Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.05.2022
Share:

By Village Missionary Movement

Wednesday, 25-May-2022

ಧೈನಂದಿನ ಧ್ಯಾನ(Kannada) – 25.05.2022

 

ದುರಾಸೆ

 

"ಇಜ್ರೇಲಿನವನಾದ ನಾಬೋತನ ಮರಣವಾರ್ತೆಯನ್ನು ಅಹಾಬನು ಕೇಳಿ ದ್ರಾಕ್ಷೇತೋಟವನ್ನು ಸ್ವಾಧೀನಮಾಡಿಕೊಳ್ಳುವದಕ್ಕೋಸ್ಕರ ಇಳಿದು ಹೋದನು." - 1 ಅರಸು. 21:16

 

ಕೊಲ್ಲುವ ಮಾರಣಾಂತಿಕ ಪಾಪಗಳಲ್ಲಿ ದುರಾಸೆಯೂ ಒಂದಾಗಿದೆ. ನಮಗಿರುವುದು ಸಾಕು ಎಂದೆಣಿಸದೆ, ಹೆಚ್ಚಿನ ಆಸ್ತಿ, ಸರಕು, ಜಮೀನುಗಳನ್ನು ಸಂಗ್ರಹಿಸಲು ಓಡಬಾರದು. ಜೀವನದ ಹರಿವು ತಪ್ಪು ದಾರಿಯಲ್ಲಿ ಹೋದಾಗ, ಅದು ವಿನಾಶಕ್ಕೆ ಕಾರಣವಾಗುತ್ತದೆ. ಅದನ್ನೇ ಅರಸನಾದ ಅಹಾಬನ ಮತ್ತು ನಾಬೋತನ ಜೀವನದಲ್ಲಿ ನೋಡಬಹುದು.

 

ನಾಬೋತನ ದ್ರಾಕ್ಷಿತೋಟವು ಅರಸನಾದ ಅಹಾಬನ ಅರಮನೆಯ ಸಮೀಪದಲ್ಲಿತ್ತು. ಅಹಾಬನು ಅದನ್ನು ತನ್ನ ತೋಟವನ್ನಾಗಿ ಮಾಡಿಕೊಳ್ಳಲು ಬಯಸಿದನು. ಆದರೆ ನಾಬೋತನು ಅರಸನಾದ ಅಹಾಬನಿಗೆ ತನ್ನ ಪಿತೃಗಳ ಸ್ವಾಸ್ತ್ಯವನ್ನು ಕೊಡಲು ನಿರಾಕರಿಸಿದನು. ಅಹಾಬನ ಹೆಂಡತಿಯಾದ ಈಜೆಬೆಲಳು ಇದನ್ನು ಕೇಳಿದಾಗ, ಅವಳು ನಾಬೋತನನ್ನು ಮೋಸದಿಂದ ಕೊಂದಳು. ಇವನು ಸತ್ತನೆಂದು ಅಹಾಬನು ಕೇಳಿದಾಗ, ನಾಬೋತನ ದ್ರಾಕ್ಷೇತೋಟವನ್ನು ತನಗಾಗಿ ತೆಗೆದುಕೊಳ್ಳಲಿದ್ದಾನೆ ಎಂದು ಕರ್ತನ ವಾಕ್ಯವು ಎಲೀಯನಿಗೆ ಉಂಟಾಗಿ, "...ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ, ನಿನ್ನ ರಕ್ತವನ್ನೂ ನೆಕ್ಕುತ್ತವೆ..." ಎಂದು ಹೇಳುತ್ತಾರೆ. ಅಹಾಬನು ತಾನು ಹೊಂದಿದ್ದ ಅನೇಕ ದ್ರಾಕ್ಷಿತೋಟಗಳಲ್ಲಿ ಒಂದನ್ನು ಆನಂದಿಸಿರಬಹುದು. ಆದರೆ ಅವನು ಅದನ್ನೆಲ್ಲಾ ಬಿಟ್ಟು ನಾಬೋತನ ಬಳಿಯಲ್ಲಿದ್ದ ಒಂದು ದ್ರಾಕ್ಷಿತೋಟವನ್ನು ಕಿತ್ತುಕೊಂಡು, ಅದನ್ನು ತನಗಾಗಿ ಅಪಹರಿಸಿಕೊಂಡನು. ಈ ಆಸೆ ದುರಾಶೆಯಲ್ಲಿ ಕೊನೆಗೊಂಡಿತು. ಅಂತಿಮವಾಗಿ ಅಹಾಬನ ಕುಟುಂಬ ಮತ್ತು ವಂಶಸ್ಥರು ನಾಶವಾದರು.

 

ಇದನ್ನು ಓದುತ್ತಿರುವ ಪ್ರೀತಿಯ ಸಹೋದರ ಸಹೋದರಿಯರೇ, ನೀವು ಬಹಳಷ್ಟು ಭೌತಿಕ ವಸ್ತುಗಳನ್ನು ಹೊಂದಿದ್ದೂ ಸಹ, ಮತ್ತೊಬ್ಬರ ವಸ್ತುಗಳನ್ನು ಬಯಸುತ್ತಿದ್ದೀರಾ? ಹೇಗಾದರೂ ಅದನ್ನು ಪಡೆಯಲು ನೀವು ಮೋಸಗೊಳಿಸುವ ಯೋಜನೆ ಮಾಡುತ್ತಿದ್ದೀರಾ? ಅಹಾಬ ಮತ್ತು ಈಜೆಬೆಲಳು, ನಾನೇ ರಾಜ ಮತ್ತು ರಾಣಿ; ನಾನೇನು ಮಾಡಿದರೂ ಯಾರೂ ಕೇಳುವುದಿಲ್ಲ ಎಂದು ಅಹಂಕಾರದಿಂದ ಮತ್ತೊಬ್ಬರನ್ನು ತಳ್ಳಿಹಾಕಿದ ಪ್ರಕಾರ ನೀವೂ ತಳ್ಳಿಬಿಡುತ್ತಿದ್ದೀರಾ? ಜಾಗರೂಕರಾಗಿರಿ. ಅವರಿಗೋಸ್ಕರ ಕರ್ತನು ನಿಮ್ಮೊಂದಿಗೆ ವಾದಿಸುತ್ತಾರೆ. ನೀವು ಮಾತ್ರವಲ್ಲ, ನಿಮ್ಮ ಕುಟುಂಬ ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ನೀವು ಸಹ ನಿತ್ಯ ನರಕಕ್ಕೆ ತಳ್ಳಲ್ಪಡುತ್ತೀರ. ದೇವರು ನಿಮ್ಮ ಬಗ್ಗೆ ನ್ಯಾಯತೀರಿಸುತ್ತಾರೆ. “ದುರಾಶೆಯೇ ಮಹಾನಷ್ಟ” ಎಂಬುದು ಜಗತ್ತಿನ ಭಾಷೆ. ಆದರೆ ದುರಾಸೆಗೆ ಕರ್ತನ ಶಿಕ್ಷೆ ಅದಕ್ಕಿಂತ ದೊಡ್ಡದು. ನಾವು ಈ ದುರಾಸೆಯನ್ನು ತೊರೆದುಹಾಕಿ ದೇವರ ಕಡೆಗೆ ತಿರುಗಿಕೊಳ್ಳೋಣ ನಾವು ಮತ್ತು ನಮ್ಮ ಕುಟುಂಬ ಆಶೀರ್ವಾದಗಳನ್ನು ಪಡೆದುಕೊಳ್ಳೋಣ.

- Mrs. ಭುವನಾ ಧನಬಾಲನ್

 

ಪ್ರಾರ್ಥನಾ ಅಂಶ: "ಕಣ್ಮಣಿಯೇ ಕೇಳ್" ಎಂಬ ಮಾಸಪತ್ರಿಕೆಯನ್ನು ನಮ್ಮ VMM ಸೇವೆಯ ಮೂಲಕ ಹೊರಬಿಡುತ್ತಿದ್ದೇವೆ. ಈ ಪತ್ರಿಕೆಯ ಮೂಲಕ ಅನೇಕ ಯೌವನಸ್ಥ ಹೆಣ್ಣು ಮಕ್ಕಳು ಕ್ರಿಸ್ತನ ಪ್ರೀತಿಯನ್ನು ಕಂಡುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş