Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.06.2022
Share:

By Village Missionary Movement

Monday, 13-Jun-2022

ಧೈನಂದಿನ ಧ್ಯಾನ(Kannada) – 14.06.2022

 

ನಾವು ವಿಶೇಷ!

 

"ನಿಜವಾದ ಬೆಳಕು ಲೋಕಕ್ಕೆ ಬರುವದಾಗಿತ್ತು; ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥದು” - ಯೋಹಾನ 1:9

 

ಅತ್ಯಂತ ಪ್ರಸಿದ್ಧ ಶ್ರೀಮಂತ ವ್ಯಕ್ತಿ ವಾಸಿಸುತ್ತಿದ್ದ ಊರಿನಲ್ಲಿ, ನೀತಿವಂತನೂ, ದೇವರಲ್ಲಿ ಭಯಭಕ್ತಿಯುಳ್ಳ ಒಬ್ಬ ವ್ಯಕ್ತಿಯೂ ವಾಸಿಸುತ್ತಿದ್ದರು. ಊರಿನ ಜನರು ಶ್ರೀಮಂತನಿಗೆ ಕೊಡುತ್ತಿದ್ದ ಅದೇ ಗೌರವವನ್ನು, ಈ ವ್ಯಕ್ತಿಗೂ ಕೊಡುತ್ತಿದ್ದರು. ಅವರನ್ನು ನೋಡಲು ಮತ್ತು ಸಲಹೆ ಕೇಳಲು ಹಲವು ಸ್ಥಳಗಳಿಂದ ಅನೇಕರು ಬಂದರು. ಇದು ಶ್ರೀಮಂತನಿಗೆ ಕೋಪ ಮತ್ತು ಅಸೂಯೆಯನ್ನು ಉಂಟುಮಾಡಿತು. ಇದು ಹೇಗೆ? ನಾನು ಪ್ರತಿಭಾವಂತ, ಒಳ್ಳೆಯ ಶ್ರೀಮಂತ, ಅನೇಕರಿಗೆ ಸಹಾಯ ಮಾಡುತ್ತೇನೆ, ಅವನಿಗೋ ಯಾವ ಪ್ರತಿಭೆಯೂ ಇಲ್ಲ, ಯೇಸು ದೇವರನ್ನು ನಂಬಿಯೇ ಜೀವನ ನಡೆಸುತ್ತಿರುವವನು ಇವನಿಗೆ ಹೇಗೆ ಇಷ್ಟೆಲ್ಲಾ ಕೀರ್ತಿ ಮತ್ತು ಗೌರವ ಎಂದು ಯೋಚಿಸಿದನು. ಒಂದು ದಿನ ನೇರವಾಗಿ ಹೋಗಿ ಅವರನ್ನು ನೋಡಿ ವಿಚಾರಿಸೋಣ ಎಂದು ನಿರ್ಧರಿಸಿದನು.

 

ಒಂದು ಸಂಜೆ ಅವನು ಆ ವ್ಯಕ್ತಿಯನ್ನು ನೋಡಲು ಹೋದನು. ಆ ದೈವಭಕ್ತಿಯುಳ್ಳ ಮನುಷ್ಯನು ಅವರನ್ನು ಸ್ವಲ್ಪ ಹೊತ್ತು ಕಾದಿರಿಸಿ, ಕತ್ತಲೆಯಾದ ನಂತರ ಅವನನ್ನು ಭೇಟಿಯಾದರು. ಶ್ರೀಮಂತನಾಗಿದ್ದ ಆ ಮನುಷ್ಯನು, “ನನ್ನನ್ನು ಇತರರು ಗೌರವಿಸುವುದಕ್ಕೂ, ಮರ್ಯಾದೆ ಕೊಡುವುದಕ್ಕೂ ಕಾರಣವಿದೆ. ನನ್ನಂತೆ ಎಲ್ಲರೂ ನಿಮ್ಮನ್ನು ಏಕೆ ಗೌರವಿಸಬೇಕು?'' ಎಂದು ಕೇಳಿದನು.

 

ಆ ವ್ಯಕ್ತಿ ಅವನನ್ನು ತನ್ನ ಮನೆಯ ಹಿಂದಿನ ಗುಲಾಬಿ ತೋಟಕ್ಕೆ ಕರೆದೊಯ್ದರು. ಅಲ್ಲಿ ಚಂದ್ರ ಪ್ರಕಾಶಮಾನವಾಗಿ ಕಾಣುತ್ತಿತ್ತು. ಅವನು ಶ್ರೀಮಂತನಿಗೆ ಹೇಳಿದನು, "ದೇವರು ಸೃಷ್ಟಿಸಿದ ಈ ಗುಲಾಬಿಯು, ಚಂದ್ರನನ್ನು ನೋಡಿ, ನಾನು ಚಂದ್ರನಷ್ಟು ಎತ್ತರದಲ್ಲಿ ಇಲ್ಲವೇ, ಹೊಳೆಯುತ್ತಿಲ್ಲವೇ ಎಂದು ಚಿಂತಿಸುವುದಿಲ್ಲ ಮತ್ತು ಅಸೂಯೆಪಡುವುದಿಲ್ಲ. ಆ ಚಂದ್ರ ಗುಲಾಬಿಯ ಹಾಗೆ ನಾನು ಮೃದುವಾಗಿಯೂ ಮತ್ತು ಕೆಂಪಾಗಿಯೂ ಇಲ್ಲವೇ! ಎಂದು ನೆನೆಸುವುದಿಲ್ಲ. ಕರ್ತನಾದ ಯೇಸು ನಮ್ಮನ್ನು ಪ್ರತ್ಯೇಕವಾದ ಲಕ್ಷಣಗಳೊಂದಿಗೆ, ಪ್ರತ್ಯೇಕವಾದ ಪ್ರತಿಭೆಗಳನ್ನು ಕೊಟ್ಟು ಸೃಷ್ಟಿಸಿದ್ದಾರೆ. ನಾವು ಯಾಕೆ ಒಬ್ಬರನ್ನೊಬ್ಬರು ನೋಡಿ ಹೋಲಿಸಿಕೊಳ್ಳಬೇಕು, ಅಸೂಯೆಪಡಬೇಕು ಮತ್ತು ಚಿಂತಿಸಬೇಕು?" ಎಂದು ಕೇಳಿದರು.

 

ಕಾಯಿನನು ಹೇಬೆಲನ ಮೇಲೆ ಅಸೂಯೆಪಟ್ಟನು. ಯೋಸೇಫನ ಸಹೋದರರು ಯೋಸೇಫನ ಮೇಲೆ ಅಸೂಯೆಪಟ್ಟರು. ಸೌಲ, ದಾವೀದನ ಮೇಲೆ... ಹೀಗೆ ಹೇಳಿಕೊಂಡೇ ಹೋಗಬಹುದು. ನಮ್ಮ ಬಳಿ ಇಲ್ಲದ ಯಾವುದೋ ಒಂದು ಮತ್ತೊಬ್ಬರ ಬಳಿ ಇದ್ದಾಗ ಅಥವಾ ಇತರರು ಅವರನ್ನು ಅಂಗೀಕರಿಸುವಾಗ, ಈ ಅಸೂಯೆ ಅಂತರಂಗದಲ್ಲಿ ಚಿಗುರೊಡೆಯುತ್ತದೆ. ನಮ್ಮಲ್ಲಿ ಇಲ್ಲದಿರುವ ಯಾವುದೋ ಒಂದನ್ನು ಕಂಡು ಇತರರ ಮೇಲೆ ಏಕೆ ನಾವು ಅಸೂಯೆಪಡಬೇಕು? ದೇವರು ಅನೇಕ ಪ್ರತಿಭೆಗಳನ್ನು ಕೊಟ್ಟು ನಮ್ಮನ್ನು ವಿಶೇಷವಾಗಿಯೇ ಸೃಷ್ಟಿಸಿದ್ದಾರಲ್ಲಾ! ಎಂಬ ಉದ್ದೇಶ ನಮಗೆ ಇಲ್ಲದಿದ್ದರೆ, ನಾವು ನಮ್ಮನ್ನು ಕಡಿಮೆ ಅಂದಾಜು ಮಾಡಿಕೊಳ್ಳುತ್ತೇವೆ. ಇತರರ ಬಗ್ಗೆ ಅಸೂಯೆಪಡುತ್ತೇವೆ. ಸ್ನೇಹಿತರೇ! ಅಸೂಯೆಯು ಎಲುಬಿಗೆ ಕ್ಷಯ, ಅದು ನಮ್ಮ ಮನಸ್ಸನ್ನು ಹಾಳುಮಾಡಿ ಬಿಡುತ್ತದೆ. ಆದ್ದರಿಂದ ನಾವು ಪ್ರಾರ್ಥಿಸೋಣ ಮತ್ತು ಈ ಆಲೋಚನೆಯನ್ನು ಹೋಗಲಾಡಿಸಲು ಪ್ರಯತ್ನಿಸೋಣ. ನಾನು ವಿಶೇಷವಾದವನು. ದೇವರು ನನಗೆ ನೀಡಿದ ಪ್ರತಿಭೆಯಿಂದ ನಾನು ದೇವರಿಗೆ ಮತ್ತು ಇತರರಿಗೆ ಪ್ರಯೋಜನಕಾರಿಯಾಗಿ ಬದುಕುತ್ತೇನೆ ಎಂಬ ಆಲೋಚನೆಯೇ ನಮ್ಮಲ್ಲಿ ತುಂಬಿರಲಿ.

- Mrs. ಜ್ಞಾನಜ್ಯೋತಿ ಸಿಂಸೋನ್ 

 

ಪ್ರಾರ್ಥನಾ ಅಂಶ:

"60 ಮಿಷನರಿ ಮನೆಗಳು" ಕಟ್ಟಿಕೊಡಲು ಪಾಲುದಾರರನ್ನು ದೇವರು ಎಬ್ಬಿಸಿಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +9193455404

82



hacklink satın al