Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.06.2022 (Kids Special)
Share:

By Village Missionary Movement

Sunday, 19-Jun-2022

ಧೈನಂದಿನ ಧ್ಯಾನ(Kannada) – 19.06.2022 (Kids Special)

 

ಹಲ್ಲುಗಳೇ ಕಾಣ್ತಿಲ್ಲ

 

"ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ” - ಜ್ಞಾನೋಕ್ತಿ 25:11

 

ಏನು ಪುಟಾಣಿಗಳೇ! ನೀವು ಎಂದಾದರೂ ಕನಸು ಕಂಡಿದ್ದೀರಾ? ಪ್ರತಿಯೊಬ್ಬರೂ ಕನಸು ಕಾಣುವುದು ಸಹಜ! ಕೆಲವು ಕನಸುಗಳು ಭಯಾನಕವಾಗಿಯೂ ಮತ್ತು ಕೆಲವು ಆತಂಕಕಾರಿಯಾಗಿಯೂ ಇರುತ್ತವೆ ಅಲ್ವಾ. "ಒಂದು ರಾಜನ ಕನಸು" ಹೇಗಿತ್ತು ಎಂಬ ಕಥೆಯನ್ನು ಕೇಳೋಣವಾ? ರಾಜನ ಕನಸಿನ ಬಗ್ಗೆ ಕೇಳಲು ಆಸೆಯಾಗ್ತಿದೆಯಾ? ಬನ್ನಿ ಕಥೆ ಕೇಳೋಣ.

 

ಒಬ್ಬ ರಾಜನು ತಾನು ಕಂಡ ಕನಸಿನಿಂದ ಭಯಭೀತರಾಗಿದ್ದರಂತೆ. ರಾಜನೇ ಹೆದರುವ ಮಟ್ಟಿಗೆ! ಅಂಥಾ ಏನು ಕನಸು ಕಂಡಿರುತ್ತಾರೆ ಅಂಥ ಯೋಚಿಸುತ್ತಾ ಇದ್ದೀರ ತಾನೇ! ಹೇಳ್ತೀನಿ ಕೇಳಿ. ಕನಸಿನಲ್ಲಿ, ಅವರ ಒಂದು ಹಲ್ಲು ಹೊರತುಪಡಿಸಿ ಉಳಿದೆಲ್ಲವೂ ಉದುರಿಹೋಯಿತು. ಬೆಳಿಗ್ಗೆ ಎದ್ದ ಕೂಡಲೇ ಅವರು ಮಂತ್ರಿಗಳನ್ನು ಕರೆದರು, ಈ ಕನಸಿನ ಅರ್ಥವೇನಿರಬಹುದೆಂದು ಯೋಚಿಸಿದರು, ಅರ್ಥ ಹೇಳಲು ಕೇಳಿದರು. ಒಬ್ಬರೆದ್ದು "ನಿಮ್ಮ ಬಂಧು ಮಿತ್ರರು ಸತ್ತು ಹೋದ ಮೇಲೆ ನೀವು ಒಂಟಿಯಾಗಿ ಬಿಡುತ್ತೀರ" ಎಂದನು. ಎಲ್ಲ ಮಂತ್ರಿಗಳೂ ಹೌದು, ಇದೇ ಸರಿಯಾದ ಉತ್ತರ ಎಂದರು. ಕೂಡಲೇ ರಾಜನು ಬಹಳವಾಗಿ ಹೆದರಿ ಅವರನ್ನು ಬಿಟ್ಟು ಹೊರಗೆ ಹೋದರು.

 

ತಡವಾಗಿ ಬಂದ ಮಂತ್ರಿ, “ರಾಜನೇ, ನಿನ್ನ ಮುಖ ಏಕೆ ದಣಿದಿದೆ ಮತ್ತು ಚಿಂತೆಯಾಗಿದೆ? ಎಂದು ನನಗೆ ಹೇಳಿ" ಎಂದರು. ತಕ್ಷಣ ರಾಜನು ತನ್ನ ಕನಸನ್ನು ಹೇಳಿದರು. ಇದು ಸಂತೋಷದ ವಿಷಯ! ಇದಕ್ಕೇಕೆ ಚಿಂತೆ? ದೀರ್ಘಾಯುಷ್ಯವು ಎಲ್ಲರಿಗಿಂತ ನಿಮಗೆ ಹೆಚ್ಚು. ನೀವು ದೀರ್ಘಕಾಲ ಬದುಕುತ್ತೀರಿ ಮತ್ತು ಚೆನ್ನಾಗಿರುತ್ತೀರಿ ಎಂದನು. ಇದನ್ನು ಕೇಳಿದ ರಾಜನು ಬಹಳ ಉತ್ಸಾಹದಿಂದ ಮತ್ತು ಸಂತೋಷದಿಂದ ತನ್ನ ಕೆಲಸವನ್ನು ಮಾಡಲು ಪ್ರಾರಂಭಿಸಿದರು. ಜಾಣತನದಿಂದ ಉತ್ತರಿಸಿದ ಮಂತ್ರಿಗೆ ಹಲವು ಉಡುಗೊರೆಗಳನ್ನು ನೀಡಿದರು.

 

ಏನು ಪುಟಾಣಿಗಳೇ! ಇಬ್ಬರು ಮಂತ್ರಿಗಳು ಕನಸಿಗೆ ಅರ್ಥ ಹೇಳಿದ್ದೂ ಸರಿಯೇ. ಆದರೆ ಯಾವ ಪರಿಸ್ಥಿತಿಯಲ್ಲಿ ಹೇಗೆ ಮಾತನಾಡಬೇಕು ಎಂಬ ಜ್ಞಾನ ಆ ಮಂತ್ರಿಗೆ ಇತ್ತು. ಅವರು ಅದನ್ನು ಸರಿಯಾಗಿ ಬಳಸಿಕೊಂಡರು. ಸರಿಯಾದ ಸಮಯದಲ್ಲಿ ಬುದ್ಧಿವಂತಿಕೆಯಿಂದ ಮಾತನಾಡಲು ನೀವು ಕೂಡ ಯೇಸಪ್ಪನ ಬಳಿ ಜ್ಞಾನವನ್ನು ಕೇಳಬೇಕು. ನಿನ್ನ ಬುದ್ಧಿವಂತಿಕೆಯ ಮಾತುಗಳು ಅನೇಕರನ್ನು ಸಂತೋಷಪಡಿಸುತ್ತದೆ ಮತ್ತು ಬದುಕಿಸುತ್ತದೆ. ಏನು ಪುಟಾಣಿಗಳೇ! ಒಳ್ಳೆಯ ನಿಧಿಯಾಗಿರುವ ಜ್ಞಾನವನ್ನು ಕೇಳಲು ರೆಡಿ ತಾನೇ!

- Mrs. ಅನ್ಬು ಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş