Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.05.2022
Share:

By Village Missionary Movement

Friday, 20-May-2022

ಧೈನಂದಿನ ಧ್ಯಾನ(Kannada) – 20.05.2022

 

ಮನಮರಗುವಿಕೆಯ ಹನಿ

 

"ಆತನು ಹೊರಗೆ ಬಂದು ಬಹು ಜನರ ಗುಂಪನ್ನು ಕಂಡು ಕನಿಕರಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು." - ಮತ್ತಾಯ 14:14

 

ದೇವರ ಪ್ರೀತಿಯಿಂದ ತುಂಬಿಸಲ್ಪಟ್ಟ ಸಹೋದರಿಯೊಬ್ಬರು, ತನ್ನನ್ನು ಮುಟ್ಟಿದ ಆ ದೇವರ ಪ್ರೀತಿಯನ್ನು ತಾನು ಸಹ ಇತರರಿಗೆ ತೋರಿಸಬೇಕೆಂದು ಪ್ರಾರ್ಥಿಸುತ್ತಿದ್ದಳು. ಅವಳು ವಾಸವಿದ್ದ ಊರಿನಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೊಬ್ಬಳು ಮನೆಯವರು ಹಾಗೂ ನೆರೆಹೊರೆಯವರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ನಗರದ ಹೊರವಲಯದ ಪುಟ್ಟ ಮನೆಯೊಂದರಲ್ಲಿ ಸಂಬಂಧಿಕರಿಂದ ತಳ್ಳಲ್ಪಟ್ಟು ಏಕಾಂಗಿಯಾಗಿ ತನ್ನ ದಿನಗಳನ್ನು ಕಳೆಯುತ್ತಿದ್ದಳು. ಇದನ್ನು ಕೇಳಿದ ಸಹೋದರಿ ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಅಸ್ವಸ್ಥ ಮಹಿಳೆಗೆ ಸಹಾಯ ಮಾಡಲು ಹೋದರು. ಅವಳು ಪ್ರತಿದಿನ ಬೇಗನೆ ಎದ್ದು, ತನ್ನ ಕುಟುಂಬಕ್ಕೆ ತನ್ನ ಕೆಲಸಗಳನ್ನು ಮುಗಿಸಿ, ಆ ವೃದ್ಧೆಗೆ ಕೆಲಸ ಮಾಡಲು ಬೇಗನೆ ಅಲ್ಲಿಗೆ ಹೋಗುತ್ತಿದ್ದಳು. ಕೊಳೆತ ದೇಹದಲ್ಲಿ ದುರ್ವಾಸನೆ ಬರುತ್ತಿದ್ದರೂ, ಗಾಯಗಳನ್ನು ಸ್ವಚ್ಛಗೊಳಿಸಿ, ಗಾಯಗಳಿಗೆ ಬ್ಯಾಂಡೇಜ್ ಹಾಕಿ, ಅವರಿಗೆ ಬೇಕಾದ ಆಹಾರ ನೀಡಿ, ಆರೈಕೆ ಮಾಡಿದರೂ ಇವರಿಗೆ ಸಿಕ್ಕಿದ್ದು ಮೆಚ್ಚುಗೆಯಲ್ಲ. ಆಗಾಗ ನೋವಿನ ಉತ್ತುಂಗದಲ್ಲಿ ಪ್ರಜ್ಞೆ ಕಳೆದುಕೊಳ್ಳುತ್ತಿದ್ದ ಆ ಹೆಣ್ಣಿನ ಗೊಣಗಾಟ, ನಿಟ್ಟುಸಿರು ಮಾತ್ರವೇ ಲಭಿಸಿತು. ಆದರೂ ಮನನೊಂದು ಸತತವಾಗಿ ಸೇವೆಯನ್ನು ಮುಂದುವರೆಸಿದಳು.

 

"ಯೇಸು ದೊಡ್ಡ ಜನಸಮೂಹವನ್ನು ಕಂಡಾಗ, ಅವರ ಮೇಲೆ ಮನಮರುಗಿ, ಎಲ್ಲಾ ಕಾಯಿಲೆಗಳನ್ನು ವಾಸಿಮಾಡಿ, ಅವರನ್ನು ಸ್ವಸ್ಥಮಾಡಿದರು" ನಾಯಿನೆಂಬ ಊರಿನಲ್ಲಿ ವಿಧವೆಯ ಒಬ್ಬನೇ ಮಗನು ಸತ್ತುಹೋದ ಸಮಯದಲ್ಲಿ, ಅವಳು ಜೀವನದ ನಂಬಿಕೆಯನ್ನು ಕಳೆದುಕೊಂಡು ಹತಾಶೆಯಿಂದ ಇದ್ದಾಗ, ಯೇಸು ಅವಳ ಮೇಲೆ ಮನಮರುಗಿ ಅಳಬೇಡ ಎಂದು ಹೇಳಿ ಚಟ್ಟವನ್ನು ಮುಟ್ಟಿ ಸತ್ತವನನ್ನು ಜೀವಂತವಾಗಿ ಎಬ್ಬಿಸಿದರು. ಹೆನ್ರಿ ನ್ಯೂಮನ್ ಎಂಬ ದೇವತಾಶಾಸ್ತ್ರಜ್ಞ "ಮನಮರುಗುವುದು ತುಂಬಾ ಕಠಿಣವಾದ ವಿಷಯ. ಏಕೆಂದರೆ ಅದು ಇತರರ ಭಾವನೆಗಳ ಮೂಲಕ ಹೋಗುವುದು. ಅವರು ಬಲಹೀನರಾಗಿರುವಾಗ ಅವರ ಕಷ್ಟವನ್ನು ಅರಿತು ಅವರ ಒಂಟಿತನವನ್ನು ಗ್ರಹಿಸುವ ಸಮಯಗಳಲ್ಲಿ, ಹತಾಶೆಯ ಸಂದರ್ಭದಲ್ಲಿ ನಾವು ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕಾರ್ಯನಿರ್ವಹಿಸಬೇಕು" ಎಂದು ಹೇಳುತ್ತಿದ್ದಾರೆ.

 

ಗಾಯಗೊಂಡ ಹಕ್ಕಿ ಅಥವಾ ಬಿದ್ದು ಹುಡುಗ ಗಾಯಗೊಂಡಿರುವುದನ್ನು ನೋಡುವುದು ದುಃಖವಲ್ಲ; ಅದೊಂದು ಕರುಣಾಜನಕ ಭಾವ. ಮನಮರುಗುವುದು ಎಂಬುದು ಕ್ರಿಯೆಯಲ್ಲಿ ಸ್ವತಃ ಪ್ರಕಟಗೊಳ್ಳಬೇಕು. ಆದುದರಿಂದಲೇ ಯೇಸು ಹೇರಳವಾದ ಜನರ ಗುಂಪನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳಂತಿದ್ದಾರೆ ಎಂದು ಮನಮರುಗಿದರು. ರಕ್ಷಕನಿಲ್ಲದ ಜನರನ್ನು ನೋಡಿದಾಗ ನಮ್ಮ ಹೃದಯವು ಮುರಿಯುತ್ತದೆಯೇ? ಖ್ಯಾತ ಕವಿ ಬೈರಣ್ಣ ಪ್ರಭು ಅವರು ಹೇಳಿದರು, "ಕಣ್ಣೀರಿನಲ್ಲಿ ದುಃಖದ ಹನಿ ವ್ಯಕ್ತವಾಗುತ್ತದೆ." ಗಾಯಗೊಂಡು ನೋವಿನಲ್ಲಿರುವ ಜನರನ್ನು ನೋಡಿದಾಗ ನಾವು ಏನನ್ನು ವ್ಯಕ್ತಪಡಿಸುತ್ತೇವೆ? ದೇವರ ಪ್ರೀತಿಯನ್ನು, ಕನಿಕರವನ್ನು ಅನುಭವಿಸಿದ ನಾವು ಇತರರಿಗೂ ಅದನ್ನು ವ್ಯಕ್ತಪಡಿಸುವವರಾಗಿರಬೇಕು.

- Mrs. ವಸಂತಿ ರಾಜಮೋಹನ್

 

ಪ್ರಾರ್ಥನಾ ಅಂಶ:

ಪ್ರತಿ ಭಾನುವಾರ ಸಂಜೆ 6 ರಿಂದ 6:30 ರವರೆಗೆ ನಂಬಿಕೈ ಟಿವಿಯಲ್ಲಿ ಪ್ರಸಾರವಾಗುವ "ಕಣ್ಮಣಿಯೇ ಕೇಳ್" ಎಂಬ ಕಾರ್ಯಕ್ರಮದ ಮೂಲಕ ಅನೇಕ ಯೌವನಸ್ಥರು ಮುಟ್ಟಲ್ಪಡುವಂತೆ ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al