Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.01.2021
Share:

By Village Missionary Movement

Saturday, 30-Jan-2021

ಧೈನಂದಿನ ಧ್ಯಾನ(Kannada) – 30.01.2021

ನೀನು ಎಲ್ಲಿಗೆ ಓಡುತ್ತಿದ್ದೀಯ?

"ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ... ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ” - ಮತ್ತಾಯ 7:13,14

ನಮ್ಮ ಅನುದಿನದ ಜೀವನ ಪ್ರಯಾಣದಲ್ಲಿ ನಾವು ಬಹಳ ವೇಗವಾಗಿ ಓಡುತ್ತಲೇ ಇದ್ದೇವೆ. ಏನನ್ನು ನೋಡುತ್ತ ಓಡುತ್ತಿದ್ದೇವೆ? ಚಿಕ್ಕವರು ಶಾಲೆಯನ್ನು ನೋಡಿ!.... ಯೌವ್ವನಸ್ಥರು ಮದುವೆಯನ್ನು ನೋಡಿ!... ಮಧ್ಯ ವಯಸ್ಸಿನವರು ಪದವಿ, ಹಣ, ಕುಟುಂಬವನ್ನು ನೋಡುತ್ತಾ!... ವಯಸ್ಸಾದವರು ಎಲ್ಲಿಗೆ ಹೋಗುವುದು, ಏನು ಮಾಡುವುದು ಎಂದು ತಿಳಿಯದೆ ದಿನಗಳು ಕಳೆಯುತ್ತಾ, ಮರಣವನ್ನು ನೋಡುತ್ತಾ ಓಡುತ್ತಿದ್ದಾರೆ. ಅಂದರೆ ಮೊತ್ತದಲ್ಲಿ ನಾವೆಲ್ಲರೂ ಕೂಡ ಸಮಾಧಿಯನ್ನು ನೋಡುತ್ತಾ ಓಡುತ್ತಿದ್ದೇವೆ. ಸರಿ, ಆ ಓಟವು ಮುಗಿದ ನಂತರ ಖಂಡಿತವಾಗಿ ನಮಗೆ ಒಂದು ಪ್ರತಿಫಲ ಉಂಟು. ಒಂದು ಗೆಲುವು ಅಥವಾ ಸೋಲು! ಒಬ್ಬರು ನದಿಯನ್ನು ದಾಟಿ ತೀರಕ್ಕೆ ಹೋಗುವ ಹಾಗೆ ನಾವು ಮರಣವನ್ನು ದಾಟಿ ನಿತ್ಯಜೀವವನ್ನೋ ನಿತ್ಯನಾಶನ ವನ್ನೋ ಹೊಂದಿಕೊಳ್ಳಲೇಬೇಕು.

ಈ ನಿತ್ಯ ನಾಶನವುಳ್ಳ ನರಕದಲ್ಲಿ ಸ್ಥಳ ಸಿಗುವುದಕ್ಕಾಗಿ ನಾವು ಏನನ್ನು ಮಾಡಬೇಕಾಗಿಲ್ಲ; ಸುಮ್ಮನೆ ಇದ್ದರೆ ಸಾಕು. ಆದರೆ ನಿತ್ಯಜೀವವನ್ನು ಹೊಂದಿ ಪರಲೋಕಕ್ಕೆ ಹೋಗಬೇಕಾದರೆ ಅನುಮತಿ ಚೀಟಿಯನ್ನು ಈ ಭೂಮಿಯಲ್ಲೇ ಪಡೆದುಕೊಳ್ಳಬೇಕು. ಮುಂಚೆಯೇ ನಾವು ರಿಸರ್ವೇಷನ್ ಮಾಡಿಬಿಡಬೇಕು.ಆ  ಅನುಮತಿ ಚೀಟಿಯೇ ಯೇಸುಕ್ರಿಸ್ತನು ಕೊಡುವ ರಕ್ಷಣೆ! ಅವರೇ ಯುಗದ ಸಮಾಪ್ತಿಯವರೆಗೆ ನಮ್ಮನ್ನು ನೆಲೆಗೊಳ್ಳುವಂತೆ ಮಾಡಿ, ಅನುದಿನವು ರಕ್ಷಣೆಗೆ ತಕ್ಕಹಾಗೆ ನಡೆಸಿ, ನಮ್ಮನ್ನು ಪರಿಶುದ್ಧ ಗೊಳಿಸಿ, ಮೋಕ್ಷ ಜೀವನವನ್ನು ಪಡೆದುಕೊಳ್ಳಲು ಸಿದ್ಧಮಾಡುತ್ತಾರೆ. ಈ ಸಿದ್ಧತೆ ಇಲ್ಲದೆ ನಾವು ಮರಣವನ್ನು ಭೇಟಿ ಮಾಡುವುದಾದರೆ ರಕ್ಷಕನನ್ನು ನೀತಿಯುಳ್ಳ ನ್ಯಾಯಾಧಿಪತಿಯಾಗಿ ಕಾಣುವಾಗ ದಿಗ್ಭ್ರಮೆಗೊಂಡು ನಿಲ್ಲುತ್ತೇವೆ. "ದೇವರೇ ಇನ್ನು ಒಂದೇ ಒಂದು ಸಂದರ್ಭವನ್ನು ನನಗೆ ಕೊಡಿ. ಲೋಕಕ್ಕೆ ಹೋಗಿ ನಿಮ್ಮನ್ನು ನಂಬುತ್ತೇನೆ, ವಿಶ್ವಾಸವಿಡುತ್ತೇನೆ, ನಿಮ್ಮನ್ನು ಅಂಗೀಕರಿಸುತ್ತೇನೆ"ಎಂದು ಬೇಡಿಕೊಂಡರೂ ಆ ಅವಕಾಶ ನಮಗಿಲ್ಲ. ಸೈತಾನನಿಗಾಗಿಯು ಅವನ ದೂತರಿಗಾಗಿಯೂ ಸಿದ್ಧ ಮಾಡಿಟ್ಟಿರುವ ಅಗ್ನಿಗುಂಡದಲ್ಲಿ ತಳ್ಳಲ್ಪಡುತ್ತೇವೆ. ನಿತ್ಯ ವೇದನೆಯಾದ ಆ ಸ್ಥಳ ಅಷ್ಟೊಂದು ಭಯಂಕರವಾಗಿರುತ್ತದೆ!

ಪ್ರೀತಿಯ ಸಹೋದರ ಸಹೋದರಿಯರೇ! ಮರಣದ ನಂತರ ಇರುವ ಜೀವನವನ್ನು ಆರಿಸಿಕೊಳ್ಳುವ ಅವಕಾಶ, ನಮ್ಮೊಬ್ಬೊಬ್ಬರಿಗೂ ಈ ಲೋಕದಲ್ಲಿಯೇ ಕೊಡಲ್ಪಟ್ಟಿದೆ. ನೀವು ಯಾವ ಮಾರ್ಗವನ್ನು ಆರಿಸಿಕೊಳ್ಳಲಿದ್ದೀರ? ಪ್ರೀತಿ, ಸಂತೋಷ, ಸಮಾಧಾನ ತುಂಬಿದ ಅಂದರೆ ಇಕ್ಕಟ್ಟಾದ ಬಾಗಿಲಿನೊಳಗೆ ಪರಲೋಕಕ್ಕೆ ಹೋಗುವ ದಾರಿಯನ್ನಾ? ಅಥವಾ ಅಳು, ಹಲ್ಲು ಕಡಿಯುವಿಕೆ ತುಂಬಿದ ನರಕಕ್ಕೆ ಹೋಗುವ ವಿಶಾಲವಾದ ದಾರಿಯನ್ನಾ? ಒಂದು ವೇಳೆ ತಪ್ಪಾದ ದಾರಿಯಲ್ಲಿ ಓಡುತ್ತಿರುವುದಾದರೆ, ಬದಲಾಗೋಣ. ನೀವು 11ನೇ ತರಗತಿಯಲ್ಲಿ ತೆಗೆದುಕೊಂಡ ಕೋರ್ಸನ್ನು 12ನೇ ತರಗತಿಯಲ್ಲಿ ಬದಲಾಯಿಸಲಾಗುವುದಿಲ್ಲ; ಆದರೆ ನೀವು ಜೀವಂತವಾಗಿರುವ ಈ ದಿನಗಳಲ್ಲಿ ನಿಮ್ಮ ಪಾಪದ ಮಾರ್ಗವನ್ನು ಬಿಟ್ಟು ಪರಿಶುದ್ಧವಾದ ಮಾರ್ಗಕ್ಕೆ ನಿಮ್ಮನ್ನು ಮಾರ್ಪಡಿಸಿಕೊಳ್ಳಬಹುದು. ಕರ್ತನು ಸಹಾಯ ಮಾಡುತ್ತಾರೆ.
-    Mrs. ಭುವನ ಧನಪಾಲನ್

ಪ್ರಾರ್ಥನಾ ಅಂಶ:-
ಕಿರಿಯರ ಪಾಲುದಾರರ ಯೋಜನೆಯಲ್ಲಿ ಸೇರಿರುವ ಮಕ್ಕಳ ಭವಿಷ್ಯಕ್ಕಾಗಿ, ಮತ್ತು ಅವರ ಭವಿಷ್ಯವು ಆಶೀರ್ವಾದವಾಗಿ ರೂಪಿಸಲ್ಪಡುವುದಕ್ಕಾಗಿ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet matbet holiganbet sahabet onwin bets10 bets10 giriş bets10 güncel giriş betcio atlasbet bets10 bets10 giriş betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel jojobet jojobet holiganbet holiganbet cashwin grandpashabet betgit giriş betgit grandpashabet giriş grandpashabet