Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.06.2022
Share:

By Village Missionary Movement

Tuesday, 21-Jun-2022

ಧೈನಂದಿನ ಧ್ಯಾನ(Kannada) – 22.06.2022

 

ಕಠಿಣವಾದ ತೀರ್ಪು

 

"ನನ್ನ ಸಹೋದರರೇ, ಬೋಧಕರಾದ ನಮಗೆ ಕಠಿನವಾದ ತೀರ್ಪು ಆಗುವದೆಂದು ತಿಳಿದುಕೊಂಡು ಬಹುಮಂದಿ ಬೋಧಕರಾಗಬೇಡಿರಿ" - ಯಾಕೋಬ 3:1

 

10 ಸಾವಿರಕ್ಕೂ ಹೆಚ್ಚು ಸುವಾರ್ತಾಬೋಧಕರು ಮತ್ತು ಕ್ರಿಶ್ಚಿಯನ್ ಮುಖಂಡರು ಆಮ್ಸ್ಟರ್‌ಡ್ಯಾಮ್‌ನ ಬೃಹತ್ ವೇದಿಕೆಯಲ್ಲಿ ವಿಶ್ವಪ್ರಸಿದ್ಧ ಸುವಾರ್ತಾಬೋಧಕ ಬಿಲ್ಲಿ ಗ್ರಾಹಂ ಅವರ ಸಂದೇಶವನ್ನು ಆಲಿಸುತ್ತಿದ್ದರು. ಸಂದೇಶದ ಮಧ್ಯದಲ್ಲಿ ಬಿಲ್ಲಿ ಅವರು ತಮ್ಮ ಸೇವೆಯ ಅನುಭವದಲ್ಲಿರುವ ಕೆಲವು ಘಟನೆಗಳನ್ನು ಹಂಚಿಕೊಂಡರು. "ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಪ್ರತಿ ಬಾರಿ ನಾನು ಜನರ ಗುಂಪಿನ ಮುಂದೆ ನಿಂತು ಬೋಧಿಸುವಾಗ ನನ್ನ ಮೊಣಕಾಲುಗಳು ನಡುಗುತ್ತವೆ ಎಂದರು. ಬಿಲ್ಲಿ ಗ್ರಾಹಂ ಅವರಿಗೆ ಸಂದೇಶವನ್ನು ಹೇಗೆ ನೀಡಬೇಕೆಂದು ತಿಳಿದಿಲ್ಲದ ಕಾರಣ ಇದನ್ನು ಹೇಳಿದರು ಎಂದು ನೀವು ಭಾವಿಸುತ್ತಿದ್ದೀರಾ? ಇಲ್ಲವೇ ಇಲ್ಲ. ಎಷ್ಟೇ ಅಯೋಗ್ಯನಾದರೂ ತನ್ನನ್ನು ದೇವರು ತಮ್ಮ ಘನವಾದ ಸೇವೆಯಲ್ಲಿ ಅವರ ಮಾತುಗಳನ್ನು ಹೇಳಲು ದೇವರು ತನಗೆ ಕೊಟ್ಟ ಅವಕಾಶವನ್ನು ಯೋಚಿಸಿ ವಿನಮ್ರವಾಗಿ ಸರಳವಾಗಿ ಹೀಗೆ ಹೇಳುತ್ತಿದ್ದಾರೆ.

 

ಈ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಕೆಲಸವೆಂದರೆ ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದ ಸರ್ವಶಕ್ತನಾದ ದೇವರಿಗೆ ಸೇವೆ ಮಾಡುವುದೇ. ಸೇವೆಗೆ ಬಂದಿರುವ ಪ್ರತಿಯೊಬ್ಬರೂ ಹೇಗೆ ಜಾಗರೂಕರಾಗಿರಬೇಕೆಂದು ತಿಳಿದುಕೊಳ್ಳಬೇಕು. ಬೋಧಕರ ಪಿತಾಮಹ ಎಂದು ಕರೆಯಲ್ಪಡುವ ಚಾರ್ಲ್ಸ್ ಸಿ.ಎಚ್ ಸ್ಪರ್ಜನ್ ರವರು ಈ ರೀತಿಯಾಗಿ ಹೇಳುತ್ತಾರೆ, "ಉಪದೇಶವನ್ನು ಕೇಳುವ ಪಶ್ಚಾತ್ತಾಪಪಡದ ಪಾಪಿಗೆ ಕಠಿಣವಾದ ತೀರ್ಪು ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು" ಎಂದು ಎಚ್ಚರಿಸುತ್ತಾರೆ. ಇಂದು ಪ್ರವಚನಪೀಠದಲ್ಲಿ ನಿಂತು ಬಾಯಿಗೆ ಬಂದದ್ದನ್ನೆಲ್ಲಾ ಹೇಳಿಬಿಟ್ಟು ಇದನ್ನು ಕರ್ತನೇ ಮಾತನಾಡಿದರೆಂದು ಹೇಳುವ ಸೇವಕರುಗಳೇ ಅಧಿಕವಾಗಿಬಿಟ್ಟಿದ್ದಾರೆ. ಅದಕ್ಕಾಗಿಯೇ ಯಾಕೋಬನು ತನ್ನ ಪತ್ರಿಕೆಯಲ್ಲಿ ಬರೆಯುವಾಗ ಕಠಿಣವಾದ ತೀರ್ಪು ಹೊಂದುತ್ತೇವೆಂದು ತಿಳಿಯದಿರಬಾರದು ಎಂದು ಎಚ್ಚರಿಸುತ್ತಿದ್ದಾರೆ. ಅಪೊ. ಪೌಲನು ಕೊರಿಂಥದವರ ಸಭೆಗೆ ಬರೆಯುವಾಗ, ನಾವು ದೇವರ ವಾಕ್ಯಗಳನ್ನು ತಪ್ಪಾಗಿ ಬೋಧಿಸದೇ, ದೇವರು ನಮಗೆ ಕೊಟ್ಟ ಪ್ರಕಾರವಾಗಿ ದೇವರ ಸನ್ನಿಧಿಯಲ್ಲಿ ಯಥಾರ್ಥವಾಗಿ ಬೊಧಿಸುತ್ತಿದ್ದೇವೆ ಎಂದು ಬರೆಯುತ್ತಾರೆ. ಕ್ರಿಸ್ತನಲ್ಲಿ ಬಹು ಪ್ರೀತಿಯುಳ್ಳ ಸಹೋದರರೇ, ಸೇವೆ ಮಾಡುವುದು ಒಳ್ಳೆಯದು; ಅದೇ ರೀತಿ ಮಾಡುವಂತಹ ಸೇವೆಯು ದೇವರ ನಡೆಸುವಿಕೆಯ ಪ್ರಕಾರ ಕಾಣಲ್ಪಡಬೇಕು. "ದೇವರ ಸೇವೆಯನ್ನು ದೇವರ ಮಾರ್ಗದಲ್ಲಿ ಮಾಡಬೇಕೆಂದು" ಒಂದು ಸೇವಕರು ಅದ್ಭುತವಾಗಿ ಹೇಳಿದರು. ನಾನು ಮಾತನಾಡುವ ಮತ್ತು ಮಾಡುವ ಎಲ್ಲವೂ ಸೇವೆಯಾಗುವುದಿಲ್ಲ. ಲಿಯೊನಾರ್ಡ್ ರಾವೆನ್‌ಹಿಲ್ ಅವರು ವೈಯಕ್ತಿಕ ಪ್ರಾರ್ಥನೆಯಿಲ್ಲದೆ ಮತ್ತು ಸತ್ಯವೇದವನ್ನು ಧ್ಯಾನಿಸದೆ ಒಬ್ಬರು ಸಂದೇಶವನ್ನು ನೀಡಿದರೆ ಅವರ ಬಾಯಿಂದ ಸಾವಿನ ವಾಸನೆಯು ಹೊರಹೊಮ್ಮುತ್ತದೆ ಎಂದು ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ. ದೇವರ ವಾಕ್ಯವನ್ನು ಬೋಧಿಸುವವರು ಬಹಳ ಕಾಳಜಿಯಿಂದ ಸೇವೆ ಮಾಡಬೇಕು. ನಮ್ಮ ದೇವರು ದಹಿಸುವ ಬೆಂಕಿಯಂತಿದ್ದಾರೆ, ಭಯದಿಂದ ಕರ್ತನನ್ನು ಸೇವಿಸಿರಿ ಮತ್ತು ನಡುಗುತ್ತಾ ಸಂತೋಷಪಡಿರಿ. ಆಮೆನ್.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಕಚೇರಿ ಕೆಲಸಕ್ಕಾಗಿ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ತೆಗೆದುಕೊಳ್ಳಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin