Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.06.2022
Share:

By Village Missionary Movement

Wednesday, 22-Jun-2022

ಧೈನಂದಿನ ಧ್ಯಾನ(Kannada) – 23.06.2022

 

ಅವರಿಗೆ ಗೊತ್ತು

 

"ನಿಮಗೆ ಏನೇನು ಅಗತ್ಯವೆಂಬದು ಆತನಿಗೆ ತಿಳಿದದೆ" - ಮತ್ತಾಯ 6:8

 

ಒಂದು ಸಂಜೆ ವೇಳೆಯಲ್ಲಿ ಗಾಳಿ ಮೆಲ್ಲನೆ ಬೀಸುತ್ತಿತ್ತು. ಈ ವೇಳೆ ದೋಣಿ ವಿಹಾರ ಮಾಡಿದರೆ ಚೆನ್ನಾಗಿರುತ್ತದೆ ಎಂದುಕೊಂಡ ವ್ಯಕ್ತಿಯೊಬ್ಬರು ಬೋಟ್ ತೆಗೆದುಕೊಂಡು ಸಮುದ್ರದೊಳಗೆ ಹೋದರು. ಅವರು ಸಮುದ್ರದ ಮಧ್ಯಭಾಗಕ್ಕೆ ತಲುಪಿದಾಗ ಗಾಳಿಯ ವೇಗವು ಕಡಿಮೆಯಾದದರಿಂದ, ದೋಣಿಯನ್ನು ಮುಂದೂಡಲು ಅವರಿಗೆ ತುಂಬಾ ಕಷ್ಟಕರವಾಗಿತ್ತು. ಸೂರ್ಯ ಮುಳುಗುತ್ತಿದ್ದಂತೆ ಕಷ್ಟಪಟ್ಟು ದೋಣಿಯನ್ನು ನಡೆಸುತ್ತಲೇ “ಯೇಸಪ್ಪಾ, ಗಾಳಿಯ ವೇಗವನ್ನು ಹೆಚ್ಚಿಸಿ, ನಾನು ಹೇಗಾದರೂ ದಡವನ್ನು ತಲುಪುತ್ತೇನೆ” ಎಂದು ಪ್ರಾರ್ಥಿಸಲು ಪ್ರಾರಂಭಿಸಿದರು. ಆದರೆ ಯಾವ ಉತ್ತರವೂ ಇಲ್ಲ. ತೀರಾ ಬೇಸತ್ತು ಸುಸ್ತಾಗಿದ್ದ ಆ ವ್ಯಕ್ತಿ ದೂರದಲ್ಲಿ ಹಡಗೊಂದು ಬರುತ್ತಿರುವುದನ್ನು ಕಂಡರು. ಆ ಹಡಗಿನಲ್ಲಿದ್ದವರು ಅವರ ಹತ್ತಿರ ಬಂದು, ಇವರಿಗೆ ಬೇಕಾದ ಸಹಾಯ ಮಾಡಿ, ಆಹಾರ ಕೊಟ್ಟು, ತಮ್ಮ ಹಡಗಿನಲ್ಲಿ ಹತ್ತಿಸಿಕೊಂಡು ದೋಣಿಯನ್ನು ತಮ್ಮ ಹಡಗಿನೊಂದಿಗೆ ಸೇರಿಸಿ ಕಟ್ಟಿಕೊಂಡು ಪ್ರಯಾಣವನ್ನು ಪ್ರಾರಂಭಿಸಿ ದಡ ಸೇರಿದರು. ದಡ ಸೇರಿದ ಇವರು ಹೀಗೆ ಪ್ರಾರ್ಥಿಸಿದರು, “ದೇವರೇ ನನಗೆ ಯಾವಾಗ ಏನು ಅಗತ್ಯ ಎಂಬುದು ನಿಮಗೆ ಚೆನ್ನಾಗಿ ಗೊತ್ತು. ಅದನ್ನು ನನಗೆ ಸರಿಯಾದ ಸಮಯದಲ್ಲಿ ನೀಡಿದ್ದಕ್ಕಾಗಿ ಧನ್ಯವಾದಗಳು” ಎಂದರು.

 

ಇಂದಿನ ಸತ್ಯವೇದ ಭಾಗದಲ್ಲಿ 38 ವರ್ಷಗಳಿಂದ ರೋಗಿಯಾಗಿದ್ದ ವ್ಯಕ್ತಿಯ ಬಗ್ಗೆ ಓದುತ್ತೇವೆ. ಅವನು ತನ್ನ ಜೀವನದಲ್ಲಿ ಎಷ್ಟು ಹತಾಶನಾಗಿದ್ದನೆಂದರೆ, ಇನ್ನು ಅಷ್ಟೇ, ನಾನು ಬದುಕಿ ಏನು ಪ್ರಯೋಜನ ಎಂದು ಅವನು ನೆನೆಸಿರಬಹುದು. ಸ್ವಂತ ಬಲದಿಂದಲೂ ಏನೂ ಸಾಧ್ಯವಾಗಲಿಲ್ಲ, ಮತ್ತೊಬ್ಬರನ್ನು ನಂಬಿಯೂ ಪ್ರಯೋಜನವಾಗಲಿಲ್ಲ ಎಂದು ಪ್ರಲಾಪಿಸಿರಬಹುದು. ಇಂತವನ ಬಳಿ ಯೇಸು, "ನೀನು ಸ್ವಸ್ಥನಾಗಲು ಬಯಸುತ್ತೀಯಾ?" ಎಂದು ಕೇಳಿದಾಗ, ಆಹಾ! ನನಗೆ ಸಹಾಯ ಮಾಡಿ ಕೊಳದಲ್ಲಿ ಇಳಿಸಲು ಒಬ್ಬರು ಬಂದುಬಿಟ್ಟರು ಎಂದು ಅವನು ಭಾವಿಸಿರಬಹುದು. ಆದರೆ ಯೇಸು ಅವನು ಬಯಸಿದ ರೀತಿಯಲ್ಲಿ ಪ್ರತಿಕ್ರಿಯಿಸಲಿಲ್ಲ. "ಎದ್ದೇಳು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ" ಎಂದು ಹೇಳಿದರು, ಅವನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ಹೋದನು.

 

ಪ್ರಿಯರೇ! ನಮ್ಮಲ್ಲಿ ಎಷ್ಟು ಜನ ಹೇಳುತ್ತಾರೆ, “ನನ್ನ ಜೀವನವು ನಡುಸಮುದ್ರದಲ್ಲಿ ಸಿಕ್ಕಿಹಾಕಿಕೊಂಡಂತೆ ಇದೆ; ಸೇವೆ ಮಾಡುವ ಆಸೆ ಇದೆ. ಆದರೆ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಮಗಳ ಮದುವೆ ಚೆನ್ನಾಗಿ ಮುಗಿಯಬೇಕೆ...'' ಇಂತಹ ಹಲವು ಕಾರ್ಯಗಳಲ್ಲಿ ದೇವರು ನನಗೆ ಉತ್ತರ ನೀಡಲಿ ಎಂದು ಕಾಯುತ್ತಿದ್ದೇವೆ. ನಾವು ಬಯಸುವ ಪ್ರಕಾರ ಉತ್ತರ ನೀಡಿದರೆ ಚೆನ್ನಾಗಿರುತ್ತದಲ್ಲಾ ಎಂದು ಭಾವಿಸುತ್ತೇವೆ. ನಿಮಗೆ ಏನು ಅಗತ್ಯ ಎಂಬುದನ್ನು ದೇವರು ಅರಿತಿದ್ದಾರೆ. ಅವರು ತನ್ನ ತೀರ್ಮಾನದ ಪ್ರಕಾರ ಸರಿಯಾಗಿ ಉತ್ತರ ನೀಡುತ್ತಾರೆ. ಅವರು ಒಂದು ಮಾತು ಹೇಳಿದರೆ ಸಾಕು, ನಿಮ್ಮ ಜೀವನ ಬದಲಾಗುವುದು ಖಚಿತ. ನಿಮ್ಮ ಅಗತ್ಯಗಳನ್ನು ಅವರಿಗೆ ತಿಳಿಸಿ, ನಿಮ್ಮನ್ನು ಸಂಪೂರ್ಣವಾಗಿ ಅವರಿಗೆ ಸಮರ್ಪಿಸಿ, ಅವರು ನಿಮಗಾಗಿ ಏನು ಮಾಡಲಿದ್ದಾರೆಂದು ನಿರೀಕ್ಷಿಸಿರಿ. ಅದ್ಭುತ ಖಚಿತ.

- Sis. ಐಡಾ

 

ಪ್ರಾರ್ಥನಾ ಅಂಶ:

ಸೇವಕರುಗಳಿಗಾಗಿ ಹೊರಬರುವ "ಕತ್ತೆಗಳ ಮಾರ್ಗದರ್ಶಿ" ಎಂಬ ಪತ್ರಿಕೆಗೆ Postal permit ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al