By Village Missionary Movement
Monday, 06-Jun-2022ಧೈನಂದಿನ ಧ್ಯಾನ(Kannada) – 06.06.2022
ನೀನು ಅಬಿಗೈಲಳಾ?
“ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ" - ಪ್ರಸಂಗಿ 7:9
ಕೊಲಿಕೋಡ್ ಎಂಬ ಪ್ರಾಂತ್ಯದಲ್ಲಿ ಗಂಡ, ಹೆಂಡತಿ ಮತ್ತು ಇಬ್ಬರು ಪುತ್ರಿಯರು ವಾಸವಾಗಿದ್ದರು. ಗಂಡ ಕುಡುಕ ಮಾತ್ರವಲ್ಲದೆ ಕೋಪಗಾರನೂ ಆಗಿದ್ದನು. ಮನೆಯಲ್ಲಿದ್ದವರು ಏನು ಮಾಡಿದರೂ ಆತನಿಗೆ ಕೋಪ ಬರುತ್ತಿತ್ತು. ಒಂದು ದಿನ ಅವನು ಕುಡಿದು ಮನೆಗೆ ಬಂದಾಗ, ಆತ್ಮೀಯ ಯಾತ್ರೆ ಎಂಬ ಕ್ರೈಸ್ತ ರೇಡಿಯೊ ಕಾರ್ಯಕ್ರಮವನ್ನು ಕೇಳಿದ ಕೂಡಲೆ, ಅದರಲ್ಲೂ ವಿಶೇಷವಾಗಿ ಮದ್ಯದ ಪರಿಣಾಮಗಳ ಬಗ್ಗೆ ಕೇಳಿದಾಗ ಅವರು ಕೋಪದಿಂದ ರೇಡಿಯೊ ಪೆಟ್ಟಿಗೆಯನ್ನು ಒಡೆದು ಹಾಕಿದರು. ಅವರ ಹೆಂಡತಿ ಮತ್ತು ಮಕ್ಕಳು ಕಂಗಾಲಾದರು. ಆದರೆ ತುಂಬಾ ಮೌನ ವಹಿಸಿದ್ದರು. ಇವರಿಗೋ ಮನಸ್ಸಿನಲ್ಲಿ ಸ್ವಲ್ಪ ಆರ್ದ್ರತೆ ಇತ್ತು, ಆದ್ದರಿಂದ ಅವರು ಮರುದಿನ ರೇಡಿಯೊವನ್ನು ಖರೀದಿಸಿದರು ಮತ್ತು ಪ್ರತಿದಿನ ಸ್ವತಃ ದೇವರ ವಾಕ್ಯವನ್ನು ಕೇಳಲು ಪ್ರಾರಂಭಿಸಿದರು. ಸ್ವಲ್ಪಮಟ್ಟಿಗೆ ಅವರು ಯೇಸುವನ್ನು ನಂಬಿದರು ಮತ್ತು ಆತನನ್ನು ತನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸಿದರು. ಏನಾಶ್ಚರ್ಯ! ಯೇಸು ತನ್ನೊಳಗೆ ಹೆಚ್ಚುತ್ತಾ, ಹೆಚ್ಚುತ್ತಾ ಆ ಕುಡಿತವು ಅವರಿಂದ ಸಂಪೂರ್ಣವಾಗಿ ತೊಲಗಿ ಹೋಗಿ ಇಂದಿಗೂ ದೇವರ ಮಗುವಾಗಿ ಜೀವಿಸುತ್ತಿದ್ದಾರೆ.
ಸತ್ಯವೇದದಲ್ಲಿ (1 ಸಮುವೇಲ 25: 3) ನಾಬಾಲನ ಹೆಂಡತಿ ಅಬೀಗೈಲಳು ಬುದ್ಧಿವಂತ ಮಹಿಳೆ. ಆದರೆ ನಾಬಾಲನು ಒಬ್ಬ ಮೂರ್ಖ ಎಂದು ಓದುತ್ತೇವೆ. ದಾವೀದನಿಂದ ರಕ್ಷಣೆ ಮತ್ತು ಒಳ್ಳೆಯದನ್ನು ಪಡೆದ ನಾಬಾಲನು ಒಳ್ಳೆಯದಕ್ಕೆ ಬದಲಾಗಿ ಕೆಟ್ಟದ್ದನ್ನು ಮಾಡಿದನು. ದಾವೀದನು ಯಾರು? ಎಂದು ಅವನು ಹೇಳಿದ್ದನ್ನು ಕೇಳಿದ ದಾವೀದನು, ಅವನನ್ನು ಎದುರುಗೊಳ್ಳಲು ನಾನೂರು ಜನರೊಂದಿಗೆ ಹೊರಟನು. ಅಬಿಗೈಲ್ ತನ್ನ ಸೇವಕನ ಮೂಲಕ ಈ ಸುದ್ದಿಯನ್ನು ತಿಳಿದುಕೊಂಡು ತೀವ್ರವಾಗಿ ಕಾರ್ಯ ಮಾಡುತ್ತಾಳೆ. ತನ್ನ ನಮ್ರತೆ ಮತ್ತು ವಿನಮ್ರ ಮಾತುಗಳಿಂದ, ದಾವೀದನ ಕೈ ರಕ್ತವನ್ನು ಸುರಿಸದ ಹಾಗೆ, ಅವನ ಕೋಪವನ್ನು ಕರಗಿಸಿದಳು. (ವಚನ. 25:33).
ಪ್ರೀತಿಯ ಯೌವನಸ್ಥ ಮಕ್ಕಳೇ, ಕೋಪ ಎಷ್ಟು ಕೆಟ್ಟದ್ದು ಎಂದು ನಿಮಗೆ ತಿಳಿದಿದೆ. ಕುಡಿದು ಬಂದ ತನ್ನ ಗಂಡನನ್ನು ಅವರ ಹೆಂಡತಿ ಕೋಪದಿಂದ ಎದುರುಗೊಂಡಿದ್ದರೆ, ಬಹುಶಃ ಸಂಸಾರವೇ ಛಿದ್ರವಾಗುತ್ತಿತ್ತೇನೋ! ಬದಲಾಗಿ, ಅವಳು ತಾಳ್ಮೆಯಿಂದ, ದಯೆಯಿಂದ, ತನ್ನ ಪತಿಯನ್ನು ಉಳಿಸುವಂತೆ ಮಾಡಿದಳು! ನಾಬಾಲನ ಮೇಲೆ ದಾವೀದನ ಕೋಪವು ಏಳುವುದನ್ನು ಕೇಳಿದಾಗ ಅಬೀಗೈಲ್ "ಈ ಮೂರ್ಖನಿಗೆ ಚೆನ್ನಾಗಿ ಆಗಬೇಕು" ಎಂದು ಸುಮ್ಮನಿದ್ದಿದ್ದರೆ, ಒಂದು ವೇಳೆ ಅಬೀಗೈಲಳು ಜೀವಂತವಾಗಿರುವದು ಪ್ರಶ್ನಾರ್ಹವೇ. ಬುದ್ಧಿವಂತಿಕೆಯಿಂದ ಯೋಚಿಸಿ ತೀವ್ರವಾಗಿ ಕಾರ್ಯ ಮಾಡಿದ ಅಬೀಗೈಲಳು ದಾವೀದನ ಕೋಪವು ತಣ್ಣಗಾಗುವಂತೆ ಮಾಡಿದಳು, ಅಷ್ಟು ಮಾತ್ರವಲ್ಲದೇ, ಅವನಿಂದ ಆಶೀರ್ವಾದ ಪಡೆದಳು. ಕೋಪವನ್ನು ಕರಗಿಸುವ ಆ ಬುದ್ಧಿವಂತ ಅಬೀಗೈಲಳಂತೆ ಇರಲು ಶ್ರಮಿಸಿರಿ!
- Mrs. ಹೆಪ್ಸಿ ಮನುವೇಲ್ ಜಯರಾಜ್
ಪ್ರಾರ್ಥನಾ ಅಂಶ:
ವಿಲೇಜ್ ಹಾಲಿಡೇ ಬೈಬಲ್ ಸ್ಕೂಲ್ ಮೂಲಕ, ಹಳ್ಳಿಗಳಲ್ಲಿ ಭೇಟಿಮಾಡಿರುವ ಚಿಕ್ಕ ಮಕ್ಕಳು ಕೊನೆಯವರೆಗೂ ಕರ್ತನಲ್ಲಿ ನೆಲೆಗೊಂಡಿರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +9193455404
82