Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.06.2022
Share:

By Village Missionary Movement

Thursday, 23-Jun-2022

ಧೈನಂದಿನ ಧ್ಯಾನ(Kannada) – 24.06.2022

 

ಬೆಲೆಯುಳ್ಳದ್ದು

 

"…ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು..." - 1 ಕೊರಿಂಥ 6:20

 

ಒಬ್ಬ ಚಿಕ್ಕ ಹುಡುಗ ಇದ್ದನು. ಅವನ ಮನೆಯ ಸಮೀಪ ಒಂದು ನದಿ ಹರಿಯುತ್ತಿತ್ತು. ದಿನವೂ ಶಾಲೆಗೆ ಹೋಗಿ ಬಂದ ಮೇಲೆ ತುಂಬಾ ಕಷ್ಟಪಟ್ಟು ಬಿದಿರಿನ ಕಡ್ಡಿಗಳಿಂದ ತಾನು ಮಾಡಿಟ್ಟಿದ್ದ ದೋಣಿಯನ್ನು ಕಬೋರ್ಡ್ ನಿಂದ ತೆಗೆದುಕೊಂಡು ಹೋಗಿ, ಆ ನದಿಯಲ್ಲಿ ಬಿಟ್ಟು ಆಟವಾಡುತ್ತಿದ್ದನು. ಮತ್ತೆ ಆ ದೋಣಿಯನ್ನು ಮನೆಗೆ ಕೊಂಡೊಯ್ಯುವುದು ವಾಡಿಕೆಯಾಗಿತ್ತು. ಒಂದು ದಿನ ಎಂದಿನಂತೆ ಕಬೋರ್ಡ್‌ನಿಂದ ಸುಂದರವಾದ ದೋಣಿಯನ್ನು ತೆಗೆದುಕೊಂಡು ಹೋಗಿ ನದಿಯಲ್ಲಿ ಬಿಟ್ಟನು. ಪ್ರವಾಹ ಹೆಚ್ಚಿದ್ದ ಕಾರಣ ಬೋಟ್ ನೀರಿನಲ್ಲಿ ಕೊಚ್ಚಿ ಹೋಯಿತು. ಅವನು ತುಂಬಾ ದುಃಖಪಟ್ಟನು.

ಆಮೇಲೆ ಒಂದು ದಿನ ಅಂಗಡಿ ಬೀದಿಗೆ ಹೋದಾಗ ಅಲ್ಲಿದ್ದ ಅಂಗಡಿಯೊಂದರಲ್ಲಿ ತನ್ನ ದೋಣಿ ಇರುವುದನ್ನು ಕಂಡನು. ಅಂಗಡಿಯವರ ಬಳಿ ಹೋಗಿ ದೋಣಿಯನ್ನು ಹಿಂದಿರುಗಿಸಿ ಕೊಡಬೇಕಾಗಿ ಕೇಳಿಕೊಂಡನು. ಆದರೆ ಅವರು ಅವನ ಮಾತನ್ನು ಕೇಳಲಿಲ್ಲ. ಅದಕ್ಕೆ ತಕ್ಕ ಬೆಲೆ ನೀಡಬೇಕೆಂದು ಹೇಳಿದರು. ಹುಡುಗ ಮನೆಗೆ ಹೋಗಿ ಹುಂಡಿಯಲ್ಲಿ ಸೇರಿಸಿಟ್ಟಿದ್ದ ಹಣವನ್ನೆಲ್ಲಾ ತೆಗೆದುಕೊಂಡು ಹೋಗಿ ದೋಣಿ ಖರೀದಿಸಿದನು. ಹೋಗುವ ದಾರಿಯಲ್ಲಿ ದೋಣಿಗೆ ಮುತ್ತಿಡುತ್ತಾ, ನೀನು ನನಗೆ ಎರಡು ರೀತಿಯಲ್ಲಿ ಸ್ವಂತ. ಒಂದು ನಾನೇ ನಿನ್ನನ್ನು ಸೃಷ್ಟಿಸಿದೆ. ಮತ್ತೊಂದು ನಾನು ನಿನ್ನನ್ನು ಪುನಃ ದುಡ್ಡು ಕೊಟ್ಟು ಖರೀದಿಸಿದ್ದು ಎಂದನು.

 

ಸತ್ಯವೇದದಲ್ಲಿ ಕರ್ತನಾದ ಯೇಸು ಕ್ರಿಸ್ತನು ಇದೇ ರೀತಿಯ ಒಂದು ಸಾಮ್ಯವನ್ನು ಹೇಳಿದ್ದಾರೆ. (ಮತ್ತಾಯ 18:10-13) ಒಬ್ಬ ಮನುಷ್ಯನ ಬಳಿ 100 ಕುರಿಗಳಿದ್ದವು. ಅವುಗಳಲ್ಲಿ ಒಂದು ಕಣ್ಮರೆಯಾಗಲು, ಆ ಕುರಿಯ ಕುರುಬನು ತನ್ನ 99 ಕುರಿಗಳನ್ನು ಬಿಟ್ಟು ಕಾಣೆಯಾದ ಆ ಒಂದು ಕುರಿಯನ್ನು ಹುಡುಕುತ್ತಾ ಹೋಗಿ, ಕುರಿ ಸಿಗುವವರೆಗೂ ವಿಶ್ರಾಂತಿಯಿಲ್ಲದೆ ಹುಡುಕಿದನು. ಸಿಕ್ಕಿದ ಕೂಡಲೇ ಬಹು ಸಂತೋಷದಿಂದ ಅದನ್ನು ಹೆಗಲ ಮೇಲೆ ಹಾಕಿಕೊಂಡು ಬರುತ್ತಾನೆ ಎಂದರು.

 

ಹೌದು ಪ್ರಿಯರೇ, ನಾವೂ ಸಹ ಕಾಣದೆ ಹೋದ ಆ ಕುರಿಯಂತವರೇ. ದೇವರು ನಮ್ಮನ್ನು ಸೃಷ್ಟಿಸಿ, ನಮಗೆ ಉಸಿರು ನೀಡಿ, ಆತನನ್ನು ಸ್ತುತಿಸುವಂತೆ ಉಂಟುಮಾಡಿದರು. ಆದರೆ ನಾವು ಲೌಕಿಕ ಸುಖಗಳನ್ನು ಹುಡುಕುತ್ತಾ ಹೋಗಿ ದಾರಿ ತಪ್ಪಿಹೋಗುತ್ತಿದ್ದೇವೆ. ನದಿಯಲ್ಲಿ ಆ ಹುಡುಗನ ದೋಣಿ ಕೊಚ್ಚಿಕೊಂಡು ಹೋದಂತೆ ನಾವು ಸಹ ಲೋಕವನ್ನು ಹಿಂಬಾಲಿಸುತ್ತಾ ಹೋಗಿ ದೇವರಿಂದ ದೂರವಾಗಿ ಜೀಸಿಸುತ್ತಿದ್ದೆವು. ಆದರೆ ದೇವರು ನಮ್ಮ ಮೇಲೆ ಇಟ್ಟಿರುವ ಅಪಾರವಾದ ಪ್ರೀತಿಯಿಂದಾಗಿ ನಮ್ಮನ್ನು ಹುಡುಕುತ್ತಾ ಮನುಷ್ಯನಾಗಿ ಇಳಿದು ಬಂದರು. ನಮ್ಮನ್ನು ವಿಮೋಚಿಸುವುದಕ್ಕಾಗಿ, ಆ ಹುಡುಗನು ದೋಣಿಗೆ ಕ್ರಯವನ್ನು ಕೊಟ್ಟ ಪ್ರಕಾರ, ಯೇಸುಕ್ರಿಸ್ತನು ಶಿಲುಬೆಯ ಮೇಲೆ ತನ್ನ ಸ್ವಂತ ರಕ್ತವನ್ನೇ ಕ್ರಯವಾಗಿ ಸುರಿಸಿದರು. ಅವರ ಪ್ರೀತಿ ಅಮೂಲ್ಯವಾದದ್ದು. ಆ ಹುಡುಗನು ದೋಣಿಯನ್ನು ಬೆಲೆಗೆ ಖರೀದಿಸಿದ ನಂತರ ಅವನಿಗೆ ಅದು ಇನ್ನೂ ಹೆಚ್ಚು ವಿಶೇಷವಾಗಿ ಕಂಡಂತೆ, ಅವರ ದೃಷ್ಟಿಯಲ್ಲಿ ನಾವು ಸಹ ವಿಶೇಷವಾದವರು ಮತ್ತು ಅಮೂಲ್ಯವಾದವರು ಎಂಬುದನ್ನು ಒಂದು ದಿನವೂ ಮರೆತುಹೋಗದೆ ಆತನ ಮಕ್ಕಳಾಗಿ ಆತನ ಕೈಗಳಲ್ಲಿ ತಗ್ಗಿಸಿಕೊಳ್ಳೋಣ. ಆಮೆನ್!

- Mrs. ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ಪ್ರತಿ ಭಾನುವಾರ ಸಂಜೆ 6:00 ರಿಂದ 6:30 ರವರೆಗೆ ಪ್ರಸಾರವಾಗುವ "ಕಣ್ಮಣಿಯೇ ಕೇಳ್" ಎಂಬ ಕಾರ್ಯಕ್ರಮದ ಮೂಲಕ ಅನೇಕ ಯೌವನಸ್ಥ ಹೆಣ್ಣು ಮಕ್ಕಳು ದೇವರಿಂದ ಸ್ಪರ್ಶಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş