Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.06.2022
Share:

By Village Missionary Movement

Monday, 20-Jun-2022

ಧೈನಂದಿನ ಧ್ಯಾನ(Kannada) – 20.06.2022

 

FRIENDSHIP

 

"ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸಿ(ದನು)." - 1 ಸಮುವೇಲ 18:4

 

ಪ್ರಾಣ ಗೆಳತಿಯರಿಬ್ಬರು ಮನೆಯ ಟೆರೇಸ್ ಮೇಲೆ ಆಟವಾಡುತ್ತಿದ್ದಾಗ ಅವರ Ring ball ಮನೆಯ ಮುಂಭಾಗದ ಸ್ಲ್ಯಾಬ್ ಮೇಲೆ ಬಿದ್ದಿತು, ಅದನ್ನು ತೆಗೆದುಕೊಳ್ಳಲು ಹೋದವರ ಮನದಲ್ಲಿ ಒಂದು ವಿಚಿತ್ರವಾದ ಆಲೋಚನೆ ಮೂಡಿತು. ಗೆಳತಿಯರಲ್ಲಿ ಒಬ್ಬಳು “ಏಯ್! ಇದರ ಎತ್ತರ ಕಡಿಮೆ ತಾನೇ ಇದೆ. ಇಲ್ಲಿಂದ ಜಿಗಿದರೆ ನಾನು ನನ್ನ ಮೈಮೇಲೆ ಒಂದು ಏಟು ಕೂಡ ಬೀಳದಂತೆ ಎದ್ದು ಬಿಡುತ್ತೇನೆ. ನೀನೂ ಹಾಗೆ ಜಿಗಿದು ಏಳಲು ಸಾಧ್ಯವಾ?" ಎಂದು ಹೇಳುತ್ತಾ ಇದೆಲ್ಲಾ ಧೈರ್ಯ ಇರುವವರು ಮಾಡೋದು, ನಿನ್ನಿಂದ ಮಾಡಲು ಸಾಧ್ಯವಿಲ್ಲ ಎನ್ನಲು, ಇವಳೂ ಸಹ ಅಸಡ್ಡೆಯಾದ ಧೈರ್ಯದಿಂದ, ನನ್ನಿಂದಲೂ ಜಿಗಿಯಲು ಸಾಧ್ಯ ಎಂದು ಸವಾಲು ಹಾಕಿದಳು, ಇಬ್ಬರೂ ಒಟ್ಟಿಗೆ ನೆಗೆಯಲು ನಿರ್ಧರಿಸಿದರು. ಕಣ್ಣು ಮುಚ್ಚಿಕೊಂಡು ಢಮಾರ್ ಎಂದು ಜಿಗಿಯಲು, ಅಯ್ಯೋ ಎಂಬ ಕಿರುಚಾಟ ಕೇಳಿ ಎಲ್ಲರೂ ಓಡಿ ಬಂದರು. ಬೆನ್ನುಮೂಳೆ ಮುರಿದು, ಅಸಹನೀಯ ನೋವಿನಿಂದ ಬಳಲುತ್ತಿದ್ದಳು ಗೆಳತಿಯರಲ್ಲಿ ಒಬ್ಬಳು. ಆದರೆ ಸಾಹಸ ಮಾಡಲು ಪ್ರೇರೇಪಿಸಿದವಳು ತಾನು ಮಾತ್ರ ಜಿಗಿಯದೆ ಮೇಲಿಂದ ಮೋಜು ನೋಡುತ್ತಿದ್ದಳು. ಇದು ಸೈತಾನನ ಕುತಂತ್ರವೂ ಹೌದು.

 

ಸತ್ಯವೇದದಲ್ಲಿ ದುಷ್ಟರ ಆಲೋಚನೆಯಂತೆ ನಡೆಯದೆ ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ ಧರ್ಮನಿಂದಕರೊಡನೆ ಕೂತುಕೊಳ್ಳದೆ ಎಂದು ಹೇಳಲ್ಪಟ್ಟಿರುವುದರ ಕಾರಣವೇನು? ಏದೆನ್ ತೋಟದಲ್ಲಿ ಹವ್ವಳು ಸರ್ಪದ ವಂಚನೆಯ ಮಾತಿಗೆ ಕಿವಿಗೊಟ್ಟು, ದೇವರ ಮಾತಿಗೆ ವಿಧೇಯಳಾಗದೇ ತಾನು ಮತ್ತು ತನ್ನಿಂದ ಇಡೀ ಜಗತ್ತೇ ಪಾಪದಲ್ಲಿ ಬೀಳಲು ಕಾರಣವಾಗಿಬಿಟ್ಟಳೇ. 1 ಅರಸುಗಳು 13 ರಲ್ಲಿ, ಅರಸನಿಗೆ ದೇವರ ವಾಕ್ಯವನ್ನು ಹೊತ್ತುಕೊಂಡು ಹೋದ ದೇವ ಮನುಷ್ಯನು ಇನ್ನೊಬ್ಬ ಪ್ರವಾದಿಯ ಮೂಲಕ ಬಂದ ಸುಳ್ಳು ಮಾತನ್ನು ನಂಬಿ, ದೇವರ ವಾಕ್ಯದಿಂದ ದೂರವಾಗಿ, ಸಿಂಹದ ಬಾಯಿಯಲ್ಲಿ ಸಿಕ್ಕಿಬಿದ್ದು ಸತ್ತು ಹೋದನೇ! ಹೀಗಿರಲು ಪ್ರತಿದಿನ ದೇವರ ವಾಕ್ಯಕ್ಕೆ ವಿಧೇಯರಾಗಿ ಜೀವಿಸಲು ನಾವು ಎಷ್ಟು ಜಾಗರೂಕರಾಗಿರಬೇಕು?

