Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.06.2022
Share:

By Village Missionary Movement

Monday, 27-Jun-2022

ಧೈನಂದಿನ ಧ್ಯಾನ(Kannada) – 28.06.2022

 

ಶತ್ರುಗಳನ್ನು ಪ್ರೀತಿಸಿರಿ

 

“...ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಉಪಕಾರಮಾಡಿರಿ" - ಲೂಕ 6:27

 

ಆಫ್ರಿಕಾದ ಅತ್ಯಂತ ಹಿಂದುಳಿದ "ಯಾಕೋ" ಬುಡಕಟ್ಟು ಜನಾಂಗದವರಲ್ಲಿ ಒಬ್ಬರಾದ ಒಕಾಂಚಿ, ಮರಕಡಿಯುವ ಕಾರ್ಮಿಕ, ಯೇಸುಕ್ರಿಸ್ತನನ್ನು ಅಂಗೀಕರಿಸಿಕೊಂಡವರು. ಅವರು ಕೆಲಸ ಮಾಡಿದ ಸ್ಥಳದಲ್ಲಿ, ಉನ್ನತ ಜಾತಿಯವನಾಗಿದ್ದ ಮಾಲೀಕ ಮನ್ಸಿಜೋ, "ಯಾಕೋ" ಜನಾಂಗವನ್ನು ದ್ವೇಷಿಸಿದ್ದರಿಂದ ಓಕಾಂಚಿಯನ್ನು ಕೆಲಸದಿಂದ ತೆಗೆದುಹಾಕಲು ಕಾರಣವನ್ನು ಹುಡುಕುತ್ತಿದ್ದನು. ಜನಾಂಗದ ಮೇಲಿದ್ದ ದ್ವೇಷದಿಂದ ಇವರ ಮೇಲೆ ಕೊರತೆ ಹೇಳಿ ಕೆಲಸಕ್ಕೆ ಬರಬೇಡ ಎಂದು ಹೇಳಿಬಿಟ್ಟರು. ಇವರು ಮನನೊಂದು ಮಾತಾಡಿದರೂ, ಮಾಲೀಕನ ಹೃದಯ ಕರಗದೆ ಕಲ್ಲಾಗಿತ್ತು. ಆಗ ಹತ್ತಿರವಿದ್ದ ಒಂದು ದೊಡ್ಡ ಮರವನ್ನು ಹಲವರು ಸೇರಿ ಕಡಿಯುವುದನ್ನು ಕಂಡ ಒಕಾಂಚಿ, ಮೊದಲು ಮರದ ದೊಡ್ಡ ಕೊಂಬೆಯನ್ನು ಕತ್ತರಿಸಿ, ನಂತರ ಮರವನ್ನು ಕಡಿಯಬೇಕು. ಇಲ್ಲವಾದರೆ ಅದು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಹಾನಿಯನ್ನುಂಟು ಮಾಡುತ್ತದೆ ಎಂದು ಹೇಳಿದರು. ಆದರೆ ಇವರ ಮಾತನ್ನು ನಿರ್ಲಕ್ಷಿಸಿ ಮರವನ್ನು ಕಡಿಯುವುದನ್ನು ಮುಂದುವರೆಸಿದ ಸಮಯದಲ್ಲಿ, ದಿಢೀರೆಂದು ಮರ ಮುರಿದು ಪಕ್ಕದಲ್ಲಿದ್ದ ಗಾಡಿಗೆ ನೇರವಾಗಿ ಬೀಳುವುದನ್ನು ನೋಡಿ, ಒಂದು ಕ್ಷಣವೂ ತಡಮಾಡದೆ, ಅದರಲ್ಲಿದ್ದ ತನ್ನ ಮಾಲೀಕನನ್ನು ಎಳೆದು ನೆಲಕ್ಕುರುಳಿಸಿ ತಾನೂ ಸೇರಿ ಕೆಳಗೆ ಬಿದ್ದರು. 

 

ಎದ್ದಕೂಡಲೇ "ಯೇಸುವೇ ನಿಮಗೆ ಧನ್ಯವಾದ" ಎಂದು ಹೇಳುವುದನ್ನು ಗಮನಿಸಿದ ಮನ್ಸಿಜೋ ನ ಮನಸ್ಸಿನಲ್ಲಿ ಸಾವಿರ ಪ್ರಶ್ನೆಗಳು! “ಒಕಾಂಜಿ, ನೀನು ನನ್ನನ್ನು ಹೇಗೆ ಉಳಿಸಲು ಸಾಧ್ಯವಾಯಿತು? ನಾನು ನಿನ್ನನ್ನು ಸಂಪೂರ್ಣವಾಗಿ ದ್ವೇಷಿಸುತ್ತಿದ್ದೆನು ಮತ್ತು ಕಿರುಕುಳ ನೀಡಿದೆನು, ಆದರೆ ನೀನು ಅದನ್ನೂ ಲೆಕ್ಕಿಸದೆ ನನಗೆ ಸಹಾಯ ಮಾಡಿದೆಯಲ್ಲಾ" ಎಂದು ಮನ್ಸಿಜೋ ಹೇಳಿದರು. ಯೇಸುಕ್ರಿಸ್ತನನ್ನು ನಾನು ಆರಾಧಿಸುವುದರಿಂದ ಹಾಗೆ ಮಾಡಲು ಸಾಧ್ಯವಾಯಿತು ಎಂದು ಹೇಳಿದ ಒಕಾಂಜಿಯನ್ನು ನೋಡಿ ಕಣ್ಣೀರು ಸುರಿಸಿ, "ನನ್ನನ್ನು ಕ್ಷಮಿಸಿಬಿಡು, ನಾನೂ ನಿನ್ನ ರಕ್ಷಕನ ಬಗ್ಗೆ ತಿಳಿದುಕೊಳ್ಳಬೇಕು" ಎಂದು ಹೇಳಿದರು.

 

ಯೇಸುಕ್ರಿಸ್ತನು, ತನ್ನನ್ನು ಬಂಧಿಸಲು ಬಂದವನ ಕಿವಿಯನ್ನು ಪೇತ್ರನು ಕತ್ತರಿಸಿದಾಗ, ಮನಮರುಗಿ ಮತ್ತೆ ಅವನ ಕಿವಿಯನ್ನು ಅಂಟಿಸಿ ಅದ್ಭುತ ಮಾಡಿದರಲ್ಲಾ! ತನ್ನನ್ನು ಶಿಲುಬೆಗೇರಿಸಿದವರನ್ನು ಶಪಿಸದೆ, ತಾನೂ ಕ್ಷಮಿಸಿ ತಂದೆಯನ್ನೂ ಕ್ಷಮಿಸುವಂತೆ ಕೇಳಿಕೊಂಡರಲ್ಲಾ!  

 

ಪ್ರಿಯರೇ! “ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿ; ನಿಮ್ಮನ್ನು ದ್ವೇಷಿಸುವವರಿಗೆ ಒಳ್ಳೆಯದನ್ನು ಮಾಡಿರಿ” ಎಂದು ಯೇಸುಕ್ರಿಸ್ತನು ಹೇಳಿದರು. ಇದನ್ನು ಮಾಡುವುದು ಕಷ್ಟವಾಗಿದ್ದರೂ, ಯೇಸು ಕ್ರಿಸ್ತನು ನಮ್ಮಲ್ಲಿದ್ದರೆ ನಾವು ಖಂಡಿತವಾಗಿಯೂ ಅದನ್ನು ಮಾಡಬಹುದು. ನಾವು ಒಳ್ಳೆಯದನ್ನು ಮಾಡಿ, ಇತರರು ನಮ್ಮನ್ನು ಶಪಿಸಿದರೆ ಖಂಡಿತವಾಗಿಯೂ ನಮಗೆ ಕೋಪ ಬರುತ್ತದೆ. ಆದರೆ ಕರ್ತನ ಪ್ರೀತಿ ನಮ್ಮ ಹೃದಯದಲ್ಲಿದ್ದರೆ ಅವರನ್ನೂ ಆಶೀರ್ವದಿಸಲು ಸಾಧ್ಯವಾಗುತ್ತದೆ!

- Bro. ಹನೀಸ್ ಸಮುವೇಲ್

 

ಪ್ರಾರ್ಥನಾ ಅಂಶ:

7000 ಸೇವಕರ ಮೂಲಕ 1 ಲಕ್ಷ ಹಳ್ಳಿಗಳನ್ನು ಭೇಟಿಮಾಡಲು ಮಾಡುತ್ತಿರುವ ಎಲ್ಲಾ ಪ್ರಯತ್ನಗಳಲ್ಲಿ ದೇವರ ಹಸ್ತವು ಜೊತೆ ಇರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş