Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.06.2022
Share:

By Village Missionary Movement

Saturday, 04-Jun-2022

ಧೈನಂದಿನ ಧ್ಯಾನ(Kannada) – 04.06.2022

 

ನಾನು ಪುನಃ ಬರುತ್ತೇನೆ

 

"...ಪುನಃ ಬಂದು ನಿಮ್ಮನ್ನು ನನ್ನ ಬಳಿಗೆ ಸೇರಿಸಿಕೊಳ್ಳುವೆನು. ಏಕೆಂದರೆ, ನಾನಿರುವಲ್ಲಿ ನೀವು ಸಹ ಇರಬೇಕು." - ಯೋಹಾನ 14: 3

 

ತಂದೆ ಮತ್ತು ಅವರ ಒಂಬತ್ತು ವರ್ಷದ ಮಗಳು ಬೇಸಿಗೆಯಲ್ಲಿ ಸಾಗರದಲ್ಲಿ ಉತ್ಸಾಹದಿಂದ ಈಜುತ್ತಿದ್ದರು. ಆಗ ಇದ್ದಕ್ಕಿದ್ದಂತೆ ದೊಡ್ಡ ಅಲೆಗಳು ಬಂದು ಅವರನ್ನು ಅಪ್ಪಳಿಸಿತು, ಆ ಅಲೆಗಳು ಚಿಕ್ಕ ಹುಡುಗಿಯನ್ನು ಅವರಿಂದ ಸ್ವಲ್ಪ ದೂರಕ್ಕೆ ಕೊಚ್ಚಿಕೊಂಡು ಹೋಯಿತು. ತಂದೆ ಎಷ್ಟೇ ಪ್ರಯತ್ನ ಪಟ್ಟರೂ ಆಕೆಯ ಹತ್ತಿರ ಹೋಗಲಾಗಲಿಲ್ಲ, ಬೇರೆಯವರ ಸಹಾಯ ಬೇಕಿತ್ತು. ಕೂಡಲೇ, "ಮಗಳೇ ಹೆದರಬೇಡ ಆ ಕೋಲನ್ನು ಗಟ್ಟಿಯಾಗಿ ಹಿಡಿದುಕೊಂಡು ಈಜು, ನಾನು ನಿನ್ನನ್ನು ರಕ್ಷಿಸಲು ಬೇಗನೆ ಬರುತ್ತೇನೆ" ಎಂದು ಶಬ್ದವಾಗಿ ಹೇಳಿದರು. ಸ್ವಲ್ಪ ಸಮಯದ ನಂತರ ಒಂದು ಹಡಗಿನಲ್ಲಿ ರಕ್ಷಣಾ ತಂಡದೊಂದಿಗೆ ಹಿಂದಿರುಗಿ ಬಂದು ನೋಡಿದಾಗ ತನ್ನ ಮಗಳು ಕಾಣೆಯಾಗಿರುವುದನ್ನು ಕಂಡು ಆಘಾತಗೊಂಡರು. ಚಿಕ್ಕ ಹುಡುಗಿಯೋ ಸಮುದ್ರದಲ್ಲಿ ಸ್ವಲ್ಪ ದೂರಕ್ಕೆ ಎಳೆದೊಯ್ಯಲ್ಪಟ್ಟಿದ್ದಳು. ಸುದೀರ್ಘ ಹುಡುಕಾಟದ ನಂತರ ಅವರು ಅವಳನ್ನು ಕಂಡುಕೊಂಡರು. ಅಪ್ಪ ಹೇಳಿದಂತೆಯೇ ಕೋಲನ್ನು ಹಿಡಿದುಕೊಂಡು ನಿಧಾನವಾಗಿ ತೇಲುತ್ತಿದ್ದಳು. ಅವಳನ್ನು ದೋಣಿಯಲ್ಲಿ ಕೂರಿಸಿಕೊಂಡು, “ನೀನೊಬ್ಬಳೇ ಸಮುದ್ರದಲ್ಲಿ ಈಜಲು ಹೇಗೆ ಸಾಧ್ಯವಾಯಿತು? ಭರವಸೆಯನ್ನು ಕಳೆದುಕೊಂಡಾ? ” ಎಂದು ಎಲ್ಲರೂ ಕೇಳಿದರು ಅದಕ್ಕೆ ಅವಳು “ನನ್ನ ತಂದೆ ಹೇಳಿದಂತೆಯೇ ಮಾಡಿದೆ. ನಿನ್ನನ್ನು ರಕ್ಷಿಸಲು ನಾನು ಶೀಘ್ರದಲ್ಲೇ ಬರುತ್ತೇನೆ” ಎಂದು ಅವರು ಹೇಳಿದ ಮಾತುಗಳೇ ನನ್ನ ಕಿವಿಯಲ್ಲಿ ಕೇಳಿಸುತ್ತಿದ್ದವು. ಅವರ ಮಾತುಗಳೇ ನಾನು ನಂಬಿಕೆಯಿಂದಿರಲು ಸಹಾಯ ಮಾಡಿತು” ಎಂದಳು.

 

ಯೇಸುಕ್ರಿಸ್ತನ ಜನನದ ಬಗ್ಗೆ ಅನೇಕ ಪ್ರವಾದನೆಗಳು ಹೇಳಲ್ಪಟ್ಟಿದ್ದರೂ, ಅದನ್ನು ತಿಳಿದಿದ್ದ ಯೆಹೂದಿ ಜನರೇ, ಅವರನ್ನು ಮೆಸ್ಸೀಯ ಎಂದು ಸ್ವೀಕರಿಸಲಿಲ್ಲ. ಅದೇ ರೀತಿಯಲ್ಲಿ, ಯೇಸು ಕ್ರಿಸ್ತನು ತನ್ನ ಪುನರುತ್ಥಾನದ ಬಗ್ಗೆ ಅನೇಕ ಬಾರಿ ಮಾತನಾಡಿದ್ದಾರೆ, ಆದರೆ ಅವರ ಶಿಷ್ಯರಿಗೇ ಅದು ತಿಳಿದಿರಲಿಲ್ಲ. ನಾವು ಇವರಂತೆ ಇದ್ದು ಬಿಡಬಾರದು. ನಮ್ಮ ಕರ್ತನಾದ ಯೇಸು ಕ್ರಿಸ್ತನು "ನಾನು ಪುನಃ ಬಂದು ನನ್ನೊಂದಿಗೆ ನಿಮ್ಮನ್ನು ಸೇರಿಸಿಕೊಳ್ಳುತ್ತೇನೆ" ಎಂದು ಹೇಳಿ ಹೋಗಿದ್ದಾರೆ. ಕ್ಷಾಮ, ಬರಗಾಲ, ಯುದ್ಧ ಮತ್ತು ವಿನಾಶವು ಜಗತ್ತನ್ನು ಹಾಳುಮಾಡುತ್ತಿದೆ. ಇದೆಲ್ಲದರ ಮಧ್ಯೆ ಯೇಸುವನ್ನು ನಂಬಿ, ರಕ್ಷಣೆ ಎಂಬ ಕೋಲನ್ನು ಹಿಡಿದು, ತೇಲುತ್ತಿರುವ ಪ್ರತಿಯೊಬ್ಬರನ್ನೂ ಅವರು ಕರೆದೊಯ್ಯಲು, ಮಧ್ಯಾಕಾಶದಲ್ಲಿ ಬರುತ್ತಾರೆ ಖಂಡಿತವಾಗಿಯೂ ಬಂದು ನಮ್ಮನ್ನು ಕರೆದುಕೊಂಡು ಹೋಗುತ್ತಾರೆ.

 

ಮಾನಸಿಕ ಹೊರೆ, ಸಮಸ್ಯೆ, ಹೋರಾಟಗಳಿಂದ ಬೇಸತ್ತಿರುವಾಗ, "ಪುನಃ ನಾನು ನಿಮ್ಮ ಬಳಿಗೆ ಬರುತ್ತೇನೆ" ಎಂಬ ಪ್ರಿಯನ ಶಬ್ದವು ನಮ್ಮನ್ನು ಸಾಂತ್ವನಗೊಳಿಸಲಿ. ಆ ಪುಟ್ಟ ಬಾಲಕಿಯು ಕೋಲನ್ನು ಹಿಡಿದುಕೊಂಡು, ಹೇಗೆ ತನ್ನ ತಂದೆಗಾಗಿ ಕಾಯುತ್ತಿದ್ದಳೋ, ಹಾಗೆಯೇ ನಾವು ಸಹ ದೇವರಿಗಾಗಿ ಕಾಯುತ್ತಿರೋಣ. ಬರುತ್ತೇನೆ ಎಂದು ಹೇಳಿದಾತನು ಖಂಡಿತವಾಗಿಯೂ ಬರುತ್ತಾರೆ. ನಮ್ಮ ಕಣ್ಣೀರನ್ನೆಲ್ಲ ಒರೆಸುತ್ತಾರೆ. ಆತನೊಂದಿಗೆ ನಮ್ಮನ್ನು ಸೇರಿಸಿಕೊಳ್ಳುತ್ತಾರೆ. ಅವರನ್ನು ಎದುರುಗೊಳ್ಳಲು ಸಿದ್ಧರಾಗೋಣ!

- Bro. ಹನೀಶ್ ಸಮುವೇಲ್

 

ಪ್ರಾರ್ಥನಾ ಅಂಶ:

ಪ್ರಾರ್ಥನೆ ಮತ್ತು ತ್ಯಾಗವಾದ ಕಾಣಿಕೆಯೊಂದಿಗೆ ನಮ್ಮ ಸೇವೆಯನ್ನು ಬೆಂಬಲಿಸುತ್ತಿರುವ ಪಾಲುದಾರರನ್ನು ದೇವರು ಆಶೀರ್ವದಿಸುವಂತೆ, ಇನ್ನೂ ಹೊಸ ಪಾಲುದಾರರನ್ನು ದೇವರು ಎಬ್ಬಿಸಿ ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş