Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.05.2022
Share:

By Village Missionary Movement

Saturday, 21-May-2022

ಧೈನಂದಿನ ಧ್ಯಾನ(Kannada) – 21.05.2022

 

ಒಳ್ಳೆಯತನ

 

“ಸಮಾಧಾನ ಪಡಿಸುವವರು ಧನ್ಯರು; ಅವರು ದೇವರ ಮಕ್ಕಳು ಅನ್ನಿಸಿಕೊಳ್ಳುವರು" - ಮತ್ತಾಯ 5:9

 

ಒಂದು ಕ್ರೈಸ್ತ ಕುಟುಂಬದಲ್ಲಿ ಭಾವ ಬಾಮೈದನಿಗೆ ಮನೆ ನಿರ್ಮಿಸುವ ಬಗ್ಗೆ ಸಣ್ಣ ಭಿನ್ನಾಭಿಪ್ರಾಯ ಏರ್ಪಟ್ಟಿತು. ಇಬ್ಬರೂ ಮಾಮೂಲಿಯಾಗಿ ಮಾತನಾಡುವುದನ್ನು ಬಿಟ್ಟುಬಿಟ್ಟರು ಅವರುಗಳ ಮನೆಗೆ ಹೋಗುವುದನ್ನೂ ನಿಲ್ಲಿಸಿಬಿಟ್ಟರು. ಆಲಯದಲ್ಲಾಗಲಿ, ಹೊರಗಾಗಲಿ ಎಲ್ಲಿ ಭೇಟಿಯಾದರೂ ಒಬ್ಬರನ್ನೊಬ್ಬರು ನೋಡದಂತೆ ವರ್ತಿಸುತ್ತಿದ್ದರು. ಮನೆ ಕೆಲಸ ನಡೆಯುತ್ತಿತ್ತು. ಈ ಸಂದರ್ಭದಲ್ಲಿ, ಫ್ಲಂಬಿಂಗ್ ಕೆಲಸ ಪ್ರಾರಂಭವಾಯಿತು. ಯೇಸುವನ್ನು ತಿಳಿಯದ ವ್ಯಕ್ತಿಯನ್ನು ಕೆಲಸ ಮಾಡಲು ಕರೆಯಲಾಗಿತ್ತು. ಇವರಿಗೆ ಇಬ್ಬರೂ ಗೊತ್ತಿತ್ತು. ಇವರ ಸಮಸ್ಯೆಯನ್ನೂ ತಿಳಿದಿದ್ದರು ಮತ್ತು ಅದನ್ನು ಸರಿಪಡಿಸಲು ಬಯಸಿದ್ದರು. ಅವರು ಅದಕ್ಕಾಗಿ ಏನು ಮಾಡಿದರೆಂದರೆ, ಅವರು ಆತನ ಭಾವನನ್ನು ಭೇಟಿಯಾದಾಗ, "ತಪ್ಪು ನಿಮ್ಮ ಬಾಮೈದನದಲ್ಲ, ನೀವು ಹಾಗೆ ಮಾತನಾಡದೇ ಇರಬೇಕಿತ್ತು" ಬಾಮೈದನನ್ನು ನೋಡುವಾಗ "ತಪ್ಪು ನಿಮ್ಮ ಭಾವನ ಮೇಲಲ್ಲ, ನೀವು ಕೋಪದಲ್ಲಿ ಹಾಗೆ ಮಾಡಿರಬಾರದಾಗಿತ್ತು. ಈ ರೀತಿ ಹೇಳುತ್ತಾ ಬಂದರು. ಹೀಗೆ ಅವರು ಒಂದು ತಿಂಗಳ ಕಾಲ ಮಾಡಿದರು. ಕೊನೆಗೆ ಇಬ್ಬರ ನಡುವೆ ಸಮಾಧಾನ ಉಂಟಾಯಿತು. ಮತ್ತೆ ಇಬ್ಬರೂ ರಾಜಿಯಾದರು. ಯೇಸುವನ್ನು ತಿಳಿಯದ ಈ ಮನುಷ್ಯನ ಪ್ರಯತ್ನ ಮತ್ತು ದಯೆ ಖಂಡಿತವಾಗಿಯೂ ಆಶ್ಚರ್ಯಕರವಾಗಿದೆ.

 

ಸತ್ಯವೇದದಲ್ಲಿ ಕರ್ತನಾದ ಯೇಸು ಕ್ರಿಸ್ತನು ಈ ರೀತಿ ಹೇಳುತ್ತಾರೆ, "ಸಮಾಧಾನ ಪಡಿಸುವವರು ಧನ್ಯರು; ಅವರು ದೇವರ ಮಕ್ಕಳು ಅನ್ನಿಸಿಕೊಳ್ಳುವರು." ಹಳೆಯ ಒಡಂಬಡಿಕೆಯಲ್ಲಿ ನಾವು ಏಸಾವ ಮತ್ತು ಯಾಕೋಬನ ಬಗ್ಗೆ ಓದುತ್ತೇವೆ. ಮೊದಮೊದಲು ಯಾಕೋಬನು ಒಬ್ಬ ಹೋರಾಟಗಾರನಾಗಿ ಮತ್ತು ಜಗಳಮಾಡುವವನಾಗಿ ಮೋಸಗಾರನಾಗಿ ಕಂಡರೂ, ನಂತರದ ದಿನಗಳಲ್ಲಿ ಅವನು ತನ್ನ ಸಹೋದರನೊಂದಿಗೆ ಸಮಾಧಾನವಾಗಲು ಬಯಸುವವನಾಗಿಯೂ ತನ್ನ ಸಹೋದರನೊಂದಿಗೆ ಐಕ್ಯವಾಗಲು ಬಯಸುವ ವ್ಯಕ್ತಿಯಾಗಿ ಕಂಡುಬಂದನು. ಮೊದಲಿಗೆ ಅವನು ಏಸಾವನನ್ನು ವಂಚಿಸಿದನು ಮತ್ತು ಅವನ ಆಶೀರ್ವಾದವನ್ನು ಕಸಿದುಕೊಂಡನು, ದೇವರು ಯಾಕೋಬನನ್ನು ಆಶೀರ್ವದಿಸಿದಾಗ, ಅವನು ಅದನ್ನು ಏಸಾವನೊಡನೆ ಹಂಚಿಕೊಳ್ಳಲು ಬಯಸಿದನು. ಇದು ದೇವರು ಬಯಸುವ ಸಮಾಧಾನ.

 

ಹೌದು ಪ್ರಿಯರೇ, ನಾವು ಯೋಚಿಸಬೇಕಾದದ್ದು ಇಂದು ನಮ್ಮ ಪರಿಸ್ಥಿತಿ ಏನು? ನಾವು ದ್ವೇಷದಿಂದ ದೇವರಿಗೆ ಅರ್ಪಿಸುವ ಕಾಣಿಕೆಗಳನ್ನು ಸಹ ದೇವರು ಸ್ವೀಕರಿಸುವುದಿಲ್ಲ ಎಂದು ಸತ್ಯವೇದ ಹೇಳುತ್ತಿದೆ. ಆದ್ದರಿಂದ ನಾವು ಸಮಾಧಾವನ್ನು ಪ್ರೀತಿಸೋಣ ಮತ್ತು ಅದನ್ನು ಅಳವಡಿಸಿಕೊಳ್ಳೋಣ! ನಾವು ಇತರರನ್ನು ಸಮಾಧಾನದೊಳಗೆ ಮುನ್ನಡೆಸೋಣ! ದೇವರ ಮಕ್ಕಳಾಗೋಣ.

- Bro. ಥಾಮಸ್

 

ಪ್ರಾರ್ಥನಾ ಅಂಶ:

ಮೋಕ್ಷ ಪ್ರಯಾಣ ಎಂಬ ದೈನಂದಿನ ಪತ್ರಿಕೆಯನ್ನು ಓದುವವರು ಸತ್ಯದಲ್ಲಿ ಬೆಳೆದು ಸಾಕ್ಷಿಯಾಗಿ ಜೀವಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al