By Village Missionary Movement
Thursday, 02-Jun-2022ಧೈನಂದಿನ ಧ್ಯಾನ(Kannada) – 03.06.2022
ಕಾಣದಿರುವುಗಳೇ ಶಾಶ್ವತ
"...ಕಾಣುವಂಥದು ಸ್ವಲ್ಪಕಾಲ ಮಾತ್ರ ಇರುವದು; ಕಾಣದಿರುವಂಥದು ಸದಾಕಾಲವೂ ಇರುವದು” - 2 ಕೊರಿಂಥ. 4:18
ಪೌಲನು ಕೊರಿಂಥದ ಸಭೆಗೆ ಮೇಲಿನ ವಾಕ್ಯವನ್ನು ವಿವರಿಸುವಾಗ, ಪೌಲನು ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು ಲಕ್ಷಿಸುತ್ತಾ ತಾಳ್ಮೆಯಿಂದ ಓಡೋಣ ಎನ್ನುತ್ತಾರೆ. ಈ ಸತ್ಯವನ್ನು ಅರ್ಥಮಾಡಿಕೊಳ್ಳಲು, ನಾವು ಜಾನ್ ಬನಿಯನ್ ಅವರ "ಮೋಕ್ಷ ಪ್ರಯಾಣ" ಪುಸ್ತಕಕ್ಕೆ ಪ್ರಯಾಣಿಸಿ, ಅರ್ಥ ಹೇಳುವವರ ಮನೆಗೆ ಹೋಗೋಣವಾ?
ಕಥೆಯ Hero-ಆಗಿರುವ ಕ್ರಿಸ್ಟಿಯಾನೋ ರವರ ಕೈ ಹಿಡಿದು ಒಂದು ಸಣ್ಣ ಕೋಣೆಗೆ ಪ್ರವೇಶಿಸುತ್ತಾರೆ. ಎದುರಿಗೆ ಇಬ್ಬರು ಮಕ್ಕಳು ಕುಳಿತಿದ್ದರು. ಕೋಪದಿಂದ ಜಿಗಿಯುತ್ತಿದ್ದನು ಆತುರಗಾರನು (Passion); ಶಾಂತ ಮುಖದಿಂದ ಶಾಂತವಾಗಿದ್ದವನು ತಾಳ್ಮೆ (Patience). "ಆತುರಗಾರನು ಏಕೆ ಹೀಗೆ ಕೋಪದಿಂದ್ದಾನೆ?" ಎಂದು ಕ್ರಿಸ್ಟಿಯಾನೋ ಕೇಳಿದರು. “ಅವನು ಕೇಳಿದ ಒಂದು ವಸ್ತುವಿಗೆ ಇನ್ನೂ ವರ್ಷ ಕಾಯುವಂತೆ ಹೆತ್ತವರು ಹೇಳಿಬಿಟ್ಟರು. ಅವನೋ ತಕ್ಷಣ ಬೇಕೆಂದು ಕೇಳಿದ. ಅದಕ್ಕೇ ಹೀಗೆ ಆತುರಪಡುತ್ತಿದ್ದಾನೆ. ಆದರೆ ತಾಳ್ಮೆಯು ತಾಳ್ಮೆಯಿಂದ ಸದ್ದಿಲ್ಲದೆ ಕಾಯುತ್ತಿದ್ದಾನೆ” ಎಂದು ವಿವರಿಸಿದರು ಅರ್ಥ ಹೇಳುವವರು. ಆಗ ಯಾರೋ ಒಬ್ಬರು ಚೀಲದ ತುಂಬಾ ಚಿನ್ನ ಮತ್ತು ಗಂಟೆಗಳನ್ನು ತಂದು, ಅರ್ಥ ಹೇಳುವವರ ಪಾದಗಳಲ್ಲಿ ಚೆಲ್ಲಿದರು. ತಾಳ್ಮೆಯನ್ನು ಕಂಡು ಗೇಲಿಯಾಗಿ ನಗುತ್ತಾ, ಆತುರಗಾರನು ಆ ನಿಧಿಯನ್ನು ಕೈಗಳಲ್ಲಿ ಬಾಚಿಕೊಂಡನು. ಆದರೆ ಅಲ್ಪಾವಧಿಯಲ್ಲಿ ಅವನು ಅವೆಲ್ಲವನ್ನೂ ಖರ್ಚು ಮಾಡಿಬಿಟ್ಟನು! ಅವನು ತೊಡಲು ಸಹ ಕೊಳೆಯ ಹರಿದ ಅಂಗಿಗಳೇ ಉಳಿದವು! “ಆತುರಗಾರನು ಈ ಪ್ರಪಂಚದ ಜನರಿಗೆ ಗುರುತು. ತಾಳ್ಮೆಯೇ ಮುಂಬರುವ ಹೊಸ ಪ್ರಪಂಚದ ಜನರಿಗೆ ಗುರುತು. ಆತುರಗಾರನು ಹೇಗೆಎಲ್ಲವನ್ನೂ ತಕ್ಷಣವೇ ಬೇಕು ಎಂದು ಆತುರಪಟ್ಟನೋ, ಅದರಂತೆಯೇ ಈ ಪ್ರಪಂಚದ ಜನರು ಈಗ ಎಲ್ಲವನ್ನೂ ಈಗಲೇ ಅನುಭವಿಸಬೇಕೆಂದು ಬಯಸುತ್ತಾರೆ. ನಮ್ಮ ಸಾವಿನ ನಂತರದ ಜೀವನದ ಬಗ್ಗೆ ಅವರು ಎಂದಿಗೂ ಕಾಳಜಿ ವಹಿಸುವುದೇ ಇಲ್ಲ! ಆತುರಗಾರನ ನಿಧಿಯು ತ್ವರಿತವಾಗಿ ನಾಶವಾದಂತೆಯೇ, ಇಹಲೋಕದ ಆನಂದವೂ ಸಹ ಶೀಘ್ರದಲ್ಲೇ ಗತಿಸಿಹೋಗುತ್ತದೆ. ಇದು ನಾವು ಶಾಶ್ವತ ಜೀವನವನ್ನು ಬಯಸಬೇಕು ಎಂಬುದಕ್ಕೆ ಒಂದು ಪಾಠವಾಗಿದೆ ” ಎಂದರು ಅರ್ಥಹೇಳುವವರು.
ಹೌದು! ಈ ಜಗತ್ತಿನಲ್ಲಿ ಕಂಡುಬರುವ ಎಲ್ಲಾ ಸೌಂದರ್ಯವು ಒಂದು ದಿನ ನಾಶವಾಗುತ್ತದೆ; ಪರಲೋಕದ ಮಹಿಮೆ ಎಂದಿಗೂ ಬದಲಾಗದು. ಲಾಜರನು - ಐಶ್ವರ್ಯವಂತನ ಸಾಮ್ಯದಲ್ಲಿ, ಅಬ್ರಹಾಮನು ಹೇಳುವುದನ್ನು ಕೇಳಿ: “ನೀನು ಭೂಮಿಯಲ್ಲಿ ಜೀವಂತವಾಗಿರುವಾಗ ನಿನ್ನ ಒಳ್ಳೆಯದನ್ನು ಆನಂದಿಸಿ ಅನುಭವಿಸಿದೆ ಅದೇ ರೀತಿ ಲಾಜರನು ಕಷ್ಟಗಳನ್ನು ಅನುಭವಿಸಿದನು, ಅದನ್ನು ಯೋಚಿಸು; ಈಗಲಾದರೋ ಅವನು ಸಾಂತ್ವನಗೊಂಡಿದ್ದಾನೆ, ನೀನೋ ವೇದನೆ ಅನುಭವಿಸುತ್ತಿದ್ದೀಯ” ನಾವು ಈ ಪ್ರಪಂಚದವರಾ, ಅಥವಾ ಪರಲೋಕದವರಾ?
- Mrs. ಬ್ಯೂಲಾ ಸೆಲ್ವರಾಜ್
ಪ್ರಾರ್ಥನಾ ಅಂಶ:
ಮಿಷನರಿಗಳ ಕುಟುಂಬಗಳಿಗಾಗಿ, ಅವರ ಮಕ್ಕಳ ದೈಹಿಕ ಯೋಗಕ್ಷೇಮಕ್ಕಾಗಿ ಮತ್ತು ಅವರ ವಿದ್ಯಾಭ್ಯಾಸಕ್ಕಾಗಿ ಮುಂದಿನ ಶೈಕ್ಷಣಿಕ ವರ್ಷದ ಅಗತ್ಯಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482