By Village Missionary Movement
Tuesday, 31-May-2022ಧೈನಂದಿನ ಧ್ಯಾನ(Kannada) – 31.05.2022
ಕ್ರಯವನ್ನು ಸಲ್ಲಿಸುವ ಪ್ರೀತಿ
"ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು..." - ಯೋಹಾನ 3:16
ಬಹಳ ವರ್ಷಗಳ ಹಿಂದೆ ಒಬ್ಬ ಶ್ರೀಮಂತ ವ್ಯಕ್ತಿ ಫ್ರಾನ್ಸ್‌ನ ದೊಡ್ಡ ಬಂಗಲೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ತುಂಬಾ ಆಡಂಬರವಾಗಿ ಜೀವಿಸಬೇಕಾದ ಅವರು ಒಂದು ಮಧ್ಯಮ ವರ್ಗದವರು ತಿನ್ನುವ ಆಹಾರವನ್ನೇ ತಿನ್ನುತ್ತಿದ್ದರು. ಮಧ್ಯಮ ವರ್ಗದವರು ಧರಿಸುವ ಬಟ್ಟೆಯನ್ನೇ ಧರಿಸುತ್ತಿದ್ದರು. ಅವರ ಸರಳ ಜೀವನವನ್ನು ಕಂಡು ಅವರ ಊರಿನ ಜನರು ಪರಿಹಾಸ್ಯ ಮಾಡುತ್ತಿದ್ದರು. ಯಾರಿಗಾಗಿ ಇಷ್ಟೊಂದು ಆಸ್ತಿಯನ್ನು ಇಟ್ಟಿದ್ದೀರ ಎಂದು ಗೇಲಿ ಮಾಡಿದರು. ಕಾಲ ಕಳೆಯಿತು, ಒಂದು ದಿನ ಅವರು ಸತ್ತು ಹೋದರು. ಅವರು ಬರೆದಿದ್ದ ವಿಲ್ ಊರಿನವರ ಕೈಗೆ ಸಿಕ್ಕಿತು, ಅದನ್ನು ನೋಡಿದವರು ಬೆಚ್ಚಿಬಿದ್ದರು. ಅವರ ಪೂರ್ತಿ ಆಸ್ತಿಯನ್ನು ನೀರಿಲ್ಲದೆ ಪರದಾಡುತ್ತಿರುವ ಆ ಊರಿನ ಜನರಿಗೆ, ಉಚಿತವಾಗಿ ನೀರು ಕೊಡಲು ಉಪಯೋಗಿಸುವಂತೆ ಕೋರಿದ್ದರು.
ಯೇಸು ಕ್ರಿಸ್ತನು ಸಹ ತನ್ನ ಪರಲೋಕ ಮಹಿಮೆನ್ನು ತೊರೆದು, ಬಡವನಾಗಿ ಬಂದರು. ನಾವು ಶ್ರೀಮಂತರಾಗಬೇಕೆಂದು ಆತನು ದರಿದ್ರನಾದನು. ಅವರು ನಮ್ಮಿಂದ ನಿರೀಕ್ಷಿಸುವ ಕಾರ್ಯ ಎರಡೇ. 1. ನಿನ್ನ ದೇವರಾದ ಯೆಹೋವನನ್ನು ಪೂರ್ಣ ಹೃದಯದಿಂದಲೂ, ಪೂರ್ಣ ಆತ್ಮದಿಂದಲೂ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕೆಂಬುದೇ (ಮತ್ತಾ. 22:37). ಕರ್ತವ್ಯಕ್ಕಾಗಿ ಆತನಿಗೆ ನಮ್ಮ ಸಂಪೂರ್ಣತೆಯನ್ನು ನೀಡದೆ ನಾವು ಪ್ರೀತಿ ಮತ್ತು ಸಮರ್ಪಣಾ ಮನೋಭಾವವನ್ನು ಹೊಂದಿರಬೇಕು. ಅಬ್ರಹಾಮನು ತನ್ನನ್ನು ತುಂಬಾ ಪ್ರೀತಿಸುತ್ತಾನೆಂದು ತಿಳಿದುಕೊಂಡು, ದೇವರು ಅವನಿಗೆ ಇಸಾಕನನ್ನು ಬಲಿಕೊಡಬೇಕೆಂದು ಹೇಳುತ್ತಾರೆ (ಆದಿ. 22: 2). ಇದರಲ್ಲಿ ಇಸಾಕನನ್ನು ಬಲಿತೆಗೆದುಕೊಳ್ಳುವುದು ಆತನ ಉದ್ದೇಶವಾಗಿರಲಿಲ್ಲ, ಬದಲಾಗಿ ಅವನು ಇಸಾಕನಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಾನೋ ಎಂಬುದನ್ನು ದೇವರು ತಿಳಿದುಕೊಳ್ಳಲು ಬಯಸಿದರು. ಎರಡನೆಯದಾಗಿ, ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬುದೇ (ಮತ್ತಾ. 22:39). ಈ ಎರಡು ತಕ್ಕಡಿಗಳ ಎರಡು ತಟ್ಟೆಗಳಂತೆ ಇರಬೇಕು. ಇದಕ್ಕೆ ದೇವರು ಒಳ್ಳೆಯ ಸಮಾರ್ಯನ ಸಾಮ್ಯವನ್ನು ಹೇಳುತ್ತಾರೆ. ಪ್ರೀತಿ ಎಂಬುದು ತಾನಾಗಿ ಮುಂದೆ ಬಂದು ಸ್ವಯಂಚಾಲಿತವಾಗಿ ತನ್ನದನ್ನು ಸಂತೋಷವಾಗಿ ಮತ್ತೊಬ್ಬರಿಗಾಗಿ ಖರ್ಚು ಮಾಡುವುದಾಗಿದೆ. ನಾವು ನೋಡುವವರ ಬಳಿ ಪ್ರೀತಿಯಿಂದಿರಬೇಕು ಹಾಗಿದ್ದಾಗ ನಾವು ದೇವರನ್ನು ಪ್ರೀತಿಸುವವರಾಗಿರುತ್ತೇವೆ. ಒಳ್ಳೆಯ ಸಮಾರ್ಯನು ತನ್ನ ದ್ರಾಕ್ಷಾರಸ, ಎಣ್ಣೆ, ವಾಹನ ಮತ್ತು ಎರಡು ಕಾಸು ಇವುಗಳನ್ನೆಲ್ಲಾ ಖರ್ಚು ಮಾಡಿದನು.
ಪ್ರಿಯರೇ! ನಮ್ಮ ಪ್ರೀತಿಯು ಕ್ರಯ ಸಲ್ಲಿಸುವಂತೆ ಇದೆಯೇ? ಎಂದು ಯೋಚಿಸೋಣ. ಕ್ರಯ ಕೊಡದೆ ಪ್ರೀತಿಸಲು ಸಾಧ್ಯವಿಲ್ಲ. ಕ್ರಯ ಸಲ್ಲಿಸದ ಪ್ರೀತಿಯು ಪ್ರಯೋಜನಕಾರಿಯಾಗಿ ಇರುವುದಿಲ್ಲ. ಕ್ರಯ ಸಲ್ಲಿಸುವ ಪ್ರೀತಿಯು ನಮಗೂ ಮತ್ತು ಇತರರಿಗೂ ಪ್ರಯೋಜನಕಾರಿಯಾಗಿರುತ್ತದೆ. ಹಲ್ಲೇಲೂಯ!
- Mrs. ಅನ್ಬುಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ನಿರ್ಮಾಣ ಹಂತದಲ್ಲಿರುವ (ಸಭೆ)ಆಲಯಗಳು ಶೀಘ್ರದಲ್ಲೇ ಪೂರ್ಣಗೊಳ್ಳುವಂತೆ; ಅದರ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482