Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.06.2022
Share:

By Village Missionary Movement

Thursday, 09-Jun-2022

ಧೈನಂದಿನ ಧ್ಯಾನ(Kannada) – 09.06.2022

 

ಬ್ರೇಕ್

 

"...ಆರಂಭಕ್ಕಿಂತ ಅವನ ಅಂತ್ಯವನ್ನು ಆಶೀರ್ವದಿಸಿದನು" - ಯೋಬ 42:12

 

ಒಮ್ಮೆ ಒಬ್ಬ ಭೌತಶಾಸ್ತ್ರದ ಶಿಕ್ಷಕನು ತನ್ನ ವಿದ್ಯಾರ್ಥಿಗಳ ಬಳಿ, "ವಾಹನಗಳಿಗೆ ಬ್ರೇಕ್ ಏಕೆ ಇಡಲಾಗಿದೆ?" ಎಂದು ಕೇಳಿದರು. ಹಲವು ವಿಧವಾದ ಬೇರೆ ಬೇರೆ ಉತ್ತರಗಳು ದೊರೆತವು. ನಿಲ್ಲಿಸಲು ಮತ್ತು ವೇಗವನ್ನು ಕಡಿಮೆ ಮಾಡಲು, ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು, ನಿಧಾನವಾಗಿ ಹೋಗುವುದಕ್ಕೆ, ಸರಾಸರಿ ವೇಗದಲ್ಲಿ ಹೋಗಲು ಹೀಗೆ ವಿಭಿನ್ನವಾದ ಉತ್ತರಗಳು ವಿದ್ಯಾರ್ಥಿಗಳ ಬಳಿಯಿಂದ ಬಂತು. "ವೇಗವಾಗಿ ಓಡಿಸಲು" ಎಂದು ವಿದ್ಯಾರ್ಥಿಯೊಬ್ಬ ಹೇಳಿದ. ತಕ್ಷಣ ಇತರ ವಿದ್ಯಾರ್ಥಿಗಳು ನಕ್ಕರು. ಶಿಕ್ಷಕರು ಹೇಳಿದರು, “ಹೌದು, ಯಾವುದೇ ಬ್ರೇಕ್‌ಗಳಿಲ್ಲ ಅಂದುಕೊಳ್ಳಿ. ನಿಜವಾಗಿಯೂ, ನೀವು ವೇಗವಾಗಿ ಓಡಿಸಲು ಸಾಧ್ಯವಿಲ್ಲ. ಬ್ರೇಕ್‌ ಮಾತ್ರವೇ ನಾವು ನಿಲ್ಲಲು ಬಯಸುವ ಸ್ಥಳದಲ್ಲಿ ನಿಲ್ಲಿಸಿಕೊಳ್ಳಬಹದು ಎಂಬ ಧೈರ್ಯವನ್ನು ಕೊಟ್ಟು ವೇಗವಾಗಿ ಓಡುವಂತೆ ಮಾಡುತ್ತದೆ” ಎಂದರು. ನಿಧಾನವಾಗಿ ಬ್ರೇಕ್‌ ಹಿಡಿದು ದಾಟಿ ಬಿಟ್ಟರೆ ನಂತರ ನಾವು ಬಯಸಿದ ಗುರಿಯನ್ನು ತಲುಪಬಹುದು.

 

Sudden Break ಹಾಕಿ ನಿಂತ ಒಬ್ಬ ವ್ಯಕ್ತಿಯ ಜೀವನದ ಬಗ್ಗೆ ಸತ್ಯವೇದದಲ್ಲಿ ಓದುತ್ತೇವೆ. ಅವರೇ ಯೋಬ. ಅವರಿಗೆ 10 ಮಕ್ಕಳಿದ್ದರು. ಹೇರಳವಾದ ಪ್ರಾಣಿ ಪಕ್ಷಿಗಳು ಮತ್ತು ಬಹಳಷ್ಟು ಕೆಲಸದವರು ಇದ್ದರು. ಇಷ್ಟು ಸಮೃದ್ಧಿಯಾಗಿ, ಸುಭಿಕ್ಷವಾಗಿ ಇದ್ದ ಮನುಷ್ಯನಿಗೆ ಒಂದೇ ದಿನದಲ್ಲಿ ಸಕಲ ಸೌಭಾಗ್ಯಗಳು ಬ್ರೇಕ್ ಆಯಿತು. ಒಂದೇ ದಿನದಲ್ಲಿ ಎಲ್ಲವನ್ನೂ ಕಳೆದುಕೊಂಡರು. ಈ ಎಲ್ಲದರಲ್ಲೂ, ಯೋಬನು ಪಾಪ ಮಾಡಲಿಲ್ಲ ದೇವರನ್ನು ದೂಷಿಸಲೂ ಇಲ್ಲ. ತನ್ನ ಜೀವನ ನಡೆಸುವ ದೇವರು ಬ್ರೇಕ್ ಹಾಕಿದ್ದು ತಪ್ಪಾಗೋದಿಲ್ಲ ಎಂದು ನಂಬಿದ್ದರು. ನಂತರ, ಯೋಬನು ತಾನು ಕಳೆದುಕೊಂಡಿದ್ದ ಎಲ್ಲಾ ಆಶೀರ್ವಾದಗಳನ್ನು ಎರಡರಷ್ಟು ಪಡೆದುಕೊಂಡರು. ಕರ್ತನು ಯೋಬನ ಆರಂಭಕ್ಕಿಂತ ಅವನ ಅಂತ್ಯವನ್ನು ಆಶೀರ್ವದಿಸಿದನು.

 

ಇದನ್ನು ಓದುತ್ತಿರುವ ದೇವರ ಮಕ್ಕಳೇ! ನಮ್ಮ ಜೀವನದಲ್ಲಿ ನಷ್ಟಗಳು, ಅಡೆತಡೆಗಳು, ಬ್ರೇಕ್ ಗಳು (ವಿರಾಮಗಳು) ಬರುವಾಗ ಅವು ನಮ್ಮ ಜೀವನದ ವೇಗವನ್ನು ಕಡಿಮೆ ಮಾಡಲು ಬಂದಂತೆ ನೆನೆಸಿ ನಮ್ಮ ಮನಸ್ಸನ್ನು ಕುಗ್ಗಿಸುತ್ತೇವೆ. ನಮ್ಮ ನಂಬಿಕೆಗಳನ್ನು ಕೆಡಿಸುತ್ತಿದೆ ಎಂದು ನಾವು ಭಾವಿಸುತ್ತೇವೆ. ನಿಮ್ಮ ಜೀವನದಲ್ಲಿ ಬರುವ ಬ್ರೇಕ್‌ಗಳು ನಿಮ್ಮನ್ನು ನಿಧಾನಗೊಳಿಸಲು ಅಲ್ಲ, ವೇಗವಾಗಿ ಹೋಗುವುದಕ್ಕಾಗಿಯೇ! ನಮ್ಮ ಜೀವನದಲ್ಲಿ ಇದ್ದಕ್ಕಿದ್ದಂತೆ ಹಾಕುವಂತೆ ತೋರುವ ಬ್ರೇಕ್ ದೇವರ ಪಾದದ ಕೆಳಗೆ ಅಥವಾ ಅವರ ಕೈಯೊಳಗೇ ಇದೆ. ದೇವರ ಕೈ ಮೀರಿ ನಮ್ಮ ಜೀವನದಲ್ಲಿ ಏನೂ ನಡೆಯುವುದಿಲ್ಲ. ಆದುದರಿಂದ ಶಾಂತವಾಗಿದ್ದು ಯೋಬನಂತೆ ಎರಡರಷ್ಟು ಆಶೀರ್ವಾದಗಳನ್ನು ಪಡೆದುಕೊಳ್ಳೋಣ.

- Mrs. ಶಕ್ತಿ ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಒಂದೊಂದು ಹಳ್ಳಿಗೂ ಒಂದು ಗಿದ್ಯೋನ್ (ಯೌವನಸ್ಥನು) ಪ್ರಾರ್ಥನಾ ಗುಂಪಿನ ನಾಯಕನಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +9193455404

82



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin