By Village Missionary Movement
Sunday, 22-May-2022ಧೈನಂದಿನ ಧ್ಯಾನ(Kannada) – 22.05.2022
ಹೊಸ ಜೀವನ
"ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನಸೃಷ್ಟಿಯಾದನು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು" - 2 ಕೊರಿಂಥ. 5:17
ಇದು ಸ್ಕಾಟ್ಲೆಂಡ್‌ನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಇದು ನೋಡಲು ಕೂಡ ತುಂಬಾ ಸುಂದರವಾಗಿ super-ಆಗಿ ಇತ್ತು. ಆದರೆ ಕೆಲವರು ಮಾತ್ರವೇ ಈ ಆಲಯಕ್ಕೆ ಬರುತ್ತಾರೆ. ಅವರು ಬೆಂಚ್ ಮತ್ತು ನೆಲದ ಧೂಳನ್ನು ಒರೆಸಿ ಶುದ್ಧ ಮಾಡಿ prayer ನಡೆಸಿ ಬಿಟ್ಟು ಹೋಗುತ್ತಾರೆ. ಆದರೆ ಎತ್ತರದಲ್ಲಿ ನೇತಾಕ್ಕಿದ್ದ ಫೋಟೋ ಅನ್ನು ಯಾರೂ ಸ್ವಚ್ಛಗೊಳಿಸುತ್ತಿರಲಿಲ್ಲ. ಅದು ಏನು ಫೋಟೋ ಎಂದು ಕೂಡ ಕಾಣದ ಮಟ್ಟಿಗೆ ಧೂಳಿನಿಂದ ಆವೃತವಾಗಿದ್ದದರಿಂದ ಆ ಫೋಟೋವನ್ನು ಎತ್ತಿ ಸ್ವಚ್ಛಗೊಳಿಸುವುದು ಬಹಳ ಕಷ್ಟದ ಕೆಲಸ ಎಂದು ನೆನೆಸಿ ಯಾರೂ ಅದನ್ನು ಮುಟ್ಟುತ್ತಿರಲಿಲ್ಲ. ಆ ಸಮಯದಲ್ಲಿ ಒಂದು Team ಆಲಯಗಳಿಗೆ ಹೋಗಿ ಒಂದು ವಾರ ಉಳಿದು ಇಡೀ ಆಲಯವನ್ನು ಸ್ವಚ್ಛಗೊಳಿಸಲು ನಿರ್ಧರಿಸಿದರು. ಮೇಲಿನ ಫೋಟೋ ನೋಡಿ ಈ ಫೋಟೋವನ್ನು ತೆಗೆದು ಹಾಕೋಣ ಎಂದು ಹೇಳಿದಾಗ ಮತ್ತೊಬ್ಬರು ಬೇಡ ಮೊದಲು ಅದು ಏನು ಫೋಟೋ ಎಂದು ನೋಡೋಣ ಎಂದು ಹೇಳಿ ಧೂಳನ್ನು ನೀರಿನಿಂದ ತೊಳೆದು ಬಟ್ಟೆಯಿಂದ ಒರೆಸಿದ ಮೇಲೆ ನೋಡಿದರೆ ಒಂದು ಸುಂದರವಾದ ದೃಶ್ಯ ಕಾಣಿಸಿತು. ಏನೆಂದು ನೋಡಿದಾಗ, ಯೇಸಪ್ಪ ತನ್ನ ಶಿಷ್ಯರಿಗೆ ಕಡೆಯದಾಗಿ ರೊಟ್ಟಿ ಮತ್ತು ದ್ರಾಕ್ಷಾರಸ ನೀಡುತ್ತಿರುವ ಫೋಟೋ. ಈ ಚಿತ್ರವನ್ನು ಯಾರು ಚಿತ್ರಿಸಿದ್ದು ಎಂದು ನೋಡಿದಾಗ ಜಗತ್ಪ್ರಸಿದ್ಧ ಮೈಕಲ್ ಏಂಜೆಲೋ ರವರು ಎಂದು ತಿಳಿದು ಎಲ್ಲರೂ ಬೆರಗಾದರು. ಇದು ಎಷ್ಟು ದುಬಾರಿಯಾಗಿದೆ. ಇದು 50 ಕೋಟಿಗೂ ಹೋಗುತ್ತದೆ. ಇದು ತುಂಬಾ ಪ್ರಾಮುಖ್ಯವಾದದ್ದೆಂದು ಅದನ್ನು ಆಲಯದಲ್ಲಿ ನೇತು ಹಾಕಿದರು.
ಪ್ರೀತಿಯ ತಮ್ಮ, ತಂಗಿ ನಮ್ಮೊಳಗೂ ಅಮೂಲ್ಯವಾದ ನಶಿಸಿಹೋಗದ ಒಂದು ಆತ್ಮವಿದೆ. ಸುಳ್ಳು ಹೇಳುವುದು, ಕದಿಯುವುದು, ಕೆಟ್ಟಮಾತುಗಳಾಡುವುದು, ಅವಿಧೇಯತೆ ... ಇಂತಹ ಪಾಪದ ಧೂಳುಗಳು ತುಂಬಿ ಸುಂದರವಾದ ಆತ್ಮವನ್ನು ಮರೆಮಾಡುತ್ತಿದೆ. ಅದಕ್ಕಾಗಿಯೇ ಯೇಸು ಕ್ರಿಸ್ತನು ಈ ಭೂಮಿಗೆ ಬಂದು ತನ್ನ ರಕ್ತವನ್ನು ಸುರಿಸಿ ಮರಣಹೊಂದಿದರು. ಅವರ ರಕ್ತವೇ ಪಾಪದ ಕೊಳೆಯನ್ನು ತೊಳೆದು ಆತ್ಮವನ್ನು ಶುದ್ಧೀಕರಿಸುತ್ತದೆ ಮತ್ತು ನಮ್ಮನ್ನು ಹೊಸ ಸೃಷ್ಟಿಯಾಗಿ ಪರಿವರ್ತಿಸುತ್ತದೆ. ಅಷ್ಟೇ ಅಲ್ಲ... ಯೇಸುವಿನ ರಕ್ತದಿಂದ ನಾವು ತೊಳೆಯಲ್ಪಟ್ಟಾಗ ನಾವು ಅಮೂಲ್ಯರಾಗಿ ಮಾರ್ಪಡುತ್ತೇವೆ. ಏನು ಪುಟಾಣಿಗಳೇ! ಯೇಸಪ್ಪನಲ್ಲಿ ಹೊಸ ಸೃಷ್ಟಿಯಾಗುವ ಆಸೆ ತಾನೇ! Very Good!
- Sis. ದೆಬೋರಾಳ್.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482