Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.06.2022
Share:

By Village Missionary Movement

Tuesday, 07-Jun-2022

ಧೈನಂದಿನ ಧ್ಯಾನ(Kannada) – 07.06.2022

 

ಹಿಸುಕುವುದರಿಂದ ವಾಸನೆ

 

"...ಆತನೇ ನನ್ನನ್ನು ಶೋಧಿಸಿ ನೋಡಿದರೆ ಚೊಕ್ಕ ಬಂಗಾರವಾಗಿ ಕಾಣಿಸುವೆನು" - ಯೋಬ 23:10

 

"ಚುಚ್ಚುಮದ್ದುಗಳ ಪಿತಾಮಹ" ಎಂದು ಕರೆಯಲ್ಪಡುವ ಲೂಯಿಸ್ ಪಾಸ್ಕಲ್ ಗೆ ಐದು ಮಕ್ಕಳು. ಟೈಫಾಯಿಡ್‌ನಿಂದ ಸತತವಾಗಿ ಮೂರು ಮಕ್ಕಳು ಸಾವನ್ನಪ್ಪಿದರು. ಇಂತಹ ಕಾಯಿಲೆಗಳಿಗೆ ಕಾರಣವೇನು ಎಂದು ಅವರು ತಕ್ಷಣವೇ ಯೋಚಿಸಿದರು. ಅನೇಕ ಸಂಶೋಧನೆಗಳ ನಂತರ, ಸೂಕ್ಷ್ಮಜೀವಿಗಳು ಈ ರೋಗಗಳಿಗೆ ಕಾರಣವೆಂದು ಅವರು ಕಂಡುಕೊಂಡರು. ಇದನ್ನು ತಡೆಯಲು ಏನು ಮಾಡಬೇಕು ಎಂಬುದನ್ನೂ ಸಾಕಷ್ಟು ಸಂಶೋಧನೆ ನಡೆಸಿ ಚುಚ್ಚುಮದ್ದುಗಳನ್ನು ಕಂಡು ಹಿಡಿದರು. ಅವರು ಟೈಫಾಯಿಡ್‌ಗೆ ಮಾತ್ರವಲ್ಲದೆ ಕಾಮಾಲೆ, ಡಿಫ್ತೀರಿಯಾ ಮತ್ತು ರೇಬೀಸ್‌ನಂತಹ ರೋಗಗಳಿಗೂ ಲಸಿಕೆಗಳನ್ನು ಕಂಡುಹಿಡಿದರು. ಅವರ ಜೀವನದ ದುರಂತಗಳೇ ನೇರವಾಗಿ ಹೊಸ ಆವಿಷ್ಕಾರಗಳಿಗೆ ಕಾರಣವಾಯಿತು.

 

ಗುಲಾಬಿ ಹೂಗಳು ಮುಳ್ಳುಗಳಲ್ಲಿ, ಉಜ್ಜಿಕೊಂಡಾಗಲೇ ಅಧಿಕ ಪರಿಮಳ ಬೀರುತ್ತದೆ. ಶ್ರೀಗಂಧದ ಮರವನ್ನು ಉಜ್ಜುತ್ತಾ ಉಜ್ಜುತ್ತಲೇ ವಾಸನೆ ಬರುತ್ತದೆ. ಅದರಂತೆಯೇ, ಮನುಷ್ಯರಾಗಿರುವ ನಾವು, ಶೋಧನೆಗೆ ಒಳಗಾದಾಗ ಮಾತ್ರವೇ ನಮ್ಮೊಳಗೆ ಉಜ್ಜಿಹೋಗಿ, ಕೆಳಭಾಗದಲ್ಲಿರುವ ಗುಣಗಳು ಹೊರತರಲ್ಪಡುತ್ತವೆ. ಶೋಧಿಸಲ್ಪಡುವಾಗ ಕಷ್ಟವಾದರೂ, ಆ ಸಮಯದಲ್ಲೇ ನಮ್ಮ ಅಸಾಧಾರಣ ಗುಣಗಳು ಪ್ರಕಟವಾಗುತ್ತವೆ. ಆಗ ಮಾತ್ರವೇ ನಮ್ಮ ಸಂಪೂರ್ಣ ಶಕ್ತಿಯನ್ನು ತಿಳಿಯಲು ಸಾಧ್ಯ. ನಮ್ಮೊಳಗೆ ನಿದ್ರಿಸುತ್ತಿರುವ ಪ್ರತಿಭೆಗಳೂ ಸಹ ಶೋಧಿಸಲ್ಪಡುವಾಗ ಪ್ರಕಟವಾಗುತ್ತದೆ. ಆದುದರಿಂದಲೇ ಯೋಬನು ಧೈರ್ಯವಾಗಿ ಹೇಳುತ್ತಾರೆ, "ಆತನು ನನ್ನನ್ನು ಶೋಧಿಸಿ ನೋಡಿದರೆ ಚೊಕ್ಕ ಬಂಗಾರವಾಗಿ ಕಾಣಿಸುವೆನು" ಎಂದು! ಮೋಶೆ ಅರಣ್ಯದಲ್ಲಿ ಶೋಧಿಸಲ್ಪಟ್ಟಾಗ, ದೊಡ್ಡ ನಾಯಕನಾಗಿ ಮಾರ್ಪಟ್ಟನು. ಯೋಸೇಫನು ಗುಲಾಮನಾಗಿ ಮಾರಲ್ಪಟ್ಟಾಗ ಮತ್ತು ಸೆರೆಮನೆಗೆ ಹಾಕಲ್ಪಟ್ಟಾಗಲೇ, ಕನಸುಗಳಿಗೆ ಅರ್ಥಹೇಳುವ ಸಾಮರ್ಥ್ಯವು ಬೆಳಕಿಗೆ ಬಂದಿತು. ಯೋಬನನ್ನು ಶೋಧಿಸಿದ ನಂತರವೇ ಅವರು ಎಂಥಾ ಪರಿಸ್ಥಿತಿಯಾದರೂ ಕರ್ತನನ್ನು ನಿರಾಕರಿಸದವರು ಮತ್ತು ಕರ್ತನಿಗೆ ಭಯಪಡುವವರು ಎಂದು ತಿಳಿದುಕೊಳ್ಳಲು ಸಾಧ್ಯವಾಯಿತು.

 

ಪ್ರಿಯರೇ! ನಾನೊಬ್ಬನೇ ಶೋಧನೆಗೊಳಗಾಗಿದ್ದೇನೆ ಎಂದು ಶೋಧನೆಯನ್ನು ನೋಡಿ ಬಳಲಿಹೋಗಬೇಡಿರಿ. ಲೂಯಿಸ್ ಪಾಸ್ಕಲ್ ಅವರಂತೆ ಧೈರ್ಯವಾಗಿ ಶೋಧನೆಗಳನ್ನು ಎದುರಿಸುವಾಗಲೇ, ಸಾಧಿಸಲು ಸಾಧ್ಯ. ನಮ್ಮಲ್ಲಿರುವ ಪ್ರತಿಭೆಯನ್ನು ಅರಿಯಲು, ಸಾಮರ್ಥ್ಯವನ್ನು ಅರಿಯಲು ಇದಕ್ಕಾಗಿಯೇ ಶೋಧನೆಗಳು! ಸಾಧನೆ ಮಾಡಬೇಕೆಂಬುದು ಎಲ್ಲರ ಆಸೆ. ಅದಕ್ಕಾಗಿ ಶೋಧನೆಯನ್ನು ಎದುರಿಸುವುದು ಅವಶ್ಯಕ! ಶೋಧನೆಗಳನ್ನು ಎದುರಿಸಿದರೆ ನೀವೂ ಸಹ ಸಾಧಕರಾಗಬಹುದು! ಶೋಧನೆಯಿಲ್ಲದೆ ಸಾಧನೆ ಇಲ್ಲ; ನೋವು ಇಲ್ಲದೆ ಯಶಸ್ಸು ಇಲ್ಲ!

- Mrs.ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಉಜ್ಜೀವನವನ್ನು ಬಯಸುವವರ ಶಿಬಿರದಲ್ಲಿ ಭಾಗವಹಿಸುವ ವ್ಯಕ್ತಿಗಳು ಕಾರ್ಯಮಾಡುವವರಾಗಿ ಎದ್ದೇಳುವಂತೆ, ಇವರ ಮೂಲಕ ದೇವರು ದೊಡ್ಡ ಕಾರ್ಯಗಳನ್ನು ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +9193455404

82



hacklink satın al