By Village Missionary Movement
Friday, 24-Jun-2022ಧೈನಂದಿನ ಧ್ಯಾನ(Kannada) – 25.06.2022
ನೀನು ದೂರದವನಲ್ಲ
"ಅವನು ಬುದ್ಧಿಯಿಂದ ಉತ್ತರಕೊಟ್ಟದ್ದನ್ನು ಯೇಸು ಕಂಡು - ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ ಅಂದನು..." - ಮಾರ್ಕನು 12:34
ಒಬ್ಬ ಧರ್ಮೋಪದೇಶಕನು ನಮ್ಮ ದೇವರ ಬಳಿ ಬಂದು, "ಧರ್ಮಶಾಸ್ತ್ರದಲ್ಲೆಲ್ಲಾ ಮುಖ್ಯವಾದ ಆಜ್ಞೆ ಯಾವುದು" ಎಂದು ಕೇಳಿದನು. "ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು" ಎಂಬುದೇ ಎಂದು ಉತ್ತರ ನೀಡಿದರು. ಅವರು ಹೇಳಿದ ಮಾತನ್ನು ಆ ವ್ಯಕ್ತಿ ನಿರಾಕರಿಸಲಿಲ್ಲ. (ಇದಕ್ಕಾಗಿಯೇ ಯೇಸು ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ ಎಂದು ಹೇಳಿದರು). ಯೇಸು ಕ್ರಿಸ್ತನು ಕೆಲವರನ್ನು ಖಂಡಿಸಿದ್ದನ್ನು ನಾವು ಸತ್ಯವೇದದಲ್ಲಿ ನೋಡುತ್ತೇವೆ. ಆದರೆ ಈ ಮನುಷ್ಯನನ್ನು ಖಂಡಿಸಲಿಲ್ಲ. ಆದ್ದರಿಂದ ಅವನು ಇತರ ಫರಿಸಾಯರು ಮತ್ತು ಶಾಸ್ತ್ರಿಗಳಿಗಿಂತ ಉತ್ತಮನಾಗಿರಬೇಕು. ಮತ್ತು ಅಲ್ಲಿ ನಾವು ಒಂದು ವಿಷಯವನ್ನು ಗಮನಿಸಬೇಕು. ಅವನು ದೇವರ ರಾಜ್ಯದೊಳಗಿಲ್ಲ. ಅದರ ಹತ್ತಿರದಲ್ಲೇ ಇದ್ದನು. ಹೌದು ಈ ಮನುಷ್ಯನಲ್ಲಿ ಇದ್ದ ನಂಬಿಕೆ ಅವನ ಹೃದಯದಲ್ಲಿರಲಿಲ್ಲ ಮೆದುಳಿನಲ್ಲಿತ್ತು. ದೇವರ ವಾಕ್ಯವು ನಮ್ಮ ಜ್ಞಾನದಲ್ಲಿದ್ದರೆ ಸಾಕಾಗುವುದಿಲ್ಲ. ಅದು ಹೃದಯದೊಳಗಿದ್ದರೆ ಮಾತ್ರವೇ ಕೆಲಸ ಮಾಡುತ್ತದೆ ಮತ್ತು ನೇರವಾಗಿ ಪರಲೋಕದೆಡೆಗೆ ಮುನ್ನಡೆಸುತ್ತದೆ.
