Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.05.2022
Share:

By Village Missionary Movement

Wednesday, 18-May-2022

ಧೈನಂದಿನ ಧ್ಯಾನ(Kannada) – 18.05.2022

 

ಮೃಗದ ಸ್ವಭಾವ

 

"...ಯುದ್ಧವು ಕರ್ತನದು..." - 1 ಸಮುವೇಲ 17:47

 

ಕ್ರೂರವಾಗಿ ಮೃಗಗಳಂತೆ ವರ್ತಿಸಿದವರ ಬಗ್ಗೆ ನಾವು ಪತ್ರಿಕೆಯಲ್ಲಿ ಓದಿರುತ್ತೇವೆ. ಇದರಂತೆ ಅದೆಷ್ಟೋ ಘಟನೆಗಳು ನಡೆದಿರುವ ನಮ್ಮ ದೇಶದಲ್ಲಿ ಯೌವನಸ್ಥ ಹೆಣ್ಣುಮಕ್ಕಳು, ಚಿಕ್ಕಮಕ್ಕಳು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದುಕೊಂಡರೆ ಎದೆಗುಂದುತ್ತದೆ! ಮನುಷ್ಯರೊಳಗೂ ಇಂಥಾ ಮೃಗವಿದೆಯೇ ಎಂಬ ಸಿಟ್ಟು ನಮ್ಮೊಳಗೇ ಚಿಗುರೊಡೆಯುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾಮಾಜಿಕ ಅಶಾಂತಿಗೆ ಕಾರಣವಾದ ಅವರು ಶಿಕ್ಷೆ ಹೊಂದಿದರೂ ಹೆಣ್ಣು ಮಕ್ಕಳನ್ನು ಕಳೆದುಕೊಂಡ ಆ ಕುಟುಂಬ ಹೇಗೆ ಆ ನೋವನ್ನು ಸಹಿಸಿಕೊಳ್ಳುತ್ತದೋ! ಬಹುಶಃ ಅವರು ಈ ಸಮುದಾಯದಲ್ಲಿ ಜೀವಂತ ಶವವಾಗಿ ಇರುತ್ತಾರೋ ಏನೋ! ತಡೆಯಲಾಗದ ದುಃಖ!

 

ಸತ್ಯವೇದದಲ್ಲಿ 1 ಸಮುವೇಲ 17 ನೇ ಅಧ್ಯಾಯದಲ್ಲಿ ದಾವೀದ ಮತ್ತು ಸೌಲನ ಸಂಭಾಷಣೆಯನ್ನು ಓದುತ್ತೇವೆ. ಫಿಲಿಷ್ಟಿಯನಾದ ಗೊಲ್ಯಾತನನ್ನು ನೀನು ಸೋಲಿಸಲು ಸಾಧ್ಯವಿಲ್ಲ, ಏಕೆಂದರೆ ನೀನು ಯೌವನಸ್ಥನು ಅವನೋ ತನ್ನ ಚಿಕ್ಕಂದಿನಿಂದ ಯುದ್ಧ ವೀರನಾಗಿದ್ದಾನೆ ಎಂದು ಇಸ್ರಾಯೇಲ್ಯರ ಅರಸನಾದ ಸೌಲನು ದಾವೀದನಿಗೆ ಆಲೋಚನೆ ಹೇಳಿ, ದಾವೀದನು ಯುದ್ಧ ಮಾಡಲು ಬಿಡದೆ ತಡೆಯುವುದನ್ನು ನಾವು ಕಾಣಬಹುದು (1 ಸಮುವೇಲ 17:32) ಅದಕ್ಕೆ ದಾವೀದನು ಸೌಲನನ್ನು ನೋಡಿ ಹೇಳಿದ ವಿಷಯ ಬಹಳ ಭಯಂಕರವಾಗಿತ್ತು. ಅದೇನೆಂದರೆ, ದಾವೀದನು ತನ್ನ ತಂದೆಯ ಕುರಿಗಳನ್ನು ಮೇಯಿಸುತ್ತಿದ್ದಾಗ ಒಮ್ಮೆ ಒಂದು ಸಿಂಹ ಇನ್ನೊಮ್ಮೆ ಒಂದು ಕರಡಿ ಬಂದು ಹಿಂಡಿನಲ್ಲಿದ್ದ ಒಂದು ಕುರಿಯನ್ನು ಹಿಡಿದಾಗ ಅವನು ಅದನ್ನು ಹಿಂಬಾಲಿಸಿಕೊಂಡು ಹೋಗಿ ಅದನ್ನು ಹೊಡೆದು ಅದರ ಬಾಯಿಂದ ತಪ್ಪಿಸಿದ್ದೇ.

 

ನನ್ನ ಪ್ರಿಯರೇ! ನಾವು ಕ್ರಿಯೆಯಲ್ಲಿ ದಾವೀದನಂತೆ ತೀವ್ರ ