Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.05.2022
Share:

By Village Missionary Movement

Sunday, 29-May-2022

ಧೈನಂದಿನ ಧ್ಯಾನ(Kannada) – 30.05.2022

 

ವಿಧೇಯನಾಗಬೇಡ

 

"ತಂದೆಯ ಮೇಲಾಗಲಿ ತಾಯಿಯ ಮೇಲಾಗಲಿ ನನ್ನ ಮೇಲೆ ಇಡುವುದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ..." - ಮತ್ತಾಯ 10:37

 

“ಆಹಾ, ಎಂಥಾ ಅಂಶ! ವಿಧೇಯತೆಯೇ ಕ್ರೈಸ್ತ ಧರ್ಮದ ಮೊದಲ ಹೆಜ್ಜೆ ಎಂದು ಬೋಧಿಸುವುದನ್ನು ಕೇಳಿದ್ದೇವೆ" ಎಂದು ಈ ಅಂಶವನ್ನು ಓದಿದ ಕೂಡಲೇ ನೀವು ಕೇಳಬಹುದು. ಸತ್ಯವೇದವನ್ನು ಸರಿಯಾಗಿ ಧ್ಯಾನಿಸಿ ನೋಡಿದರೆ, ಕೆಲವೊಮ್ಮೆ ಕೆಲವು ವಿಷಯಗಳಲ್ಲಿ ಕ್ರೈಸ್ತನು ವಿಧೇಯನಾಗಬಾರದು ಎಂದು ಸತ್ಯವೇದವು ಪಟ್ಟಿ ಮಾಡಿದೆ, ಅವುಗಳಲ್ಲಿ ಕೆಲವನ್ನು ನಾವು ಇಂದು ಯೋಚಿಸೋಣ. ಪೋಷಕರಿಗೆ: 10 ಆಜ್ಞೆಗಳಲ್ಲಿನ ಮುಖ್ಯ ಆಜ್ಞೆ ಹೆತ್ತವರನ್ನು ಗೌರವಿಸುವುದು. ಹಾಗೆ ಗೌರವಿಸುವಾಗ ನಾವು ಆಶೀರ್ವದಿಸಲ್ಪಡುತ್ತೇವೆ ಎಂಬ ವಾಗ್ದಾನ ಕೊಡಲ್ಪಟ್ಟಿದೆ, ಹೆತ್ತವರನ್ನು ಗೌರವಿಸದೆ, ಹೀನವಾಗಿ ನೋಡುವವರ ಕಣ್ಣುಗಳನ್ನು ನದಿಯ ಕಾಗೆಗಳು ಕಿತ್ತುಹಾಕುತ್ತವೆ ಎಂದು ಸತ್ಯವೇದವು ಎಚ್ಚರಿಸುತ್ತಿದೆ.

 

ಅದೇ ಸಮಯದಲ್ಲಿ ಒಬ್ಬ ವ್ಯಕ್ತಿಯು ಯೇಸುಕ್ರಿಸ್ತನ ಶಿಷ್ಯನಾಗಿ ಬದಲಾಗಲು ಬಯಸುವಾಗ ಹೆತ್ತವರು ತಡೆಮಾಡಿದರೆ ಅಥವಾ ಕರ್ತನು ಒಂದು ವಿಶ್ವಾಸಿಯನ್ನು ಸೇವೆಗೆ ಕರೆಯುವಾಗ ಹೆತ್ತವರು ತಡೆದರೆ ಅವರಿಗೆ ವಿಧೇಯರಾಗಬಾರದೆಂದು ಸತ್ಯವೇದವು ಬೋಧಿಸುತ್ತಿದೆ (ಮತ್ತಾಯ 10:37) ಅದೇ ಸಮಯದಲ್ಲಿ ರಕ್ಷಣೆ ಹೊಂದಿದ ಒಂದು ವಿಶ್ವಾಸಿಗೆ ರಕ್ಷಣೆ ಹೊಂದದ ವ್ಯಕ್ತಿಯೊಂದಿಗೆ ವಿವಾಹ ಮಾಡಲು ಹೆತ್ತವರು ಸಿದ್ಧತೆ ನಡೆಸಿದಾಗ ವಿಧೇಯರಾಗಬೇಕಾದ ಅಗತ್ಯವಿಲ್ಲ. ( 2 ಕೊರಿಂ. 6:14 ) ಯೌವನಸ್ಥರೇ, ಹೆತ್ತವರನ್ನು ಗೌರವಿಸಿ, ಅವರಿಗೆ ಹೆಚ್ಚು ಗಮನ ಕೊಡಿ. ಆದರೆ ಸತ್ಯವೇದಕ್ಕೆ ವಿರುದ್ಧವಾದ ವಿಷಯಗಳಲ್ಲಿ, ನಿಮ್ಮ ಹೆತ್ತವರಿಗಿಂತ ದೇವರ ವಾಕ್ಯಗಳಿಗೆ ಮೊದಲ ಸ್ಥಾನ ನೀಡಿರಿ, ಅದಕ್ಕಾಗಿ ನಿಮ್ಮ ಹೆತ್ತವರ ಬಳಿ ಕಠಿಣವಾಗಿಯೋ ಅಥವಾ ಬಿರುಸಾಗಿಯೋ ಮಾತನಾಡದೇ ಪ್ರೀತಿಯಿಂದ ಬಿಡಿಸಿ ಹೇಳಿ ಅವರಿಗೆ ಕೊಡಬೇಕಾದ ಗೌರವವನ್ನು ನೀಡಿರಿ.

 

ಸರ್ಕಾರಕ್ಕೆ: ರೋಮಾ.13 ರಲ್ಲಿ ನಾವು ಸರ್ಕಾರದ ಪ್ರತಿಯೊಂದು ಕಾನೂನನ್ನು ಪಾಲಿಸಬೇಕೆಂದು ಸತ್ಯವೇದವು ಬೋಧಿಸುತ್ತಿದೆ. ಅಂತೆಯೇ ಸರ್ಕಾರವು ವಿಧಿಸುವ ಎಲ್ಲಾ ತೆರಿಗೆಗಳನ್ನು ಪಾವತಿಸಲು ನಾವು ಬಾಧ್ಯರಾಗಿದ್ದೇವೆ, ಅದೇ ಸಮಯದಲ್ಲಿ ಲೋಕದ ಕಟ್ಟಕಡೆಗೆ ಹೋಗಿ ಸುವಾರ್ತೆಯನ್ನು ಸಾರಿರಿ ಎಂಬ ಮುಖ್ಯವಾದ ಆಜ್ಞೆಗೆ ನಾವು ವಿಧೇಯರಾಗಿ ಸುವಾರ್ತೆಯನ್ನು ಸಾರುವಾಗ ಸರ್ಕಾರದ ಕಾನೂನು ತಡೆಮಾಡಿದರೆ ಅದಕ್ಕೆ ನಾವು ವಿಧೇಯರಾಗಬೇಕಾದ ಅಗತ್ಯವಿಲ್ಲ, ಅಪೊಸ್ತಲರ ಕೃತ್ಯ. 5ನೇ ಅಧ್ಯಾಯದಲ್ಲಿ ಪೇತ್ರನು ಮತ್ತು ಇತರ ಅಪೊಸ್ತಲರು ಸುವಾರ್ತೆಯನ್ನು ಸಾರುವುದನ್ನು ಅಧಿಕಾರಿಗಳು ನಿಷೇಧಿಸಿದಾಗ, ಮನುಷ್ಯರಿಗೆ ವಿಧೇಯರಾಗುವುದಕ್ಕಿಂತ ದೇವರಿಗೆ ವಿಧೇಯರಾಗುವುದೇ ಅವಶ್ಯ ಎಂದು ಹೇಳುವುದನ್ನು ಓದುತ್ತೇವೆ, ಹಳೆಯ ಒಡಂಬಡಿಕೆಯ ನಕ್ಷತ್ರವಾದ ದಾನಿಯೇಲನು ಕೂಡ ಪ್ರಾರ್ಥಿಸಲು ತಡೆ ಇದ್ದರೂ ಸಹ ಪ್ರಾರ್ಥಿಸಿದನು.

 

ಪ್ರೀತಿಯ ಯೌವನಸ್ಥರೇ! ವಿಧೇಯರಾಗಬೇಕಾದದ್ದಕ್ಕೆ ವಿಧೇಯರಾಗಿ, ವಿಧೇಯರಾಗಬಾರದ ವಿಷಯಗಳಿಗೆ ವಿಧೇಯರಾಗದೇ ಬಲಕ್ಕೆ ಎಡಕ್ಕೆ ತಿರುಗದೆ ಕ್ರಿಸ್ತನು ಇಟ್ಟಿರುವ ಮಾರ್ಗದಲ್ಲಿ ಸುರಕ್ಷಿತವಾಗಿ ಸತತವಾಗಿ ಮುನ್ನಡೆಯೋಣ.

- J. ಸಂತೋಷ್

 

ಪ್ರಾರ್ಥನಾ ಅಂಶ:

ಪ್ರತಿಯೊಂದು ಕೆಲಸದ ಸ್ಥಳದಲ್ಲೂ "ಉಜ್ಜೀವನ ಬಯಸುವವರ ಶಿಬಿರ" ನಡೆಸಲು ಮಾಡುವ ಎಲ್ಲಾ ಪ್ರಯತ್ನಗಳನ್ನು ದೇವರು ಸಫಲ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş