Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.06.2022
Share:

By Village Missionary Movement

Thursday, 02-Jun-2022

ಧೈನಂದಿನ ಧ್ಯಾನ(Kannada) – 02.06.2022

 

ನಮ್ಮ ಮೇಲೆ ಬಿದ್ದ ಕರ್ತವ್ಯ

 

"...ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ" - ಮಾರ್ಕ 16:15

 

ನಾನು ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬದಿಂದ ಬಂದವನು. ಆದರೆ ದೇವರ ದಯೆಯಿಂದ ನಾನು ಪಾಲಿಟೆಕ್ನಿಕ್ ಮುಗಿಸಿದೆ. ಕೆಲವು ತಿಂಗಳುಗಳಿಂದ ಸರಿಯಾದ ಕೆಲಸವಿಲ್ಲದೆ ಇದ್ದರೂ, ದೇವರು ದಯೆಯಿಂದ ನನಗೆ ಒಳ್ಳೆಯ ಕೆಲಸ ಸಿಗಲು ಸಹಾಯ ಮಾಡಿದರು. ನಾನು ಅದ್ಭುತವಾಗಿ ದೇವರನ್ನು ಅಂಗೀಕರಿಸಿದೆ. ಅದರ ನಂತರ ನಾನು ಭಾನುವಾರದಂದು ಚರ್ಚ್‌ಗೆ ಹೋಗುತ್ತಿದ್ದೆ ಮತ್ತು ಸರಾಸರಿ ಕ್ರೈಸ್ತ ಜೀವನವನ್ನು ನಡೆಸುತ್ತಿದ್ದೆ. ಒಂದು ಸಂಜೆ, ಒಬ್ಬ ಸಹೋದರ ಚಿಕ್ಕ ಮಕ್ಕಳಿಗೆ Sunday class ಅನ್ನು ತೆಗೆದುಕೊಳ್ಳುತ್ತಿದ್ದರು. 5 ದಿನ ಕೆಲಸ ಮಾಡಿ ಉಳಿದ 2 ದಿನ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು. ಇವರಿಗೆ ಸರಿಯಾದ ವಾಹನ ಸೌಕರ್ಯವಿರಲಿಲ್ಲ. ಸುಮಾರು 10 ಕಿ.ಮೀ ದೂರ ಸೈಕಲ್ ತುಳಿದುಕೊಂಡೇ ಹೋಗಿ ಸೇವೆ ಸಲ್ಲಿಸಿ ಬಂದರು. ಅವರು ಸೈಕಲ್‌ನಲ್ಲಿ ಅಷ್ಟು ಕಿಲೋಮೀಟರ್ ಗಳು ಹೋಗುವುದು ನನಗೆ ಆಶ್ಚರ್ಯಕರವಾಗಿತ್ತು ಮತ್ತು ಅದೇ ಸಮಯದಲ್ಲಿ ನನಗೆ ಭಾರವಾಗಿತ್ತು. ಸೇವೆ ಮಾಡಲು ಅವರು ನನ್ನನ್ನೂ ಸಹ ಆಹ್ವಾನಿಸುತ್ತಲೇ ಇದ್ದರು. ಒಂದು ದಿನ ಅವರ ಕಿರುಕುಳ ತಾಳಲಾರದೆ “ಸರಿ ಬರುತ್ತೇನೆ ಆದರೆ ಒಂದು ಕಂಡೀಷನ್ ನಿಮ್ಮನ್ನು ನನ್ನ ದ್ವಿಚಕ್ರ ವಾಹನದಲ್ಲಿ ಹತ್ತಿಸಿಕೊಂಡು ಹಳ್ಳಿಗಳಿಗೆ ಕರೆದುಕೊಂಡು ಹೋಗುತ್ತೇನೆ, ನನ್ನನ್ನು ಸೇವೆ ಮಾಡು ಎಂದು ಒತ್ತಾಯ ಮಾಡಬಾರದು” ಎಂದೆ.

 

ಮೊದಲ ವಾರ ಕಳೆಯಿತು. ಎರಡನೇ ವಾರದಲ್ಲಿ ಅವರು ವಾಕ್ಯವನ್ನು ಮಾತ್ರ ಹೇಳಿಕೊಡಿ” ಎಂದರು. ವಾಕ್ಯವೇ ತಾನೇ ಎಂದು ಹೇಳಿಕೊಟ್ಟೆ. ನಂತರ "ಹಾಡು ಮಾತ್ರ ಹೇಳಿಕೊಡಿ" ಎಂದರು. ಅದನ್ನೂ ಸರಿ ಒಂದು ಹಾಡು ಮಾತ್ರ ತಾನೇ ಎಂದುಕೊಂಡೆ. ನಂತರ “ಕಥೆ ಹೇಳಿ ಕೊಡಿ” ಅಂದರು. ಸರಿ ಕಥೆ ಮಾತ್ರ ತಾನೇ ಹೇಳೋಣ ಎಂದು ಹೇಳಿದೆ. ಒಂದು ದಿನ ಕೂತು ಯೋಚಿಸಿದಾಗಲೇ, ನನಗೆ ಗೊತ್ತಿಲ್ಲದೇನೆ ಸೇವೆ ಮಾಡುತ್ತಿದ್ದೇನೆ ಎಂಬುದು ಅರ್ಥವಾಯಿತು. ಇದು ಸರಿ ಬರಲ್ಲ ಅಂದುಕೊಂಡು, " ಇನ್ನು ಮುಂದೆ ನಾನು ಸೇವೆಗೆ ಬರಲ್ಲ ಅಂದೆ. ಆದರೆ ದೇವರು ನನಗೆ ಆಜ್ಞಾಪಿಸಿದನು, ಅವನೊಂದಿಗೆ ಹೋಗಿ ಅವನು ಹೇಳಿದ ಕೆಲಸವನ್ನು ಮಾಡು ಎಂದು. ಹೀಗೆ ನನ್ನ ಸೇವೆ ಆರಂಭವಾಯಿತು. ಇಂದು ನಾನು ಅನೇಕ ಹಳ್ಳಿಗಳಲ್ಲಿ ಚಿಕ್ಕ ಮಕ್ಕಳ ನಡುವೆ ಸೇವೆ ಮಾಡುತ್ತಿದ್ದೇನೆ.

 

ಪ್ರಿಯರೇ! ನಾವು ಸಹ ಅನೇಕ ಬಾರಿ ಸೇವೆ ನಮ್ಮದಲ್ಲ ಎಂದು ನೆನೆಸುತ್ತೇವೆ. ಆದರೆ ಸತ್ಯವೇದವು ಹೇಳುತ್ತದೆ, "ಸುವಾರ್ತೆಯನ್ನು ಸಾರುವುದು ನಮ್ಮ ಕರ್ತವ್ಯವಾಗಿದೆ" ಎಂದು! ಯೇಸುಕ್ರಿಸ್ತನು ಸಹ ತನ್ನ ಕೊನೆಯ ದಿನಗಳಲ್ಲಿ, "ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ" ಎಂದು ಹೇಳಿದರು. ಹಾಗಿದ್ದಲ್ಲಿ, ಸೇವೆ ಎಂಬುದು ನಮ್ಮಲ್ಲಿ ಪ್ರತಿಯೊಬ್ಬರ ಕರ್ತವ್ಯ ಮತ್ತು ಆಜ್ಞೆಯಾಗಿದೆ! ಆದುದರಿಂದ ನಮ್ಮ ಕೈಲಾದಷ್ಟು ಸೇವೆಯನ್ನು ಮಾಡೋಣ. ದೇವರ ಆಶೀರ್ವಾದವನ್ನು ಪಡೆಯೋಣ.

- Bro. ಮರಿಯಪ್ಪನ್.

 

ಪ್ರಾರ್ಥನಾ ಅಂಶ:

ದೇವರು ನಮ್ಮ ಪ್ರತಿಯೊಬ್ಬ ಮಿಷನರಿಗಳನ್ನು ಶಕ್ತಿಯುತವಾಗಿ ಬಳಸಲಿ ಎಂದು ಮತ್ತು ದೇವರು ನೀಡಿದ ಯೋಜನೆಗಳನ್ನು ಅಡೆತಡೆಗಳಿಲ್ಲದೆ ನೆರವೇರಿಸಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş