Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.06.2022
Share:

By Village Missionary Movement

Sunday, 05-Jun-2022

ಧೈನಂದಿನ ಧ್ಯಾನ(Kannada) – 05.06.2022

 

ಸಹಾಯ ಹಸ್ತಗಳು

 

"ಹೀಗಿರಲಾಗಿ... ಕನಿಕರ, ದಯೆ...ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ." - ಕೊಲೊಸ್ಸೆ 3:12

 

ಪುಟಾಣಿಗಳೇ! ನಿಮ್ಮ ರಜಾದಿನಗಳನ್ನು ಜಾಲಿಯಾಗಿ Enjoy - ಮಾಡಿರುತ್ತೀರ ತಾನೇ? ಸಂಬಂಧಿಕರ ಮನೆ, Tour, Picnic... ಹೀಗೆ ಎಲ್ಲರೂ ಸಂತೋಷವಾಗಿ ಇದ್ದಿರುತ್ತೀರ. ಹೌದಲ್ವಾ! Ok, ಇಂದು ಮತ್ತೊಬ್ಬರನ್ನು ಹೇಗೆ ಸಂತೋಷಪಡಿಸೋಣ ಎಂದು ಕಥೆ ಕೇಳೋಣ್ವಾ? ಸುಶೀಲಾ ಅಕ್ಕ ಒಂದು ದಿನದಲ್ಲಿ ಎಷ್ಟು ಜನರಿಗೆ ಸಹಾಯ ಮಾಡಿದರೆಂದು ನೋಡೋಣ್ವಾ?

 

ಸುಶೀಲಾ ಯಾವಾಗಲೂ ಇತರರಿಗೆ ಒಳ್ಳೆಯದನ್ನು ಮಾಡುವ ಗುಣವುಳ್ಳ ಮಗುವಾಗಿದ್ದಳು. ಅಂದು ಟೈಯಾಡ್ ಆಗಿದ್ದರೂ ಸಹ ಎಂದಿನಂತೆ ಮುಂಜಾನೆಯೇ ಎದ್ದು ಮುಖ ತೊಳೆದು ಅಮ್ಮನ ಬಳಿ ಟೀ ತೆಗೆದುಕೊಂಡು ಕುಡಿದುಬಿಟ್ಟು, ಮನೆಯ ತೋಟದ ಬಳಿಗೆ ಹೋದಳು. ಹತ್ತಿರವಿದ್ದ ಗಿಡಗಳು ಮತ್ತು ಹೂವುಗಳು ನೋಡಲು ಸುಂದರವಾಗಿದ್ದವು. ಈ ಗಿಡಗಳಿಗೆಲ್ಲಾ ನೀರು ಹಾಕಿದಳು. ನೀವು ಗಿಡ ಮತ್ತು ಮರಗಳನ್ನು ಬೆಳೆಸುತ್ತಿದ್ದೀರಾ? ಆಗ ಅವಳ ಮುದ್ದಿನ ಬೆಕ್ಕು "ಮಿಯಾಂವ್ ಮಿಯಾಂವ್" ಎಂದು ಕೂಗುತ್ತಾ ಬಂತು. ಆ ಬೆಕ್ಕಿನ ಕಾಲಿಗೆ ಪೆಟ್ಟು ಬಿದ್ದಿದ್ದರಿಂದ ಅದಕ್ಕೆ ಔಷಧಿ ಹಾಕಿ ಉಜ್ಜಿ, "ನೋವಾಗೋದಿಲ್ಲ ಬೇಗ ಸರಿಹೋಗುತ್ತದೆ" ಎಂದು ಹೇಳಿದಳು. ಅದಕ್ಕೆ ಉತ್ತರವಾಗಿ ಬೆಕ್ಕು ಸಹ "ಮಿಯಾಂವ್" ಎಂದು ಹೇಳಿದಂತಿತ್ತು.

 

ಸುಶೀಲಾ ಮನೇ ಬಾಗಿಲಲ್ಲಿ ಕುಳಿತಿದ್ದಾಗ ಒಬ್ಬ ಪುಟ್ಟ ಹುಡುಗ ತನ್ನ ಪುಟ್ಟ ಸೈಕಲ್ ತುಳಿಯುತ್ತಿದ್ದ. ಹೊಸದಾಗಿ ಸೈಕಲ್ ತುಳಿಯುತ್ತಿದ್ದದರಿಂದ ಅವನಿಗೆ ಸ್ವಲ್ಪ ಕಷ್ಟವಾಗಿತ್ತು. ಇದನ್ನು ಗಮನಿಸಿದ ಸುಶೀಲಾ ವೇಗವಾಗಿ ಹೋಗಿ ಸೈಕಲ್ ಓಡಿಸಲು ಹೇಳಿಕೊಟ್ಟಳು. ಅವನೂ ಈಜಿಯಾಗಿ ಅಭ್ಯಾಸ ಮಾಡಿಕೊಂಡನು. ಸ್ವಲ್ಪ ಸಮಯದ ನಂತರ ಒಂದು ಅಜ್ಜಿ ತರಕಾರಿ ತೆಗೆದುಕೊಂಡು ಆ ಕಡೆ ಹೋದರು. ಕಲ್ಲು ಇದ್ದುದನ್ನು ಗಮನಿಸದೆ ಅಜ್ಜಿ ಎಡವಿ ಕೆಳಗೆ ಬಿದ್ದದರಿಂದ ತರಕಾರಿಗಳೆಲ್ಲಾ ಚೆಲ್ಲಿಹೋದವು. ಶಬ್ದ ಕೇಳಿ ಸುಶೀಲಾ ಓಡಿ ಬಂದು ಅಜ್ಜಿಗೆ ತರಕಾರಿಗಳನ್ನೆಲ್ಲಾ ಆಯ್ದುಕೊಟ್ಟಳು. "ಕಾಲಿಗೇನೂ ಏಟಾಗಿಲ್ವಾ ಅಜ್ಜಿ" ಎಂದು ಪ್ರೀತಿಯಿಂದ ವಿಚಾರಿಸಿದಳು. ಚಿಕ್ಕ ಮಗುವಾಗಿದ್ದರೂ ಇಷ್ಟೊಂದು ಪ್ರೀತಿಯಿಂದ ವಿಚಾರಿಸುತ್ತಿದ್ದೀಯಲ್ಲಾ ಮಗು" ಎಂದು ಆಶೀರ್ವದಿಸಿ ಕೃತಜ್ಞತೆ ಹೇಳಿದರು. ಪ್ರತ್ಯುತ್ತರವಾಗಿ ಸುಶೀಲಾ ಕೂಡ "ಧನ್ಯವಾದ ಅಜ್ಜಿ" ಎಂದು ಹೇಳಿದಳು. ಸುಶೀಲಾಗೆ ಆ ರಜೆ ದಿನಗಳು ತುಂಬಾ ಖುಷಿಯಾಗಿತ್ತು.

 

ಮುದ್ದು ಪುಟಾಣಿಗಳೇ! ನಿಮ್ಮ ಪುಟ್ಟ ಕೈಗಳಿಂದ ನೀವು ಸಹ ಇತರರಿಗೆ ಒಳ್ಳೆಯದನ್ನು ಮಾಡಿದಾಗ ಯೇಸಪ್ಪ ನಿಜವಾಗಿಯೂ ತುಂಬಾ ಸಂತೋಷಪಡುತ್ತಾರೆ. ಯೇಸಪ್ಪ ಈ ಲೋಕದಲ್ಲಿ ಜೀವಿಸಿದಾಗ, ಒಳ್ಳೆಯದನ್ನು ಮಾಡುತ್ತಲೇ ಜೀವಿಸಿದರು. ನೀವು ಸಹ ಹಾಗೆ ತಾನೆ! ಪುಟಾಣಿಗಳೇ! ಕನಿಕರ, ದಯೆ ಎಂಬ ಮನಸ್ಸು ಇದ್ದರೆ ಮಾತ್ರವೇ ಸಹಾಯ ಮಾಡಲು ಸಾಧ್ಯ. ಆದ್ದರಿಂದ ಕರುಣೆಯನ್ನು ತಿಳಿಯಿರಿ. ಯೇಸಪ್ಪನ ಮಗುವಾಗಿ ಬದುಕಿ ತೋರಿಸಿರಿ.

- A.ಬ್ಯೂಲಾ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al