Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.06.2022
Share:

By Village Missionary Movement

Thursday, 09-Jun-2022

ಧೈನಂದಿನ ಧ್ಯಾನ(Kannada) – 10.06.2022

 

ದೂರು ಹೇಳುವುದು

 

 ''…ಚಾಡಿಕೋರನು ವಿುತ್ರರನ್ನು ಅಗಲಿಸುತ್ತಾನೆ" - ಜ್ಞಾನೋಕ್ತಿ 16:28

 

ನಾನು ಕೆಲಸ ಮಾಡುವ ಸ್ಥಳದಲ್ಲಿ ಒಬ್ಬ ವ್ಯಕ್ತಿಯ ಪರಿಚಯವಾಯಿತು. ಅವರು ಮೊದಲನೆಯದಾಗಿ ಕೆಲವರ ಬಗ್ಗೆ ಕೆಲವು ದೂರುಗಳನ್ನು ನನಗೆ ಹೇಳಿದರು. ಅದಕ್ಕೆ ಕಾರಣ ನನ್ನ ಹಿತಕ್ಕಾಗಿ ಎಂದರು. ದಿನಗಳು ಕಳೆದಂತೆ ಹಲವರ ಬಗ್ಗೆ ಹೀಗೆ ಹೇಳತೊಡಗಿದರು. ಆ ಕಹಿ ಬೀಜವು ನನ್ನೊಳಗೆ ಮೊಳಕೆಯೊಡೆಯಲು ಪ್ರಾರಂಭಿಸಿತು. ಅವರು ಯಾರ ಬಗ್ಗೆಯೆಲ್ಲಾ ದೂರು ಹೇಳಿದರೋ ಅವರನ್ನು ನಾನು ನೇರವಾಗಿ ಭೇಟಿಯಾದಾಗ, ನನ್ನೊಳಗಿನ ಆ ಕಹಿ ನನ್ನನ್ನು ಅವರಿಗೆ ಹತ್ತಿರವಾಗದಂತೆ ಮಾಡಿತು. ಆದರೆ ಆ ವ್ಯಕ್ತಿ ಮಾತ್ರ ಯಾವುದೇ ಹಿಂಜರಿಕೆಯಿಲ್ಲದೆ ಅವರಿಗೆ ಒಗ್ಗಿಕೊಂಡನು. ಒಂದು ದಿನ ಭಾನುವಾರದ ಆರಾಧನೆಯ ವೇಳೆ, ನನ್ನ ಬಳಿ ಯಾವಾಗಲೂ ಮತ್ತೊಬ್ಬರ ಬಗ್ಗೆ ದೂರು ಹೇಳುತ್ತಿದ್ದ ವ್ಯಕ್ತಿ ಹಾಡು ಹಾಡುತ್ತಾ ಆರಾಧನೆ ನಡೆಸುತ್ತಿದ್ದರು. ಅದರ ಮೂಲಕ ದೇವರು ನನ್ನೊಂದಿಗೂ ಸಹ ತುಂಬಾ ಸ್ಪಷ್ಟವಾಗಿ ಮಾತನಾಡಿದರು,

 

"ನೀನು ಮನುಷ್ಯನನ್ನು ಏಕೆ ನೋಡುತ್ತೀಯಾ, ಮನುಷ್ಯನು ಹೇಳುವುದನ್ನು ಇಟ್ಟುಕೊಂಡು ಏಕೆ ಕಹಿಯಿಂದ ಬದುಕುತ್ತೀಯಾ?" ಎಂದು ಪ್ರೇರೇಪಿಸಿದರು. ಕೂಡಲೇ ಮರುದಿನ ನಾನು ಮೊದಲು ಆ ವ್ಯಕ್ತಿಯ ಬಳಿಗೆ ಹೋಗಿ, ನಿಮ್ಮ ಆರಾಧನೆ ತುಂಬಾ ಚೆನ್ನಾಗಿತ್ತು ದೇವರು ನನ್ನನ್ನು ಮುಟ್ಟಿದರು ಎಂದು ಹೇಳಿ ಒಳ್ಳೆಯ ವ್ಯಕ್ತಿತ್ವವನ್ನು ತೋರ್ಪಡಿಸಿದೆನು. ನನ್ನ ಬಳಿ ದೂರು ಹೇಳುತ್ತಿದ್ದ ವ್ಯಕ್ತಿಯ ಬಳಿಗೆ ಹೋಗಿ, ಇನ್ನು ಮುಂದೆ ನನ್ನೊಂದಿಗೆ ಹೀಗೆ ಮಾತನಾಡಬೇಡ ಎಂದು ದಯೆಯಿಂದ ಹೇಳಲು ದೇವರು ಕೃಪೆ ತೋರಿಸಿದರು. ಆ ದಿನದಿಂದ ನಾನು ಇತರರ ಬಗ್ಗೆ ಮಾತನಾಡುವ ಸ್ಥಳದಲ್ಲಿ ಇಂದಿನವರೆಗೂ ನಿಲ್ಲುವುದೇ ಇಲ್ಲ. ನನ್ನ ಕಹಿತನವೆಲ್ಲಾ ಮಾರ್ಪಟ್ಟಿತು.

