Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.05.2022
Share:

By Village Missionary Movement

Tuesday, 24-May-2022

ಧೈನಂದಿನ ಧ್ಯಾನ(Kannada) – 24.05.2022

 

ಪ್ರಾರ್ಥನಾ ಜೀವನ

 

"ಮುಂಜಾನೆ ಹೊತ್ತು ಮೂಡುವದಕ್ಕಿಂತ ಬಹಳ ಮುಂಚಿತವಾಗಿ ಆತನು ಎದ್ದು ಹೊರಗೆ ನಿರ್ಜನ ವಾದ ಸ್ಥಳಕ್ಕೆ ಹೊರಟುಹೋಗಿ ಅಲ್ಲಿ ಪ್ರಾರ್ಥನೆ ಮಾಡಿದನು." - ಮಾರ್ಕನು 1:35

 

ಹೇಮಿಲ್ಟರ್ ಎಂಬ ಬೈಬಲ್ ಕಾಲೇಜಿನಲ್ಲಿದ್ದ ಹಿರಿಯ ಸೇವಕರಾದ ಫಾಕ್ಸ್ ಎಂಬವರು ಸಾವಿನ ಅಂಚಿನಲ್ಲಿದ್ದರು. ಡಾಕ್ಟರ್ ಫಾಕ್ಸ್ ರವರನ್ನು ಚೆಕ್ ಮಾಡಿ ಕೋಣೆಯ ಬಾಗಿಲಲ್ಲಿ ನಿಂತಿದ್ದ ಗೆಳೆಯರಿಗೆ ಏನನ್ನೋ ಸದ್ದಿಲ್ಲದೇ ಹೇಳಿ ಹೊರಟು ಹೋದರು. ಡಾಕ್ಟರ್ ಹೋದ ಕೂಡಲೇ ಬೆಡ್ ನಿಂದ ಎದ್ದ ಫಾಕ್ಸ್ ಗೆಳೆಯರ ಕೈ ಕುಲುಕಿ "ಡಾಕ್ಟರ್ ಏನು ಹೇಳಿದರು ಮರೆಮಾಚದೆ ಹೇಳು" ಎಂದರು. "ನೀವು ಅರ್ಧ ಗಂಟೆಗಿಂತ ಹೆಚ್ಚು ಕಾಲ ಬದುಕಿರಲು ಸಾಧ್ಯವಿಲ್ಲ" ಎಂದು ಹೇಳಿದರೆಂದು ಕಣ್ಣೀರಿನಿಂದ ತಿಳಿಸಿದರು. ತಕ್ಷಣವೇ ಫಾಕ್ಸ್, "ಹಾಗಾದರೆ ನನ್ನನ್ನು ಹಾಸಿಗೆಯಿಂದ ಎಬ್ಬಿಸಿ ಮೊಣಕಾಲುಗಳ ಮೇಲೆ ನಿಲ್ಲಿಸಿ." ನನ್ನ ಜೀವನದ ಕೊನೆಯ ನಿಮಿಷಗಳು ನನ್ನ ಮೊಣಕಾಲುಗಳ ಮೇಲೆ ನಿಂತಂತೆ ಕೊನೆಗೊಳ್ಳಲಿ” ಎಂದರು. ಮೊಣಕಾಲುಗಳ ಮೇಲೆ ನಿಂತಿದ್ದಾಗಲೇ ಅವರ ಪ್ರಾಣ ಹೋಯಿತು. ಅನೇಕ ವರ್ಷಗಳ ಕಾಲ ತಾನು ಪಾಲಿಸುತ್ತಿದ್ದ ಪ್ರಾರ್ಥನಾ ಅಭ್ಯಾಸವನ್ನು ಅವರು ತಮ್ಮ ಜೀವನದ ಕೊನೆಯ ಕ್ಷಣದಲ್ಲಿಯೂ ತಪ್ಪದೇ ಅನುಸರಿಸಿದರು.

 

ಯೇಸು ಕ್ರಿಸ್ತನು ಈ ಭೂಮಿಯಲ್ಲಿ ಜೀವಿಸುತ್ತಿದ್ದ ದಿನಗಳಲ್ಲಿ ಅನೇಕ ಬಾರಿ, ಅನೇಕ ಸ್ಥಳಗಳಲ್ಲಿ ಪ್ರಾರ್ಥಿಸಿದರು. ಅವರ 3½ ವರ್ಷಗಳ ಸೇವೆಯಲ್ಲಿ ಅವರ ಯಶಸ್ಸಿನ ರಹಸ್ಯವೇ ಅವರ ಪ್ರಾರ್ಥನಾ ಜೀವನ. ಅವರು ತನ್ನೊಂದಿಗಿದ್ದ ಶಿಷ್ಯರಿಗೂ ಸಹ ಪ್ರಾರ್ಥಿಸಲು ಕಲಿಸಿದರು. ಯೇಸು ತಾನು ಹಿಡಿಯಲ್ಪಡುವುದಕ್ಕಿಂತ ಮುಂಚೆ ಗೆತ್ಸೆಮನೆ ಎಂಬ ಸ್ಥಳದಲ್ಲಿ ಕಣ್ಣೀರಿನೊಂದಿಗೆ ಪ್ರಾರ್ಥಿಸಿದರು. ಶಿಷ್ಯರೊಂದಿಗೆ, ಅನೇಕ ಜನರೊಂದಿಗೆ ಇದ್ದರೂ ತಂದೆಯೊಂದಿಗೆ ತನಗಿದ್ದ ಸಂಬಂಧವನ್ನು ನವೀಕರಿಸಲು ಪ್ರತ್ಯೇಕವಾಗಿ ಹೋಗಿ ಪ್ರಾರ್ಥಿಸಿದರು.

 

ಇದನ್ನು ಓದುತ್ತಿರುವ ಪ್ರಿಯರೇ! ಯೇಸು ಕ್ರಿಸ್ತನು ನಮ್ಮ ಪ್ರಾರ್ಥನಾ ಜೀವನಕ್ಕೆ ಅತಿ ಶ್ರೇಷ್ಠವಾದ ಮಾದರಿಯಾಗಿದ್ದಾರೆ! ಅವರು ಪ್ರಾರ್ಥಿಸುತ್ತಲೇ ತಮ್ಮ ಸೇವೆಯ ಹಾದಿಯಲ್ಲಿ ಯಶಸ್ವಿಯನ್ನು ಕಂಡರು. ಪ್ರಾರ್ಥನೆ ಎಂಬುದು ದೇವರೊಂದಿಗೆ ಮಾತನಾಡುವುದು, ದೇವರೊಂದಿಗಿನ ನಮ್ಮ ಸಂಬಂಧವನ್ನು ನವೀಕರಿಸುವುದು, ಮತ್ತು ಪ್ರಾರ್ಥನೆಯು ಕ್ರೈಸ್ತರಾಗಿರುವ ನಮಗೆ ಉಸಿರಾಟವಾಗಿದೆ. ಪ್ರಾರ್ಥನೆಯು ನಿಮಗೆ ಅಭ್ಯಾಸವಾಗಿ ಮಾರ್ಪಡುವಾಗ ಅದ್ಭುತಗಳು ನಿಮ್ಮ ಜೀವನದ ಶೈಲಿಯಾಗಿ ಮಾರ್ಪಡುತ್ತದೆ. ಅದೇ ಪ್ರಾರ್ಥನೆಯನ್ನು ಕರ್ತವ್ಯಕ್ಕಾಗಿ ಮಾತ್ರ ಮಾಡುವಾಗ ನಿಮ್ಮ ಜೀವನದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ನಿಮ್ಮ ಪ್ರಾರ್ಥನೆಗಳು ಕ್ರಿಸ್ತನೊಂದಿಗಿನ ನಿಮ್ಮ ಸಂಬಂಧವನ್ನು ನವೀಕರಿಸಲಿ ಮತ್ತು ಹೆಚ್ಚಿಸಲಿ.

- Mrs. ಶಕ್ತಿ ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಸೇವಕರಿಗಾಗಿ ಹೊರಬರುವ "ಕತ್ತೆಗಳ ಮಾರ್ಗದರ್ಶಿ" ಎಂಬ ಪತ್ರಿಕೆಯನ್ನು ಕಳುಹಿಸಲು Postal permit ಸಿಗಲು ಮತ್ತು ಅದನ್ನು ಪಡೆಯಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al