By Village Missionary Movement
Thursday, 19-May-2022ಧೈನಂದಿನ ಧ್ಯಾನ(Kannada) – 19.05.2022
ನಂಬಿಕೆ
"ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ;..." - ಇಬ್ರಿಯ 11:6
ಮೀನಾ ಅವರ ಕುಟುಂಬ ಕರಾವಳಿಯಲ್ಲಿ ವಾಸಿಸುತ್ತಿದ್ದು, ಮೀನುಗಾರಿಕೆಯನ್ನೇ ನಂಬಿಕೊಂಡಿತ್ತು. ಅಲ್ಲಿ ವಾರಕ್ಕೊಮ್ಮೆ Sunday school ನಡೆಸುತ್ತಿದ್ದ ಅಕ್ಕ ಹೇಳುತ್ತಿದ್ದ ವಾಕ್ಯಗಳನ್ನು ಕೇಳಿ ಮೀನ ನಂಬಿಕೆಯಿಂದ ಬೆಳೆದಳು. ಒಂದು ದಿನ ಆಕೆಯ ತಂದೆ ಕೆಲವರೊಂದಿಗೆ ಮೀನು ಹಿಡಿಯಲು ಹೋದವರು ಹಿಂತಿರುಗಿ ಬರಲೇ ಇಲ್ಲ. ಒಂದು ದಿನ...ಎರಡು ದಿನಗಳ ನಂತರ ಜನರೆಲ್ಲಾ ಬಂದು ಅವರು ಸತ್ತುಹೋಗಿರಬಹುದು, ಇನ್ನು ಬರಲು ಸಾಧ್ಯವೇ ಇಲ್ಲ ಎಂದು ನೆನೆಸಿ ದುಃಖ ವಿಚಾರಿಸಲು ಬಂದರು. ಆದರೆ ಈಕೆ ದೇವರಲ್ಲಿ ನಂಬಿ ಇಟ್ಟು ನನ್ನ ತಂದೆ ಖಂಡಿತವಾಗಿಯೂ ಬರುತ್ತಾರೆ ಎಂದು ನಂಬಿದ್ದಳು. 5 ನೇ ದಿನ ಒಂದು ದೋಣಿ ಬಂದಿತು. ಅದರಲ್ಲಿ ಮೀನಾಳ ಅಪ್ಪ ಬಂದಿದ್ದರು. ಕರ್ತನು ಮೀನಾಳ ನಂಬಿಕೆಯನ್ನು ಬಲಪಡಿಸಿದರು.
ಸತ್ಯವೇದದಲ್ಲಿ ರಾಹಾಬಳು ಒಂದು ವೇಶ್ಯೆ. ಯೆಹೋಶುವನು ಯೆರಿಕೋವನ್ನು ನೋಡಿಕೊಂಡು ಬರಲು ಇಬ್ಬರು ಗೂಢಚಾರರನ್ನು ಕಳುಹಿಸಿದರು. ರಾಹಾಬಳು ಅವರಿಗೆ ಸಹಾಯ ಮಾಡಿದಳು. ರಾಜನು ಆಳುಗಳನ್ನು ಕಳುಹಿಸಿ ಅವರನ್ನು ಕರೆತರಲು ಒಬ್ಬ ಮನುಷ್ಯನನ್ನು ಕಳುಹಿಸಿದನು. ಆದರೆ ರಾಹಾಬಳು ಅವರನ್ನು ಬಚ್ಚಿಟ್ಟು ಹಗ್ಗದ ಮೂಲಕ ಕಿಟಕಿಯಿಂದ ಇಳಿಸಿ, ಯೆರಿಕೋವನ್ನು ನಾಶಮಾಡುವಾಗ ತನ್ನನ್ನು ತನ್ನ ಕುಟುಂಬವನ್ನು ನಾಶಮಾಡದಂತೆ ಅವರನ್ನು ಬೇಡಿಕೊಂಡಳು. ಅದಕ್ಕೆ ಗುರುತಾಗಿ ತನ್ನ ಮನೆಯ ಕಿಟಕಿಯಲ್ಲಿ ಕೆಂಪು ದಾರವನ್ನು ಕಟ್ಟಿದಳು. ಅವಳ ನಂಬಿಕೆಯ ಪರಿಣಾಮವಾಗಿ ಯೆರಿಕೋ ಕೋಟೆಯನ್ನು ನಾಶಮಾಡುವಾಗ ರಾಹಾಬಳು ಮತ್ತು ಅವಳ ಕುಟುಂಬವು ನಾಶವಾಗದೆ ರಕ್ಷಿಸಲ್ಪಟ್ಟಿತು. ಕರ್ತನ ಮೇಲೆ ಇಟ್ಟಿದ್ದ ನಂಬಿಕೆಯಿಂದಾಗಿ ಆಕೆಯು ನಂಬಿಗಸ್ಥರ ಪಟ್ಟಿಯಲ್ಲಿ ಸ್ಥಾನ ಸಂಪಾದಿಸಿದಳು. ಅದು ಮಾತ್ರವಲ್ಲದೆ, ಲೋಕ ರಕ್ಷಕನಾದ ಯೇಸು ಕ್ರಿಸ್ತನು ರಾಹಾಬಳ ಸಂತತಿಯಲ್ಲಿ ಜನಿಸಿದರು.
ನನ್ನ ಪ್ರಿಯರೇ! ನಮ್ಮ ನಂಬಿಕೆಯ ಪ್ರಮಾಣ ಎಂತದ್ದಾಗಿದೆ? ನಾವು ದೇವರನ್ನು ನಂಬಿ ಕಾರ್ಯಗಳನ್ನು . ಹೊಂದಿಕೊಳ್ಳುತ್ತಿದ್ದೇವೆಯೇ?ಇಬ್ರಿಯರಿಗೆ 11 ನೇ ಅಧ್ಯಾಯದಲ್ಲಿ ನಾವು ಎಷ್ಟೊಂದು ನಂಬಿಕೆಯ ವೀರರನ್ನು ನೋಡುತ್ತೇವೆ. ಅವರೆಲ್ಲರೂ ನಂಬಿಕೆಯಿಂದ ಲೋಕವನ್ನೇ ಗೆದ್ದವರು. ಅದೇ ಸಮಯದಲ್ಲಿ ಆ ಅಧ್ಯಾಯದ ಹಿಂಬದಿಯಲ್ಲಿ ಅವಮಾನಕ್ಕೊಳಗಾದವರ ಬಗ್ಗೆ ಹೇಳಲಾಗಿದೆ. ಹೌದು, ನಾಶವಾಗುವ ಚಿನ್ನಕ್ಕಿಂತ ಹೆಚ್ಚು ಅಮೂಲ್ಯವಾದ ನಂಬಿಕೆಯು ಶೋಧಿಸಲ್ಪಟ್ಟು ಯೇಸು ಕ್ರಿಸ್ತನು ಬರುವಾಗ ನಿಮಗೆ ಹೊಗಳಿಕೆಯು ಘನತೆಯು ಮಹಿಮೆಯು ಉಂಟಾಗುತ್ತದೆ. ಆದ್ದರಿಂದ ನಂಬಿಕೆಯನ್ನು ಬಿಟ್ಟು ಬಿಡಬೇಡಿರಿ. ಅದ್ಭುತ ನಡೆಯುವುದು ಖಂಡಿತ.
- Mrs. ಎಸ್ತೇರ್ ಗಾಂಧಿ
ಪ್ರಾರ್ಥನಾ ಅಂಶ:
ಪ್ರತಿ ತಿಂಗಳು ಟಿವಿಯಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಅಗತ್ಯವಿರುವ ಪ್ರೋತ್ಸಾಹಧನ ರೂ. 9 ಲಕ್ಷ ಪೂರೈಸಲ್ಪಡುವಂತೆ. ಟಿವಿ ಕಾರ್ಯಕ್ರಮವನ್ನು ಬೆಂಬಲಿಸುವ ಪಾಲುದಾರರು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482