ನೋಹನ ಕಾಲದಲ್ಲಿ ಜಲಪ್ರಳಯ ಸಾಧ್ಯ ಎಂದು ಜನರು ಭಾವಿಸಿರಲಿಲ್ಲ. ನೋಹನು ಪಾಪವನ್ನು ಬಿಟ್ಟು ಮಾನಸಾಂತರ ಹೊಂದುವಂತೆ ಬೋಧಿಸಿದನು. (2 ಪೇತ್ರ 2:5) ಅವರು ಅವನನ್ನು ಹುಚ್ಚ ಮತ್ತು ಮೂರ್ಖ ಎಂದು ಭಾವಿಸಿದರು. ನಾವೆಯಲ್ಲಿ ಮರಗೆಲಸವನ್ನು ಮಾಡಿದವರು ಖಂಡಿತವಾಗಿಯೂ ಅಲ್ಲಿದ್ದಿರುತ್ತಾರೆ. ಅವರೂ ಸಹ ನೋಹನ ಎಚ್ಚರಿಕೆಗೆ ಕಿವಿಗೊಡಲಿಲ್ಲ ಮತ್ತು ಕೂಲಿಗಾಗಿ ಮಾತ್ರವೇ ಕೆಲಸ ಮಾಡಿದರು. ಜಲಪ್ರಳಯ ಬಂದಾಗ ನಾವೆಯ ಬಳಿ ಈಜುತ್ತಿದ್ದವರು ಖಂಡಿತವಾಗಿಯೂ ಆ ನಾವೆಯ ಬಾಗಿಲು ತಟ್ಟಲು ಯತ್ನಿಸಿರಬಹುದು. ಬಾಗಿಲು ತೆರೆಯಲ್ಪಡಲಿಲ್ಲ. ಏಕೆಂದರೆ ನಾವೆಯ ಬಾಗಿಲು ನೋಹನಿಂದ ಮುಚ್ಚಲ್ಪಟ್ಟಿರಲಿಲ್ಲ, ಅದು ದೇವರಿಂದಲೇ ಮುಚ್ಚಲ್ಪಟ್ಟಿತ್ತು. ಜನರಿಗೂ ಮತ್ತು ನಾವೆಗೆ ತುಂಬಾ ದೂರವಿರಲಿಲ್ಲ. ಆದರೆ ಅಂದು ಭೀಕರ !
ಪ್ರಿಯರೇ! ಮೇಲ್ಕಂಡ ಎರಡೂ ಸತ್ಯವೇದ ಘಟನೆಗಳ ಮೂಲಕ ನಮ್ಮನ್ನು ನಾವು ಪರೀಕ್ಷಿಸಿಕೊಳ್ಳೋಣ. ನಾವು ದೇವರ ರಾಜ್ಯಕ್ಕೆ ಹತ್ತಿರವಾಗಿದ್ದೇವೆಯೇ? ಅಥವಾ ಅದರ ಹತ್ತಿರಲ್ಲಿದ್ದೇವೆಯೇ? ನಮ್ಮ ಮೆದುಳಿನಲ್ಲಿರುವ ದೇವರ ವಾಕ್ಯಗಳು ಜೀವನದಲ್ಲಿ ಬಹಿರಂಗಗೊಳ್ಳದಿದ್ದರೆ, ನಾವು ದೇವರಾಜ್ಯದ ಹೊರಗಿದ್ದೇವೆ. ದೂರವಾದವರಲ್ಲದಿದ್ದರೂ ದೇವರ ದೇವರಾಜ್ಯದೊಳಗೆ ಇಲ್ಲದಿರುವುದು ವಿಷಾದದ ಸಂಗತಿಯೇ! ಆದ್ದರಿಂದ ನಾವು ತಿಳಿದುಕೊಂಡಿರುವ ದೇವರ ವಾಕ್ಯಗಳಿಗೂ, ಎಚ್ಚರಿಕೆಗಳಿಗೂ ಕಿವಿಗೊಟ್ಟು ನಮ್ಮ ಜೀವನವನ್ನು ನೇರವಾಗಿ ದೇವರ ಕಡೆಗೆ ತಿರುಗಿಸೋಣ ಮತ್ತು ಆಶೀರ್ವಾದಗಳನ್ನು ಪಡೆದುಕೊಳ್ಳೋಣ.
- Mrs. ಹೆಪ್ಸಿ ಮನುವೇಲ್ ಜಯರಾಜ್
ಪ್ರಾರ್ಥನಾ ಅಂಶ:
"ಕಣ್ಮಣಿಯೇ ಕೇಳ್" ಎಂಬ ಪತ್ರಿಕೆ ಸೇವೆಯ ಮೂಲಕ ಅನೇಕ ಯೌವನಸ್ಥ ಹೆಣ್ಣುಮಕ್ಕಳು ಉಜ್ಜೀವನದ ಸಾಧನಗಳಾಗಿ ರೂಪುಗೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482