 

ಯೌವ್ವನ ಕಣ್ಮಣಿಗಳೇ! 1 ಸಮು. 18-20 ಅಧ್ಯಾಯಗಳಲ್ಲಿ, ದಾವೀದ ಯೋನಾತಾನನ ಸ್ನೇಹವನ್ನು ನೋಡಬಹುದು. ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು. ತನ್ನ ಪ್ರಾಣದಂತೆಯೇ ಪ್ರೀತಿಸುತ್ತಿದ್ದ ಕಾರಣ, ತನ್ನಲ್ಲಿರುವ ಎಲ್ಲವನ್ನೂ ಅವನಿಗೆ ಕೊಟ್ಟು, ಅವನ ತಂದೆಯಿಂದ ಉಂಟಾದ ಹಾನಿಯನ್ನೂ ತಪ್ಪಿಸಿ ಕಾಪಾಡಿ, ದಾವೀದನ ಬಯಕೆಯನ್ನು ನೆರವೇರಿಸಿ ಒಳ್ಳೆಯ ಸ್ನೇಹಿತನಾಗಿ ಕಾಣಲ್ಪಟ್ಟನು. ಒಳ್ಳೆಯ ಸ್ನೇಹಿತರು ನಮ್ಮ ತಪ್ಪುಗಳನ್ನು ಎತ್ತಿ ತೋರಿಸುತ್ತಾರೆ ಮತ್ತು ತಿದ್ದುಪಡಿಗೆ ದಾರಿ ಮಾಡಿಕೊಡುತ್ತಾರೆ, ಸಂಕಷ್ಟದ ಸಮಯದಲ್ಲಿ ನಮ್ಮನ್ನು ಬೆಂಬಲಿಸುತ್ತಾರೆ. ನಾವು ಕೂಡ ಯೇಸುವನ್ನು ಉತ್ತಮ ಸ್ನೇಹಿತನಾಗಿ ತಿಳಿದುಕೊಂಡು, ಅವರ ಎದೆಯ ಮೇಲೆ ಒರಗಿ ಒಂದೇ ಪ್ರಾಣವಾಗಿ ಒಬ್ಬ ಸ್ನೇಹಿತನ ಹಾಗೆ ಆತನೊಂದಿಗೆ ಬೆರೆಯಲ್ಪಟ್ಟವರಾಗಿ ನಾವು ಕಾಣಲ್ಪಡುವುದಾದರೆ, ನಮಗುಂಟಾಗುವ ಎಲ್ಲಾ ಚಿಂತೆ ಮತ್ತು ಸಮಸ್ಯೆಗಳನ್ನು ಅವರೊಂದಿಗೆ ಹಂಚಿಕೊಂಡು, ಮನೋಭಾರ ನೀಗಿದವರಾಗಿ, ಒಳ್ಳೆಯ ಆಲೋಚನೆಯನ್ನು ಪಡೆದು, ಅವರೊಂದಿಗಿನ ನಮ್ಮ ಸ್ನೇಹವನ್ನು ಬಲಪಡಿಸಿಕೊಂಡು ಉತ್ತಮ ಜೀವನವನ್ನು ನಡೆಸಲು ಸಾಧ್ಯ.

- Mrs. ವಸಂತಿ ರಾಜಮೋಹನ್

 

ಪ್ರಾರ್ಥನಾ ಅಂಶ:

ನಂಬಿಕೆ ಟಿವಿಯಲ್ಲಿ ಪ್ರಸಾರವಾಗುವ ಗ್ರಾಮೀಣ ಸಮಯ ಕಾರ್ಯಕ್ರಮವನ್ನು ವೀಕ್ಷಿಸುವ ಜನರ ಆಶೀರ್ವಾದಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin