Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.05.2022
Share:

By Village Missionary Movement

Friday, 27-May-2022

ಧೈನಂದಿನ ಧ್ಯಾನ(Kannada) – 27.05.2022

 

ಯಾರ ಮಾತು

 

"ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದ ಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು" - ಕೀರ್ತನೆ 1: 2

 

ಒಂದು ಸಾರಿ ನಾನು ನನ್ನ ಮಾವನ ಮನೆಗೆ ಹೋಗಿದ್ದೆ. ನನ್ನ ಮಾವ ಕಾಲೇಜಿನಲ್ಲಿ ಕೆಲಸ ಮಾಡುತ್ತಲೇ ಸೇವೆಯನ್ನೂ ಮಾಡುತ್ತಿದ್ದರು. ಆಗ ಒಂದು ದಿನ ಒಬ್ಬ ಮಹಿಳೆ ನನ್ನ ಮಾವನನ್ನು ದೂರವಾಣಿಯಲ್ಲಿ ಸಂಪರ್ಕಿಸಿ, "ನನ್ನ ಸಭೆಯ ಪಾಸ್ಟರಮ್ಮ ನನ್ನ ಮನಸ್ಸಿಗೆ ನೋವಾಗುವಂತೆ ಮಾತನಾಡಿಬಿಟ್ಟರು, ಅವರು ಹೇಳಿದ ಮಾತುಗಳನ್ನು ನಾನು ಮರೆಯಲು ಸಾಧ್ಯವಾಗುತ್ತಿಲ್ಲ, ಅವು ನನ್ನ ಕೆಲಸಗಳನ್ನು ಮಾಡಲಾಗದಂತೆ ಅಡ್ಡಿಪಡಿಸುತ್ತಾ ದಾರಿ ತಪ್ಪಿಸುತ್ತಿದೆ, ನನ್ನಿಂದ ಅವುಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಹೇಳುತ್ತಿದ್ದರು. ನನ್ನ ಮಾವ ಆಕೆ ಮಾತನಾಡುವಾಗ ಅವರ ಮಧ್ಯದಲ್ಲಿ ನುಗ್ಗಿ ಎರಡು ಪ್ರಶ್ನೆಗಳನ್ನು ಕೇಳಿದರು. ನೀವು ಚಿಂತಿಸುತ್ತಿರುವುದು "ಯೇಸು ಕ್ರಿಸ್ತನ ಮಾತುಗಳು ಎಂದು ಭಾವಿಸುತ್ತೀರಾ? ಅಥವಾ ಈಜೆಬೆಲಳ ಮಾತುಗಳಾ?'' ಎಂದರು.

 

ಸ್ವಲ್ಪ ಸಮಯದ ನಂತರ ನಾನು ನನ್ನ ಮಾವನ ಬಳಿಗೆ ಹೋಗಿ, ಅದೇನು “ಯೇಸು ಕ್ರಿಸ್ತನ ಮಾತುಗಳಾ? ಈಜೆಬೆಲಳ ಮಾತುಗಳಾ?'' ಎಂದು ಕೇಳಿದೆನು. ಅದಕ್ಕೆ ಅವರು ಹೇಳಿದರು, “ನಮ್ಮೆಲ್ಲರಿಗೂ ಎಲೀಯನ ಬಗ್ಗೆ ಗೊತ್ತು. ಬಹಳ ಧೈರ್ಯಶಾಲಿ ಪ್ರವಾದಿ, ಅವರು ಅನೇಕ ಮಹಾನ್ ಕೆಲಸಗಳನ್ನು ಮಾಡಿದರು. ಆದರೆ ಅಂತಹ ಮಹಾನ್ ಧೀರ ವ್ಯಕ್ತಿ ಒಮ್ಮೆ ಈಜೆಬೆಲಳು ಕಳುಹಿಸಿದ ಬೆದರಿಕೆಗೆ ಹೆದರಿ, ತನ್ನ ಪ್ರಾಣವನ್ನು ತೆಗೆದುಕೊಳ್ಳುವಂತೆ ಬೇಡಿಕೊಳ್ಳುವುದನ್ನು ನಾವು ನೋಡುತ್ತೇವೆ. ಅದಕ್ಕಿಂತ ಮೊದಲು ಕರ್ತನು ಅವರ ಮೂಲಕ ಮಾಡಿದ ಅದ್ಭುತಗಳು ತುಂಬಾ ಆಶ್ಚರ್ಯವಾಗಿದೆ. ಚಾರೆಪ್ತಾ ವಿಧವೆಯ ಮನೆಯಲ್ಲಿ ಮಾಡಲ್ಪಟ್ಟ ಅದ್ಭುತ (1 ಅರಸು 17:14), ನಂತರ ಅವರು ಪ್ರಾರ್ಥಿಸಿದಾಗ ಆಕಾಶದಿಂದ ಬೆಂಕಿಬಿದ್ದು ಯಜ್ಞಮಾಂಸವನ್ನು ದಹಿಸಿದ ಅದ್ಭುತ (1ಅರಸು. 18:38) ಅದರ ನಂತರ ಅವರು ಪ್ರಾರ್ಥಿಸಿದಾಗ ವರ್ಷ ಪೂರ್ತಿ ಸುರಿಯದಷ್ಟು ಮಳೆ ಸುರಿಯಿತು. 1ಅರಸು 18:41-44) ಎಂದು ಪಟ್ಟಿ ಮಾಡಬಹುದು. ಹೀಗೆ ಇಸ್ರಾಯೇಲ್ ದೇವರಾದ ಕರ್ತನ ಮುಂದೆ ನಿಂತಿರುವ ನಾನು" ಎಂದು ಧೈರ್ಯವಾಗಿ ಘರ್ಜಿಸಿದ ಎಲೀಯ, 1ಅರಸು.19:4 ರಲ್ಲಿ ಧೈರ್ಯ ಕಳೆದುಕೊಂಡು ನನ್ನ ಪ್ರಾಣವನ್ನು ತೆಗೆದುಕೊಳ್ಳಿರಿ ಎಂದು ಮೊರೆಯಿಡುತ್ತಾರೆ.

 

ಹೌದು ಪ್ರಿಯರೇ! ಅನೇಕ ಬಾರಿ ನಾವು ಸಹ ದೇವರ ವಾಕ್ಯವನ್ನು ನಂಬದಷ್ಟು ಮಟ್ಟಿಗೆ ನಮ್ಮ ಹೃದಯವನ್ನು ಕಠಿಣ ಮಾಡಿಕೊಂಡು ಈಜೆಬೆಲಳಂತಹ ಲೌಕಿಕವಾದ ಮನುಷ್ಯರ ಮಾತುಗಳಿಂದ ನಮ್ಮ ಹೃದಯವನ್ನು ತುಂಬಿಕೊಂಡು ನೋವನ್ನು ಅನುಭವಿಸುತ್ತೇವೆ. ಆದರೆ ನಾವು ದೇವರನ್ನು ನೋಡಿದಾಗ ಮತ್ತು ಅವರ ಮಾತುಗಳನ್ನು ಕೇಳಿದಾಗ ಮತ್ತು ಅದರಂತೆ ನಡೆದಾಗ ದೇವರು ನಮಗೆ ಧೈರ್ಯ, ಶಕ್ತಿ ಮತ್ತು ಯಶಸ್ಸನ್ನು ನೀಡಲು ಸಮರ್ಥನಾಗಿದ್ದಾನೆ ಎಂಬುದನ್ನು ನಾವು ಮರೆಯಲೇ ಬಾರದು. ನಾವು ಇಂದು ಯಾರ ಮಾತುಗಳನ್ನು ಧ್ಯಾನಿಸುತ್ತಿದ್ದೇವೆ?

 

“ಯೇಸು ಕ್ರಿಸ್ತನ ಮಾತುಗಳನ್ನಾ? ಈಜೆಬೆಲಳ ಮಾತುಗಳನ್ನಾ?

 

- Mrs. ಸ್ಟೆಫಿ ರಾಕ್ಸನ್

 

ಪ್ರಾರ್ಥನಾ ಅಂಶ:

ಮನೆ ಸಭೆ ರಚನೆಯ ಯೋಜನೆಯಡಿ ಅನೇಕ ಮನೆ ಸಭೆಗಳು ರೂಪಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al