By Village Missionary Movement
Thursday, 16-Jun-2022ಧೈನಂದಿನ ಧ್ಯಾನ(Kannada) – 16.06.2022
ಯಾವ ಮೇಲಿಗೂ
ಕಡಿಮೆಯಿಲ್ಲ
“ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು; ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಮೇಲಿಗೂ ಕಡಿಮೆಯಿಲ್ಲ" - ಕೀರ್ತನೆ 34:10
ಪಂಡಿತ್ ರಮಾಬಾಯಿ ಅವರು ದೇವರ ಮೇಲಿಟ್ಟಿದ್ದ ಪ್ರೀತಿಯಿಂದಾಗಿ ಪುಣೆ ಜಿಲ್ಲೆಯಲ್ಲಿ ಕೆಡ್ಕೌಂಗ್ ಗ್ರಾಮದಲ್ಲಿ "ಮುಕ್ತಿ ಮಿಷನ್" ಎಂಬ ಆಶ್ರಮವನ್ನು ಪ್ರಾರಂಭಿಸಿ, ಆದರಣೆ ಇಲ್ಲದ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧ ಮಹಿಳೆಯರ ವರೆಗೂ ನೋಡಿಕೊಳ್ಳುತ್ತಿದ್ದರು. ಉತ್ತಮ ಪ್ರಾರ್ಥನಾ ಜೀವನ ಮತ್ತು ಉತ್ತಮ ಕ್ರೈಸ್ತ ನಿಯಮಗಳನ್ನು ಪಾಲಿಸುತ್ತಿದ್ದ ಇವರು ತನ್ನ ಆಶ್ರಮದಲ್ಲಿದ್ದ ಬಡ ಮಕ್ಕಳನ್ನು, ಮತ್ತು ಹಿರಿಯರನ್ನು ಪ್ರೀತಿಯಿಂದ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.
ಒಮ್ಮೆ ಆಶ್ರಮದಲ್ಲಿದ್ದವರು ತೀವ್ರ ಆಹಾರದ ಕೊರತೆಯಿಂದಾಗಿ ಹಸಿವಿನಿಂದ ಬಳಲುತ್ತಿದ್ದರು. ಪಂಡಿತ್ ರಮಾಬಾಯಿ ದೇವರ ಮೇಲೆ ಅವಲಂಬಿತರಾಗಿ, ಬಡತನವನ್ನು ನಿವಾರಿಸಲು ಬಹಳ ನಂಬಿಕೆಯಿಂದ ಪ್ರಾರ್ಥಿಸುತ್ತಿದ್ದರು. ಪ್ರಾರ್ಥನೆ ಮುಗಿಯುವ ಸಮಯದಲ್ಲಿ ಬಾಗಿಲಲ್ಲಿ ಶ್ರೀಮಂತನೊಬ್ಬ ನಿಂತಿದ್ದನು. ಒಳಗೆ ಕರೆದ ತಾಯಿ ಬಳಿ, “ಅಮ್ಮ, ನಾನು ಧಾನ್ಯ ತುಂಬಿಕೊಂಡು ಹೋಗುತ್ತಿದ್ದ ನನ್ನ ಗಾಡಿಯ ಚಕ್ರ ಮುರಿದು, ನಿಮ್ಮ ಮನೆಯ ಮುಂದೆ ನಿಂತು ಬಿಟ್ಟಿತು. ಭಾರ ತಡೆಯಲಾರದೆ ನಿಂತು ಹೋದ ಗಾಡಿಯಲ್ಲಿ ನಾನು ಮನೆಗೆ ಅಥವಾ ಮಾರುಕಟ್ಟೆಗೆ ಧಾನ್ಯದ ಮೂಟೆಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಹಾಗಾಗಿ ಈ ಧಾನ್ಯದ ಮೂಟೆಗಳನ್ನು ನಿಮ್ಮ ಆಶ್ರಮಕ್ಕೇ ಕೊಟ್ಟು ಬಿಡುತ್ತೇನೆ. ನೀವು ಇದನ್ನು ಸ್ವೀಕರಿಸುತ್ತೀರಾ? ” ಎಂದು ಕೇಳಿದರು. ಅದನ್ನು ಸ್ವೀಕರಿಸಿದ ತಾಯಿ ಶ್ರೀಮಂತನನ್ನು ಕಳುಹಿಸಿ ಬಿಟ್ಟು ಮೊಣಕಾಲೂರಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಹೌದು, ಇಸ್ರಾಯೇಲ್ಯರನ್ನು ಅರಣ್ಯದಲ್ಲಿ ನಡೆಸಿದ ಕರ್ತನು, ಅವರಿಗೆ ಯಾವ ಕೊರತೆಯೂ ಇಲ್ಲದಂತೆ ಪೋಷಿಸಿದರು. ದಣಿದಿದ್ದ ಎಲೀಯ ಪ್ರವಾದಿಯನ್ನು ಕಾಗೆಯ ಮೂಲಕ ಪೋಷಿಸಿದರು. ಹೌದು, ಆತನು ತನ್ನ ಮಕ್ಕಳ ಜೀವನದಲ್ಲಿ ತನ್ನ ಮಹಿಮೆ ಮತ್ತು ಮಹತ್ವವನ್ನು ತೋರಿಸುವ ದೇವರಾಗಿದ್ದಾರೆ.
ನನ್ನ ಪ್ರಿಯರೇ! ದೇವರನ್ನು ಹುಡುಕುವವರಿಗೆ ಯಾವ ಕೊರತೆಯೂ ಇರುವುದಿಲ್ಲ. ನಾವು ದೇವರ ಬಳಿ ನಂಬಿಕೆಯಿಂದ ಕೇಳುವ ಯಾವುದೇ ಪ್ರಾರ್ಥನೆಗೆ ಉತ್ತರಿಸಲು ದೇವರು ಶಕ್ತನಾಗಿದ್ದಾರೆ. ಅತಿಶಯಗಳನ್ನು ಮಾಡುವ ದೇವರು ನಮ್ಮ ಜೀವನದ ಎಲ್ಲಾ ಅಗತ್ಯಗಳಲ್ಲಿ ಅದ್ಭುತವಾಗಿ ನಮಗೆ ಸಹಾಯ ಮಾಡುತ್ತಾರೆ. "ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ" ಆಮೆನ್.
- Mrs. ಸರೋಜಾ ಮೋಹನ್ ದಾಸ್
ಪ್ರಾರ್ಥನಾ ಅಂಶ:
Whats App, Twitter, you Tube, email ಮೂಲಕ ಹೊರಬರುವ ದೈನಂದಿನ ಧ್ಯಾನ ಸಂದೇಶವನ್ನು ಓದುವವರು, ಕೇಳುವವರು ಕರ್ತನಿಗಾಗಿ ಫಲ ಕೊಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482