 

ಮತ್ತು ಯಾರಾದರೂ ಇಲ್ಲದಿರುವ ಮೂರನೇ ವ್ಯಕ್ತಿಯ ಬಗ್ಗೆ ನಿಮಗೆ ದೂರು ಹೇಳಲು ಪ್ರಾರಂಭಿಸಿದರೆ, ವಿಷಯವನ್ನು ನಯವಾಗಿ ಬದಲಾಯಿಸಿ ಮತ್ತು ಆ ಮೂರನೇ ವ್ಯಕ್ತಿಯಲ್ಲಿನ positive- ವಿಷಯಗಳ ಬಗ್ಗೆ ಮಾತನಾಡುವ ಮೂಲಕ ಸಂಭಾಷಣೆಯನ್ನು ಕೊನೆಗೊಳಿಸಿ. ಚಾಡಿ ಹೇಳಲು ಬಂದವರೂ ಸಹ ಸುಮ್ಮನಾಗಿಬಿಡುತ್ತಾರೆ. ಯಾಜಕಕಾಂಡ 19:16 ರಲ್ಲಿ ಹೀಗೆ ಹೇಳುತ್ತದೆ, "ಪರಿಚಯವುಳ್ಳವರಲ್ಲಿ ಒಬ್ಬರ ಮೇಲೊಬ್ಬರು ಚಾಡಿಹೇಳಬಾರದು. ಮತ್ತೊಬ್ಬನಿಗೆ ಮರಣ ಶಿಕ್ಷೆಯಾಗಲೇಬೇಕೆಂದು ಛಲ ಹಿಡಿಯಬಾರದು..." ಹೌದು ಪ್ರಿಯರೇ, ನಾವು ಸಾಮಾನ್ಯವಾಗಿ ನಮ್ಮನ್ನು ತಿಳಿಯದೆ ಇತರರ ಬಗ್ಗೆ ಮಾತನಾಡುತ್ತೇವೆ. ಆದರೆ ಸತ್ಯವೇದವು ಇದನ್ನು ಸ್ಪಷ್ಟವಾಗಿ ವಿರೋಧಿಸುತ್ತಿದೆ.

 

Spanish ಭಾಷೆಯಲ್ಲಿ ಒಂದು ಅದ್ಭುತ ಗಾದೆ ಇದೆ. "Who ever gossips to you, will gossip about you" (ನಿನ್ನ ಬಳಿ ಮತ್ತೊಬ್ಬರ ಬಗ್ಗೆ ದೂರು ಹೇಳುವವರು, ಒಂದು ದಿನ ನಿನ್ನ ಬಗ್ಗೆಯೂ ಚಾಡಿ ಹೇಳುವರು) ಆದ್ದರಿಂದ ದೂರು ಹೇಳುವುದು ಮತ್ತು ಮತ್ತೊಬ್ಬರ ಬಗ್ಗೆ ದೂರುಗಳನ್ನು ಕೇಳುವುದು ಎರಡನ್ನೂ ತೊರೆದುಬಿಡೋಣ. ಕಹಿ ಹೃದಯವಿಲ್ಲದೆ ಪರಿಶುದ್ಧ ಹೃದಯದೊಂದಿಗೆ ದೇವರ ಪ್ರೀತಿಯಿಂದ ತುಂಬಿಸಲ್ಪಟ್ಟವರಾಗಿ ಜೀವಿಸೋಣ.

- ಟಿ. ರಾಜನ್

 

ಪ್ರಾರ್ಥನಾ ಅಂಶ:

ಗ್ರಾಮ ಒಂದಕ್ಕೆ 2,000 ರೂ.ಗಳನ್ನು ನೀಡಿ ಪ್ರೋತ್ಸಾಹಿಸುವ ಗ್ರಾಮ ಪಾಲುದಾರರನ್ನು ದೇವರು ಎಬ್ಬಿಸಿ ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +9193455404

82



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş