Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.06.2022
Share:

By Village Missionary Movement

Friday, 10-Jun-2022

ಧೈನಂದಿನ ಧ್ಯಾನ(Kannada) – 11.06.2022

 

ಇದೆ - ಇಲ್ಲ

 

 "...ಕೆಡುಕನನ್ನು ಎದುರಿಸಬೇಡ..." - ಮತ್ತಾಯ 5:39

 

ಇತ್ತೀಚಿಗೆ ಬರುವ ಸುದ್ದಿಗಳು ಮತ್ತು ಅದರ ವೀಡಿಯೊ ರೆಕಾರ್ಡಿಂಗ್‌ಗಳನ್ನು ನೋಡುವಾಗ ಯುವ ಸಮುದಾಯವು ಎಲ್ಲಿಗೆ ಹೋಗುತ್ತಿದೆ? ಅದು ಯಾವ ಕಡೆಗೆ ಸಾಗುತ್ತಿದೆ? ಎಂದು ತುಂಬಾ ಭಯಾನಕವಾಗಿದೆ. ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳ, ಬಸ್ ನಿಲ್ದಾಣಗಳತ್ತ ಕಣ್ಣು ಹಾಯಿಸದೆ ತಮ್ಮ ಸ್ಥಾನಮಾನ ಮರೆತು ಕ್ಷುಲ್ಲಕ ವಿಷಯಗಳಿಗೆ ಕೌಟುಂಬಿಕ ಕಲಹಕ್ಕೆ ಮುಂದಾಗಿದ್ದಾರೆ. ಇದನ್ನು ನಿಲ್ಲಿಸದೆ ಇತರೆ ವಿದ್ಯಾರ್ಥಿಗಳು ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇನ್ನೊಂದು ಕೆಟ್ಟ ಸಂಗತಿಯೆಂದರೆ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳಗಳಲ್ಲಿ ಒಬ್ಬರಿಗೊಬ್ಬರು ಹೊಡೆದುಕೊಳ್ಳುತ್ತಿದ್ದಾರೆ. ಅವರು ಕೂದಲನ್ನು ಹಿಡಿಯುತ್ತಾರೆ ಮತ್ತು ಆಕ್ರಮಣಕಾರಿಯಾಗಿ ಹೊಡೆದಾಡುತ್ತಾರೆ. ಸಣ್ಣ ಸಣ್ಣ ವಿಷಯದಲ್ಲೂ ಬಿಟ್ಟುಕೊಡುವ ಮನಸ್ಸು ಇರುವುದಿಲ್ಲ. "ನೀನಾ - ನಾನಾ? ಇದೆ - ಇಲ್ಲ" ಎಂದು ನೋಡಿಬಿಡಬೇಕು ಎಂಬುದರಲ್ಲಿ ಧೃಢವಾಗಿದ್ದಾರೆ. ಈ ರೀತಿಯ ಯುವ ಪೀಳಿಗೆಯ ಸ್ಥಿತಿ ತುಂಬಾ ಅಪಾಯಕಾರಿ!

 

ಪರಿಶುದ್ಧ ಗ್ರಂಥದಲ್ಲಿ ಮತ್ತಾಯ 5 ನೇ ಅಧ್ಯಾಯದಲ್ಲಿ ಕರ್ತನಾದ ಯೇಸುಕ್ರಿಸ್ತನು ಒಂದು ಮೂಲಭೂತ ಕ್ರೈಸ್ತನ ಪಾತ್ರ ಹೇಗೆಲ್ಲಾ ಇರಬೇಕು ಎಂದು ಹೇಳುತ್ತಾರೆ. ಅವರ ಬೋಧನೆಗಳು ಅದ್ಭುತವಾಗಿವೆ! ನಮಗೆ ಪ್ರತಿದಿನ ಬೇಕಾಗಿರುವುದು. ಕೆಡುಕನನ್ನು ಎದುರಿಸಬೇಡ. (ಮತ್ತಾ. 5:39) ಎಂದು ಹೇಳುತ್ತಾರೆ. ಯೋಸೇಫನಿಗೆ ತನ್ನ ಸ್ವಂತ ಸಹೋದರರಿಂದ ಹಾನಿಯುಂಟಾಯಿತು. ಆದರೂ ಅವನು ಅದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ. ಬದಲಿಗೆ ಅವನು ತಾಳ್ಮೆಯಿಂದಿದ್ದನು. ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು ಎಂದು ಯೇಸು ಕಲಿಸಿಕೊಟ್ಟಿದ್ದಾರೆ. ಇದರ ಅರ್ಥವೇನೆಂದರೆ, ನಮಗೆ ಹಾನಿ ಮಾಡಬೇಕೆಂದು ಯೋಚಿಸುವಾಗ ನಾವು ಶಾಂತವಾಗಿರಬೇಕು.

 

ಇದನ್ನು ಓದುತ್ತಿರುವ ಸ್ನೇಹಿತರೇ! ನಮ್ಮ ಕೈಯಲ್ಲಿ ಹಲವಾರು ಜವಾಬ್ದಾರಿಗಳಿವೆ ಎಂಬುದನ್ನು ಮರೆಯಬಾರದು. ನಮಗೆ ಕೆಟ್ಟದ್ದು ಯಾವುದೋ ದೇಶದ ಗಡಿಯಿಂದ ಅಥವಾ ನಾವು ಊಹಿಸಲೂ ಸಾಧ್ಯವಾಗದ ವ್ಯಕ್ತಿಯಿಂದ ಬರುವುದಿಲ್ಲ. ನಮ್ಮ ಸುತ್ತಮುತ್ತಲಿನವರಿಂದ, ನಮ್ಮನ್ನು ಅವಲಂಬಿಸಿರುವವರಿಂದ ಮತ್ತು ನಮ್ಮ ಸುತ್ತಮುತ್ತಲಿನ ಸ್ನೇಹಿತರಿಂದ ಕೆಟ್ಟದು ಬರಬಹುದು. ನಾವೇ ತಾಳ್ಮೆಯಿಂದಿರಬೇಕು ಮತ್ತು ಶಾಂತವಾಗಿರಬೇಕೆಂದು ಸತ್ಯವೇದದಿಂದ ಕಲಿತುಕೊಳ್ಳಬೇಕು. ನಮ್ಮ ಮಕ್ಕಳು ಯೌವನಸ್ಥರು ಎಂದು ಯುವ ಪೀಳಿಗೆಗೆ ನಾವೇ ಕಲಿಸಿಕೊಡಬೇಕು. "ಇಂದಿನ ವಿದ್ಯಾರ್ಥಿಗಳೇ ನಾಳಿನ ನಾಯಕರು" ಎನ್ನುತ್ತಾರೆ. ನಿಧಾನವಾಗಿ ಸತ್ಯವೇದ ವಾಕ್ಯಗಳನ್ನು ಶೋಧಿಸಿ ನೋಡುವಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕಲ್ಪಿಸಿಕೊಡಬೇಕು. ಇದೆ- ಇಲ್ಲ ಎನ್ನುವ ಮಾತಿಗೆ ಮತ್ತು ಅಂಥಾ ಅಭ್ಯಾಸಕ್ಕೆ ಕಡಿವಾಣ ಹಾಕಬೇಕು. ಯುವ ಪೀಳಿಗೆಯನ್ನು ಬಿಟ್ಟುಕೊಟ್ಟು ಬದುಕುವವರನ್ನಾಗಿ ರೂಪಿಸೋಣ. ದೇಶದ ಹಿತಾಸಕ್ತಿ ಕಾಪಾಡೋಣ!

- Bro. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಅಂತ್ಯಕಾಲದ ಉಜ್ಜೀವನಕ್ಕಾಗಿ 120 ಮಿಷನರಿಗಳನ್ನು ರೂಪಿಸುವ ಯೋಜನೆಯಲ್ಲಿ ಮಾಡಲಾಗುತ್ತಿರುವ ಪ್ರಯತ್ನಗಳನ್ನು ದೇವರು ಸಫಲ ಪಡಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +9193455404

82



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş