By Village Missionary Movement
Monday, 23-May-2022ಧೈನಂದಿನ ಧ್ಯಾನ(Kannada) – 21.05.2022
ಜೀವನಶೈಲಿ
"ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ." - 1 ಯೋಹಾನ 2:15
ಒಂದು ವ್ಯಕ್ತಿಯ ನಡೆ, ನುಡಿ ಉಡುಗೆ, ಹವ್ಯಾಸಗಳು, ಪದ್ಧತಿಗಳು ಮತ್ತು ನಾಗರೀಕತೆ ಇಂಥವುಗಳನ್ನೇ Lifestyle ಎಂದು ಕರೆಯುತ್ತೇವೆ. ಸಂವಹನ, ತಾಂತ್ರಿಕ ಪ್ರಗತಿ, ಕಂಪ್ಯೂಟರೀಕರಣ ಇತ್ಯಾದಿಗಳು ಜಗತ್ತನ್ನು ಅಂಗೈಯಲ್ಲಿ ಕುಗ್ಗಿಸಿವೆ. ಇತರರು ತಮ್ಮನ್ನು ಹಿಂತಿರುಗಿ ನೋಡಬೇಕೆಂದು ನಿರೀಕ್ಷಿಸುವ ಹದಿಹರೆಯದ ಬಯಕೆಗಳು ಅವರ ಜೀವನವನ್ನು ತಿರುಗಿಸುತ್ತಿದೆ. ಹದಿಹರೆಯದವರ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುವ ಕೆಲವು ವಿಷಯಗಳನ್ನು ನಾವು ನೋಡೋಣವಾ?
ಸಂವಹನ: ಸೆಲ್ ಫೋನ್ ಮತ್ತು email-lD ಇಲ್ಲದೆ ಹೋದರೆ ಯಾವ ಗೌರವವೂ ಇಲ್ಲ ಎಂದು ಅನೇಕ ಹದಿಹರೆಯದವರು ಭಾವಿಸುತ್ತಾರೆ. ಕೆಲವೇ ಕೆಲವು ಜನರು ಮಾತ್ರ ಅವಸರಕ್ಕಾಗಿ ಮತ್ತು ಅಗತ್ಯಕ್ಕಾಗಿ ಫೋನ್ ಬಳಸುತ್ತಾರೆ. ಆದರೆ ಹೆಚ್ಚಿನವರು ಚಾಟಿಂಗ್ ಮತ್ತು ಆಟವಾಡಲು ಬಳಸುತ್ತಾರೆ. "ಅತಿಯಾದ ಮಾತುಗಳಿಂದ ಪಾಪವಿಲ್ಲದೆ ಹೊಗುವುವುದಿಲ್ಲ" ಸ್ಟೈಲ್ ಮಾಡಲು ತೆಗೆದುಕೊಂಡ ಕಾಸ್ಟ್ಲಿ ಸೆಲ್ ಫೋನ್ ನಿಮ್ಮ ಪರಿಶುದ್ಧತೆಯನ್ನು ಹಾಳು ಮಾಡದಂತೆ ಎಚ್ಚರವಹಿಸಿರಿ.
ಟೈಮ್ ಪಾಸ್: ಟಿವಿ, ಇಂಟರ್‌ನೆಟ್, ಆಧುನಿಕ ಸಂಗೀತ, ರಾತ್ರಿ ಭೋಜನ ಇವೆಲ್ಲವೂ ಮನರಂಜನೆಯ ಹೆಸರಿನಲ್ಲಿ ಸಮಯವನ್ನು ಹಾಳುಮಾಡುತ್ತಿದೆ. ಇವೆರಡೂ ಇಂಟರ್‌ನೆಟ್ ಗಳು ಶಿಕ್ಷಣಕ್ಕೂ ಜ್ಞಾನಕ್ಕೂ ಉಪಯುಕ್ತವಾಗಿದ್ದರೂ, ಅವು ಸಾಮಾನ್ಯವಾಗಿ ಅಶ್ಲೀಲ ವೆಬ್‌ಸೈಟ್‌ಗಳಾಗಿ ಬದಲಾಗುತ್ತವೆ. ಹದಿಹರೆಯದ ಹೆಣ್ಣುಮಕ್ಕಳೇ ಎಚ್ಚರದಿಂದಿರಿ.
ನಾಗರೀಕತೆ: ವಸ್ತ್ರ ಒಂದು ವ್ಯಕ್ತಿಯ ಮನೋಭಾವವನ್ನು ವ್ಯಕ್ತಪಡಿಸುವ ಸಾಧನವಾಗಿದೆ ಎಂದು ಯಾರೋ ಒಂದು ವ್ಯಕ್ತಿ ಹೇಳಿದರು. ಹೊಸದಾಗಿ ನಮ್ಮನ್ನು ನೋಡುವ ಒಂದು ವ್ಯಕ್ತಿ ನಮ್ಮ ವೇಷಭೂಷಣದಿಂದಲೇ ನಮ್ಮನ್ನು ನಿರ್ಣಯಿಸುತ್ತಾನೆ. ಮಹಿಳೆಯರ ಉಡುಪು ಪುರುಷರಿಗೆ ಅಪಾಯವನ್ನುಂಟು ಮಾಡಬಾರದು. ಹೌದು ನಾವು ಎಲ್ಲವನ್ನೂ ಆನಂದಿಸುವ ಶಕ್ತಿ ಹೊಂದಿದ್ದೇವೆ ಆದರೆ ಎಲ್ಲವೂ ಯೋಗ್ಯವಾಗಿಲ್ಲ. ಎಲ್ಲವೂ ಭಕ್ತಿಯನ್ನು ಉಂಟುಮಾಡುವುದಿಲ್ಲ (1 ಕೊರಿಂಥ 10:24)
ಯೌವನಸ್ಥರೇ! ಕಾಲಕ್ಕೆ ತಕ್ಕಂತೆ ಜೀವನಶೈಲಿ ಬದಲಾಗುವಾಗ ಈ ಕೆಳಗಿನ ಮೂರು ಪ್ರಶ್ನೆಗಳನ್ನು ಕೇಳಿ. 1. ಇದು ದೇವರನ್ನು ಮೆಚ್ಚಿಸುತ್ತದೆಯೇ? 2. ಇದು ನನಗೆ ಅಥವಾ ಇತರರಿಗೆ ನೋವುಂಟು ಮಾಡುತ್ತದೆಯೇ? 3. ಇದು ಸಮಯವನ್ನು ಅಥವಾ ಹಣವನ್ನು ವ್ಯರ್ಥ ಮಾಡುತ್ತದೆಯೇ?
ಕಾಲ ಬದಲಾಗಬಹುದು, ಜೀವನಶೈಲಿ ಬದಲಾಗಬಹುದು, ಆದರೆ ನಾವು ಆರಾಧಿಜಿಸುವ ದೇವರು ಒಂದೇ. ಅವರು ಅಂದು ಜನರಿಂದ ಎಷ್ಟು ಪರಿಶುದ್ಧತೆಯನ್ನು ನಿರೀಕ್ಷಿಸಿದರೋ ಅದೇ ಪ್ರಮಾಣದ ಪರಿಶುದ್ಧತೆಯನ್ನು ಇಂದು ನಮ್ಮಿಂದಲೂ ನಿರೀಕ್ಷಿಸುತ್ತಿದ್ದಾರೆ. ಆದ್ದರಿಂದಲೇ, ನಾಗರೀಕತೆಯ ಬದಲಾವಣೆಯಿಂದ ಕಲ್ಮಶವಿಲ್ಲದ ಪರಿಶುದ್ಧವಾದ ಜೀವನವನ್ನು ಜೀವಿಸಿ ದೇವರನ್ನು ಮಹಿಮೆಪಡಿಸಿರಿ.
- P.ಕೆನಡಿ
ಪ್ರಾರ್ಥನಾ ಅಂಶ:
ತಮಿಳು, ಇಂಗ್ಲಿಷ್, ಹಿಂದಿ, ತೆಲುಗು, ಕನ್ನಡ, ಒರಿಯಾ, ಮಲಯಾಳಂ ಮತ್ತು ಪಂಜಾಬಿ ಭಾಷೆಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹೊರಬರುವ ದೈನಂದಿನ ಧ್ಯಾನ ಸಂದೇಶಗಳ ಮೂಲಕ ಎಲ್ಲಾ ಜನರು ಕ್ರಿಸ್ತನಲ್ಲಿ ಬೆಳೆಯಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482