Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.05.2022 (Kids Special)
Share:

By Village Missionary Movement

Sunday, 29-May-2022

ಧೈನಂದಿನ ಧ್ಯಾನ(Kannada) – 29.05.2022 (Kids Special)

 

ಕೈಗೆಟುಕುವ ಬೆಲೆ

 

“ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು" - ಜ್ಞಾನೋಕ್ತಿಗಳು 19:17

 

Hai Friends ಹೇಗಿದ್ದೀರ super - ಆಗಿ ಇದ್ದೀರಾ? Very good ಇವತ್ತಿನ ಕಥೆ ಕೇಳೋಕೆ ರೆಡಿಯಾಗಿ ಇದ್ದೀರಾ, ನಾನೂ ಕೂಡ ಕಥೆ ಹೇಳೋಕೆ ರೆಡಿಯಾಗಿ ಬಂದಿದ್ದೇನೆ, ಕೇಳೋಣವಾ?

 

Sweety home work ಎಲ್ಲಾ ಬರೆದು ಮುಗಿಸಿ, ಅಪ್ಪ ಯಾವಾಗ ಬರುತ್ತಾರೆ ಎಂದು ಎದುರುನೋಡುತ್ತಿದ್ದಳು. ಏಕೆಂದರೆ ಅಪ್ಪನ ಬಳಿ Apple ಹಣ್ಣು ತೆಗೆದುಕೊಂಡು ಬರಲು ಹೇಳಿದ್ದಳು. ಅವಳಿಗೆ Apple ಎಂದರೆ ತುಂಬಾ ಇಷ್ಟ. ನಿಮಗೆ ಇಷ್ಟಾನಾ? Sweety ಯ ತಂದೆ ಕೆಲಸ ಮುಗಿಸಿ ಬರುವಾಗ, Apple ತರಲು ಮರೆತುಬಿಟ್ಟರು. ಹಣ್ಣಿನ ಅಂಗಡಿಗಳನ್ನೆಲ್ಲಾ ದಾಟಿ ಮುಂದೆ ಹೋದ ನಂತರವೇ ಅಪ್ಪನಿಗೆ ಮಗಳು Apple ಕೇಳಿದ್ದು ನೆನಪಾಯಿತು. ಛೆ...ಹೀಗೆ ಮರೆತೇ ಹೋದೆ ಎಂದುಕೊಳ್ಳುತ್ತಾ ಎಲ್ಲಾ ಕಡೆ ತಿರುಗಿ ನೋಡಿದರು. ರಸ್ತೆ ಪಕ್ಕದಲ್ಲಿ ಒಂದು ಅಜ್ಜಿ Apple ಮಾರುತ್ತಿದ್ದರು. ಆ ದಿನ ಆದಾಯವಿಲ್ಲದ ಕಾರಣ ಅಜ್ಜಿ ಚಿಂತಾಕ್ರಾಂತರಾಗಿದ್ದರು. Sweety ತಂದೆಯವರು, "ಆಪಲ್ ಎಷ್ಟು?" ಎಂದು ಕೇಳಿದರು. ಅಜ್ಜಿ, "200 ರೂಪಾಯಿ" ಎಂದು ಹೇಳಿದರು. "ಕಡಿಮೆ ಮಾಡಿ ಕೊಡಿ" ಎಂದು ಕೇಳಿದಾಗ, "ಸರಿ ಆಯ್ತಪ್ಪ 180 ಕೊಡು" ಎಂದು ಹೇಳಿ 1 ಕೆಜಿ ಆಪಲ್ ಅನ್ನು ಕೊಟ್ಟರು. ಇವರು ಅದರಲ್ಲೂ 20 ರೂಪಾಯಿ ಕಡಿಮೆ ಮಾಡಿ, " ತಗೋಳಿ ಅಜ್ಜಿ ಬರೀ 160 ರೂಪಾಯಿ ಮಾತ್ರ ಇದೆ" ಎಂದು ಕೊಟ್ಟರು. ಕಾಸು ಕಡಿಮೆ ಕೊಟ್ಟದ್ದನ್ನು ನೆನೆಸಿ Sweety ಯವರ ಅಪ್ಪ ಖುಷಿಯಾಗಿ ಮನೆಗೆ ಹೋದರು.

 

ಮರುವಾರ ಅಪ್ಪ ದೊಡ್ಡ ಹಣ್ಣಿನ ಅಂಗಡಿಯಲ್ಲಿ ಆಪಲ್ ತೆಗೆದುಕೊಳ್ಳಲು ಬೆಲೆಯನ್ನು ವಿಚಾರಿಸಿದರು. 250 ಎಂದು ಹೇಳಿದರು. ಅಲ್ಲಿ ಮಾತುಕತೆ ನಡೆಸಿ ಕಡಿಮೆ ಮಾಡಲು ಸಹ ಸಾಧ್ಯವಿಲ್ಲವಲ್ಲ? ತಕ್ಷಣ ಅಜ್ಜಿಯ ಬಳಿಯೇ ತೆಗೆದುಕೊಳ್ಳೋಣ ಎಂದು ಬಂದರು. ಅಂದು ಅಜ್ಜಿಯ ಪಕ್ಕದಲ್ಲಿ ಕುರುಡ ಮೊಮ್ಮಗಳು ಕುಳಿತಿದ್ದಳು. ಆಪಲ್ ಮಾರಿ ಅದರಲ್ಲಿ ಬರುವ ಹಣದಿಂದಲೇ ನಾವಿಬ್ಬರೂ ಜೀವನ ನಡೆಸುತ್ತಿದ್ದೇವೆ ಎಂದು ಅಜ್ಜಿ ಹೇಳಿದಾಗ Sweety-ಯ ತಂದೆಗೆ ಆ ದಿನ ಅಷ್ಟು ಕಡಿಮೆ ಬೆಲೆಗೆ ಆಪಲ್ ತೆಗೆದುಕೊಂಡದ್ದನ್ನು ನೆನೆಸಿಕೊಂಡು ತುಂಬಾ ಬೇಸರವಾಯಿತು. ಆ 40 ರೂಪಾಯಿ ನಮಗೆ ದೊಡ್ಡ ವಿಷಯವಲ್ಲ, ಆದರೆ ಆ ಅಜ್ಜಿಗೆ ಅದೇ ಜೀವನಾಧಾರ. ಇನ್ನು ಮುಂದೆ ಇಂತಹ ಸಣ್ಣ ಸಣ್ಣ ವ್ಯಾಪಾರಸ್ಥರ ಬಳಿ 5,10 ರೂಪಾಯಿಗೆ ಚೌಕಾಸಿ ಮಾಡುವುದು ಬೇಡ ಎಂದು ನಿರ್ಧರಿಸಿದರು. ಇನ್ನು ಮುಂದೆ ಅಜ್ಜಿಯ ಬಳಿಯೇ Apple ತೆಗೆದುಕೊಳ್ಳಲು ನಿರ್ಧರಿಸಿದರು. ತನ್ನ Friends, ಮತ್ತು ಸಂಬಂಧಿಕರಿಗೆ ಅಜ್ಜಿಯನ್ನು ಪರಿಚಯಿಸಿದರು. ಅಜ್ಜಿಗೆ ತುಂಬಾ ಖುಷಿಯಾಯಿತು.

 

ಏನು ಪುಟಾಣಿಗಳೇ, ಯಾರಿಗೂ ಮೋಸ ಮಾಡಬಾರದು ಸರೀನಾ? ಬಡ ಸ್ಥಿತಿಯಲ್ಲಿರುವವರನ್ನು, ನಿರ್ಗತಿಕರನ್ನು ಕಂಡರೆ ಅವರಿಗೆ ಸಹಾನುಭೂತಿ ತೋರಿಸಿ ಸಹಾಯ ಮಾಡಬೇಕು. ಅವರಿಗೆ ಮಾಡುವ ಸಹಾಯ ದೇವರಿಗೆ ಮಾಡಿದಂತೆ ಎಂದು ಸತ್ಯವೇದವು ಹೇಳುತ್ತಿದೆ ಮಾಡ್ತೀರ ತಾನೇ!

- Mrs. ಅನ್ಬುಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş