಚಿತವಾಗಿ ಪಡೆಯ ಬೇಕಾದವುಗಳಿಗೆ ಏಕೆ ಕಷ್ಟಪಡಬೇಕು?

- Mrs. ಅನ್ಬು ಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಪ್ರಾರ್ಥನಾ ಗುಡಾರದ ಕಾಮಗಾರಿ ಶೇ.75ರಷ್ಟು ಪೂರ್ಣಗೊಂಡಿದೆ. ಉಳಿದ ಕೆಲಸಗಳನ್ನು ಪೂರ್ಣಗೊಳಿಸಲು ಅಗತ್ಯತೆಗಳು ಪೂರೈಸಲ್ಪಟ್ಟು ದೇವರ ನಾಮ ಮಹಿಮೆಗಾಗಿ ಶೀಘ್ರದಲ್ಲೇ ಪ್ರತಿಷ್ಟೆ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş