Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.05.2022
Share:

By Village Missionary Movement

Thursday, 26-May-2022

ಧೈನಂದಿನ ಧ್ಯಾನ(Kannada) – 26.05.2022

 

ಕ್ರಿಸ್ತನಲ್ಲಿ ವೈರಾಗ್ಯ

 

"...ಒಳ್ಳೆಯ ವಿಷಯಕ್ಕಾಗಿ ನೀವು ಆಸಕ್ತಿಯನ್ನು ತೋರಿಸುವುದು ಒಳ್ಳೆಯದೇ" - ಗಲಾತ್ಯ 4:18

 

ಅಪೊಸ್ತಲನಾದ ಪೌಲನು ಅಥೇನೆ ಪಟ್ಟಣದಲ್ಲಿ ತನ್ನ ಸಹ ಸೇವಕರಿಗಾಗಿ ಕಾಯುತ್ತಿರುವಾಗ, ಆ ಪಟ್ಟಣವು ವಿಗ್ರಹಗಳಿಂದ ತುಂಬಿರುವುದನ್ನು ನೋಡಿ, ತನ್ನ ಆತ್ಮದಲ್ಲಿ ಬಹು ವೈರಾಗ್ಯದೊಂದಿಗೆ, ಆ ಪಟ್ಟಣದ ಜನರಿಗೆ ಯೇಸುವಿನ ಬಗ್ಗೆ ಮತ್ತು ಪುನರುತ್ಥಾನದ ಬಗ್ಗೆ ಬೋಧಿಸಲು ಪ್ರಾರಂಭಿಸಿದರು. ಕೆಲವರು ಪೌಲನ ಮಾತುಗಳನ್ನು ಒಪ್ಪಿಕೊಂಡು ವಿಶ್ವಾಸಿಗಳಾದರು ಎಂದು ಓದುತ್ತೇವೆ.

 

ನಾವು ಕೂಡ ನಮ್ಮ ನಿತ್ಯ ಜೀವನದಲ್ಲಿ ಎಷ್ಟೋ ವಿಗ್ರಹಾರಾಧನೆಯ ದೇವಸ್ಥಾನಗಳನ್ನು ನೋಡುತ್ತಿರುತ್ತೇವೆ. ಅವುಗಳು ನಮಗೆ ಒಳ್ಳೇದನ್ನು ಮಾಡುತ್ತವೆ ಎಂದು ಅವುಗಳನ್ನು ಹಿಂಬಾಲಿಸಲು ಹೊರಟಿರುವ ಜನರನ್ನು ಕಾಣುತ್ತಿದ್ದೇವೆ. ಈ ಪರಿಸ್ಥಿತಿಯಲ್ಲಿ ನಮ್ಮ ಅಂತರಂಗವು ಎಷ್ಟು ಬಾರಿ ಆತ್ಮದಲ್ಲಿ ವೈರಾಗ್ಯದಿಂದ ಇತ್ತು? ಅವರು ಸಹ ಸತ್ಯ ದೇವರನ್ನು ತಿಳಿದುಕೊಳ್ಳಬೇಕು ಎಂದು ಯೇಸುಕ್ರಿಸ್ತನ ಬಗ್ಗೆ ಎಷ್ಟು ಜನರಿಗೆ ತಿಳಿಸಿದ್ದೇವೆ? ನಮ್ಮ ವೈರಾಗ್ಯ ಎಂಥದ್ದಾಗಿದೆ? ನಾವು ಕ್ರೈಸ್ತರೆಂಬ ಕಂಬಳಿಯನ್ನು ಹೊದ್ದುಕೊಂಡು, ಒಂದು ಸಭೆಯಲ್ಲಿ, ಸಂಸ್ಥೆಯಲ್ಲಿ ಅಂಗವಾಗಿದ್ದು, ಅದನ್ನು ಹಿಡಿದುಕೊಂಡು ವೈರಾಗ್ಯವನ್ನು ತೋರ್ಪಡಿಸುವವರಾಗಿದ್ದೇವಾ? ಅಥವಾ, ಕ್ರಿಸ್ತನ ದೇಹದಲ್ಲಿ ಒಂದು ಅಂಗವಾಗಿದ್ದು ನಿಜವಾದ ಕ್ರೈಸ್ತರಾಗಿ ಜೀವಿಸುತ್ತಿದ್ದೇವಾ?

 

ಇಂದು ಕ್ರೈಸ್ತರಾದ ನಾವು ಯೇಸುವಿನ ಹೆಸರಿನಲ್ಲಿ ಎಷ್ಟು ವಿಭಾಗಗಳಾಗಿ ಬೇರ್ಪಟ್ಟಿದ್ದೇವೆ? ಒಳ್ಳೆಯ ವಿಷಯದಲ್ಲಿ ವೈರಾಗ್ಯವನ್ನು ಪ್ರಶಂಸಿಸುವುದು ಒಳ್ಳೆಯದೇ. ನಾನು ಈ ಸಂಸ್ಥೆಗೆ ಸೇರಿದವನು ಮತ್ತು ನೀವು ಆ ಸಂಸ್ಥೆಗೆ ಸೇರಿದವರು ಎಂಬ ವಿಭಜನೆಯಿಂದ ಕ್ರೈಸ್ತ ಜನರಲ್ಲಿ ಕಾಣಲ್ಪಡುವ ನಂಬಿಕೆ ಕುಸಿಯುತ್ತಿರುವುದನ್ನು ನೋಡಲು ಸಾಧ್ಯ. ಇಂತಹ ವಿಭಾಗಗಳಲ್ಲಿ ವೈರಾಗ್ಯವನ್ನು ತೋರಿಸುವುದನ್ನು ಬಿಟ್ಟು ಕ್ರಿಸ್ತನಿಗಾಗಿ ವೈರಾಗ್ಯವನ್ನು ತೋರ್ಪಡಿಸುವವರಾಗಿ ಜೀವಿಸೋಣ. ಜನರು ನಿಜವಾದ ದೇವರನ್ನು ತಿಳಿಯದೆ ವಿಗ್ರಹಗಳಿಂದ ಕಟ್ಟಲ್ಪಟ್ಟಿದ್ದಾರೆ ಎಂದು ಪೌಲನು ವೈರಾಗ್ಯದಿಂದ ಇದ್ದಂತೆ, ದೇವರನ್ನು ತಿಳಿಯದ ಜನರಿಗಾಗಿ ನಾವು ವೈರಾಗ್ಯದಿಂದ ಇರೋಣ. ಶಾರೀರಿಕ ವೈರಾಗ್ಯವನ್ನು ಕಡಿದು ಬಿಸಾಡೋಣ. ನಾವು ಸುವಾರ್ತೆಯನ್ನು ಬಿತ್ತೋಣ ಮತ್ತು ದೇವರ ರಾಜ್ಯವನ್ನು ಕಟ್ಟಲು ನಂಬಿಕೆಯಲ್ಲಿ ಒಂದಾಗೋಣ. ಆಮೆನ್.

- Mrs. ಸೀಮಿಕ್ಕಾ ಮೋಸೆಸ್

 

ಪ್ರಾರ್ಥನಾ ಅಂಶ:

ಪ್ರತಿ ಜಿಲ್ಲೆಯಲ್ಲಿ 300 ಗಿದ್ಯೋನ್ ಗಳು ಎದ್ದೇಳುವಂತೆ. ಇವರು ಒಂದು ಗಂಟೆ ಸಮಯ ಪ್ರಾರ್ಥನೆ ಮಾಡುವವರಾಗಿಯೂ ಮತ್ತು ಒಂದು ಗಂಟೆ ಸಮಯ ಕಾರ್ಯ ನಿರ್ವಹಿಸುವವರಾಗಿಯೂ ತಮ್ಮನ್ನು ಸಮರ್ಪಿಸಿಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş