Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.06.2022
Share:

By Village Missionary Movement

Wednesday, 08-Jun-2022

ಧೈನಂದಿನ ಧ್ಯಾನ(Kannada) – 08.06.2022

 

ಕರ್ತನ ಮೇಲೆ ನಂಬಿಕೆ

 

''…ಯೆಹೋವನನ್ನೇ ನಂಬುತ್ತಾನೋ ಅವನೇ ಧನ್ಯನು." - ಕೀರ್ತನೆ 40:4

 

ಜೇಮ್ಸ್ ಎಂಬ ಹುಡುಗನಿಗೆ ಹುಟ್ಟುವಾಗಲೇ ಕೈ, ಕಾಲುಗಳು ಸರಿಯಾಗಿ ಬೆಳವಣಿಗೆಯಾಗಿರಲಿಲ್ಲ. ಕಾಲುಗಳಲ್ಲಿ ಕೆಲವು ಬೆರಳುಗಳು ಮಾತ್ರವೇ ಚಾಚಲ್ಪಟ್ಟಿದ್ದವು. ಅವುಗಳೊಂದಿಗೇ ಅವನು ತನ್ನ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದನು. ಶಾಲೆಗೆ ಸೇರಿದಾಗ ಅನೇಕರು ಅವನನ್ನು ಸಹಾನುಭೂತಿಯಿಂದ ಮತ್ತು ಕೆಲವರು ಅಪಹಾಸ್ಯದಿಂದ ನೋಡಿದರು. ಜೇಮ್ಸ್ ತನ್ನ ಸ್ಥಿತಿಯ ಬಗ್ಗೆ ಚಿಂತಿತನಾಗಿದ್ದನು ಮತ್ತು ಶಾಲೆಗೆ ಹೋಗದಿರಲು ನಿರ್ಧರಿಸಿದನು. ಪೋಷಕರು ಅವನಿಗೆ ಮನೆಯಲ್ಲೇ ಓದಿಕೊಳ್ಳಲು ವ್ಯವಸ್ಥೆ ಮಾಡಿದರು. ಶಾಲೆಯ ಪಾಠಗಳ ಜೊತೆಗೆ, ಅವರು ಬೈಬಲ್ ಅನ್ನು ಸಹ ಕಲಿಸಿದರು. ಅವನೂ ಸಹ ಸತ್ಯವೇದವನ್ನು ಚೆನ್ನಾಗಿ ಓದಿದನು. ಮೇಲಿಂದ ಮೇಲೆ ಕರ್ತನ ಮೇಲೆ ನಂಬಿಕೆ ಇಡತೊಡಗಿದ ಮೇಲೆ ತನ್ನ ಚಿಂತೆಯನ್ನು ಮರೆತುಬಿಟ್ಟನು. ನನ್ನ ಮೂಲಕವೂ ದೇವರು ಮಹಿಮೆ ಹೊಂದಲು ಸಾಧ್ಯ ಎಂಬ ನಂಬಿಕೆಯಿಂದ ಕರ್ತನನ್ನು ಹಿಡಿದುಕೊಂಡನು. ಎಂಥಾ ಆಶ್ಚರ್ಯ ಎಂದರೆ, ಇಂದು ಬೈಬಲ್ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದಾರೆ.

 

ಸತ್ಯವೇದದಲ್ಲಿ ಯೋಬನ ಪುಸ್ತಕವು ಶೋಧನೆಯ ಸಮಯದಲ್ಲಿ ನಮ್ಮನ್ನು ಬಲಗೊಳಿಸುವ ಪುಸ್ತಕವಾಗಿದೆ. ಒಂದೇ ದಿನದಲ್ಲಿ ಎಲ್ಲವನ್ನೂ ಕಳೆದುಕೊಂಡರೂ ಕರ್ತನನ್ನು ದೂಷಿಸದೆ ಕರ್ತನ ಮೇಲಿರುವ ತನ್ನ ನಂಬಿಕೆಯನ್ನು ಬಿಡದವರಾಗಿ, ಕರ್ತನೇ ಕೊಟ್ಟರು, ಕರ್ತನೇ ತೆಗೆದುಕೊಂಡರು; ಕರ್ತನ ನಾಮಕ್ಕೆ ಸ್ತೋತ್ರ ಎಂದರು. ನಿನಗೆ ಎಲ್ಲಾ ಸಾಧ್ಯವಾಗಿದೆ; ನಿನಗೆ ಯಾವ ಆಲೋಚನೆಯೂ ತಡೆಯಲ್ಪಡುವದಿಲ್ಲವೆಂದು ತಿಳಿದಿದ್ದೇನೆ (ಯೋಬ 42: 2) ಎಂದರು. ಅಷ್ಟರಮಟ್ಟಿಗೆ ಅವರು ಕರ್ತನನ್ನು ನಂಬಿಕೊಂಡಿದ್ದರು.

 

ಇದನ್ನು ಓದುತ್ತಿರುವ ದೇವರ ಮಕ್ಕಳೇ! ನಿಮ್ಮ ನಂಬಿಕೆ ಎಲ್ಲಿದೆ? ಯಾರ ಮೇಲಿದೆ? ದೇಹದ ಮೇಲಾ, ಹಣದ ಮೇಲಾ, ವಸ್ತುವಿನ ಮೇಲಾ, ಮನುಷ್ಯರ ಮೇಲಾ ಎಲ್ಲವೂ ಒಂದು ದಿನ ಬದಲಾಗಿ ಬಿಡುತ್ತದೆ. ದೇವರ ಹೃದಯಕ್ಕೆ ತಕ್ಕವನಾಗಿದ್ದ ದಾವೀದನು, 

 

"ಮನುಷ್ಯರಲ್ಲಿ ಭರ ವಸವಿಡುವದಕ್ಕಿಂತ ಕರ್ತನಲ್ಲಿ ನಂಬಿಕೆಯಿಡುವದು ಒಳ್ಳೇದು." (ಕೀರ್ತನೆ 118: 8) ಎಂದು ಹೇಳುತ್ತಾರೆ. ವಸ್ತುವಿನ ಮೇಲೆ ನಂಬಿಕೆಯಿದ್ದರೆ ವಸ್ತು ಇಲ್ಲದಿರುವಾಗ ಬಳಲಿಹೋಗುತ್ತೇವೆ. ಕರ್ತನು ಮಾರ್ಪಡದಾತನು, ಸರ್ವಶಕ್ತನು ಆತನನ್ನು ನಂಬಿದರೆ, ಎಲ್ಲಾ ಸಮಯದಲ್ಲೂ ಯೋಬನಂತೆ ದಣಿವಿಲ್ಲದೆ ಓಡಲು ಸಾಧ್ಯ. ಯಾವನು ಕರ್ತನಲ್ಲಿ ಭರವಸವಿಟ್ಟಿರುವನೋ ಯಾವನಿಗೆ ಕರ್ತನು ನಿರೀಕ್ಷೆ ಯಾಗಿದ್ದಾನೋ ಆ ಮನುಷ್ಯನು ಧನ್ಯನು ಎಂದು ಯೆರೆಮಿಯ 17:7 ರಲ್ಲಿ ನೋಡುವಂತೆ ಧನ್ಯರಾಗಿರೋಣ.

- M. ಹೆಪ್ಸಿ ಮನುವೇಲ್ ಜಯರಾಜ್

 

ಪ್ರಾರ್ಥನಾ ಅಂಶ:

ಯೌವನಸ್ಥರ ಸಂಜೆ ಕಾರ್ಯಕ್ರಮದ ಮೂಲಕ ಮಾರ್ಗದರ್ಶನ ಪಡೆಯುತ್ತಿರುವ ಯೌವನಸ್ಥರಿಗಾಗಿ, ಹಳ್ಳಿಗಳಲ್ಲಿ ಇನ್ನಷ್ಟು ಹೊಸ ಪ್ರಾರ್ಥನಾ ಗುಂಪುಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +9193455404

82



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin