By Village Missionary Movement
Sunday, 26-Jun-2022ಧೈನಂದಿನ ಧ್ಯಾನ(Kannada) – 27.06.2022
Holy ನೇ Jolly
“...ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು" - ಯಾಜಕಕಾಂಡ 11:45
ನನ್ನ ಪ್ರೀತಿಯ ಸಹೋದರಿ, ಈ ಕತ್ತಲೆಯ ಜಗತ್ತಿನಲ್ಲಿ ನೀವು ಪರಿಶುದ್ಧವಾಗಿ ಬದುಕಲು ಸಾಧ್ಯ ಎಂದು ನೀವು ಭಾವಿಸುತ್ತೀರಾ? ಖಂಡಿತ ಬದುಕಬಹುದು! "ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು" ಎಂದು ಕರ್ತನು ಹೇಳುತ್ತಿದ್ದಾರೆ.
ನನ್ನ ಕಾಲೇಜು ಓದು ಮುಗಿಸಿ Banglore-ಗೆ ಕೆಲಸಕ್ಕೆ ಹೋದಾಗ, ಅಪ್ಪ, ಅಮ್ಮ ನನ್ನ ಜೊತೆ ಇರಲಿಲ್ಲ, ನಾನು ಹೇಗಾದ್ರೂ ಇರಬಹುದಿತ್ತು. ನನಗೆ ಎಲ್ಲಾ ಸಿನಿಮಾ ಹಾಡುಗಳು ಬಾಯಿಪಾಠವಾಗಿ ಗೊತ್ತು. ಸಾರ್ವಕಾಲಿಕ ಹಾಡು ನನಗೆ ಗೊತ್ತಿತ್ತು. ಮಧ್ಯದಿಂದ ಒಂದು ಸಾಲು - ಹೇಳಿದರೆ, ಅದು ಏನು ಹಾಡು ಎಂದು ನಾನು ಹೇಳಿಬಿಡುತ್ತೇನೆ. ನನ್ನ ಸ್ನೇಹಿತರು ಆಶ್ಚರ್ಯಪಡುತ್ತಿದ್ದರು. ಕೆಲವೇ ದಿನಗಳಲ್ಲಿ ಕರ್ತನು ನನಗಾಗಿ ನೇಮಿಸಿದ್ದ ಸ್ನೇಹಿತರನ್ನು ಕೊಟ್ಟರು. ಸ್ವಲ್ಪ ಸ್ವಲ್ಪವಾಗಿ ನಾನು ಯೇಸಪ್ಪನ ಬಗ್ಗೆ ತಿಳಿದುಕೊಳ್ಳಲು ಪ್ರಾರಂಭಿಸಿದೆ, ಆ ನಂತರ ಸಿನಿಮಾ ಹಾಡು ಕೇಳುವುದು, ನೋಡುವುದು ತಪ್ಪಲ್ಲ ಎಂಬ ಕಲ್ಪನೆ ಬದಲಾಯಿತು! ಕರ್ತನನ್ನು ಸ್ತುತಿಸುವ ಬಾಯಿಯಿಂದ, ನಾನು ಸಿನಿಮಾ ಹಾಡುಗಳನ್ನು ಹಾಡಬಾರದು ಎಂಬ ಗ್ರಹಿಕೆಯನ್ನು ಪರಿಶುದ್ಧಾತ್ಮನು ಕೊಟ್ಟರು! ನನಗೇ ತಿಳಿಯದೆ ಹಾಡಿನ ಸಾಲುಗಳು ಸಂಪೂರ್ಣವಾಗಿ ಮರೆತುಹೋಯಿತು! ನಾನು ಯಾವ Effort-ಕೂಡ ತೆಗೆದುಕೊಳ್ಳಲಿಲ್ಲ, ನಾನು ಮನಃಪೂರ್ವಕವಾಗಿ ಒಪ್ಪಿಸಿಕೊಟ್ಟೆ; ಆ ನಂತರ ಸಿನಿಮಾ ಹಾಡುಗಳನ್ನು ಹಾಡಬೇಕೆಂಬ ಆಲೋಚನೆಯೇ ಬರಲಿಲ್ಲ. ನೀವು ಕೇಳಬಹುದು ಸಿನಿಮಾ ಹಾಡು ಏಕೆ ಹಾಡಬಾರದು? ಅದರಲ್ಲಿ ಏನು ತಪ್ಪಿದೆ? ಇದು ಕೇವಲ ಹಾಡು ಮಾತ್ರವೇ ತಾನೇ? ” ಎಂದು ಹೇಳಬಹುದು. ಹೇಳುತ್ತೇನೆ ಕೇಳಿ...
ದೇವರನ್ನು ಸ್ತುತಿಸುತ್ತಿದ್ದ ದೂತರಲ್ಲಿ, ಬಿದ್ದು ಹೋದ ದೂತನೇ "ಲೂಷಿಫರ್" ಅವನು Music-ನಲ್ಲಿ ಮಹಾನ್ ವ್ಯಕ್ತಿ. ಈ ಸಿನಿಮಾ Music ಅನ್ನು ಕೇಳುವಾಗ, ಸೈತಾನನು ನಮ್ಮೊಳಗೆ ಅನಗತ್ಯವಾದ ಕಾಮ, ಪ್ರೇಮ ಭಾವನೆಗಳನ್ನು ತರುತ್ತಾನೆ. ಇದು ಮೊದಲು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಪಾಪವು ಮೊದಲು ಗರ್ಭಧರಿಸುವ ಸ್ಥಳ ನಮ್ಮ Mind. ನಮಗೆ ಗೊತ್ತಿಲ್ಲದೇ ಆ ಪಾಪಕ್ಕೆ ನಾವು ದಾಸರಾಗಿಬಿಡುತ್ತೇವೆ. ಈ ಸಣ್ಣ ಪಾಪವೇ ಯೌವನಸ್ಥರನ್ನು "ಅಶ್ಲೀಲತೆಯ" ಮಹಾ ಪಾಪದಲ್ಲಿ ಮುಳುಗಿಸುತ್ತದೆ. ಯೌವನಸ್ಥರಾದ ನಿಮಗೆ ನಾನು ಹೇಳಬಯಸುವ ಚಿಕ್ಕ Practice ಏನೆಂದರೆ ಪ್ರಪಂಚದ ಪಾಪ ಸುಖಗಳನ್ನು ಅನುಭವಿಸುವುದಕ್ಕಿಂತ "Holy life ಮಾತ್ರವೇ Jolly life" ಎಂಬ ಸತ್ಯವನ್ನು ನಿಮ್ಮ ಹೃದಯದಲ್ಲಿ ಬರೆದುಕೊಳ್ಳಿರಿ. ಪರಿಶುದ್ಧವಾಗಿ ಬದುಕಲು ನೀವು ನಿಮ್ಮನ್ನು ಪರಿಶುದ್ಧ ದೇವರ ಕೈಗೆ ಒಪ್ಪಿಸಿದರೆ, ಕರ್ತನು ನಿಮ್ಮ ಜೀವನದಲ್ಲಿ ಸರಿಯಾದ ಸಮಯದಲ್ಲಿ ಉತ್ತಮವಾದ ಕೆಲಸಗಳನ್ನು ಮಾಡುತ್ತಾರೆ.
- Mrs. ದಿವ್ಯಾ ಬರ್ನಾರ್ಡ್
ಪ್ರಾರ್ಥನಾ ಅಂಶ:
ಮಾಧ್ಯಮ ಸೇವೆಗಳಿಗೆ ಅನುಭವವುಳ್ಳ ಸಮರ್ಪಣೆಯುಳ್ಳ ಸೇವಕರು ಲಭಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482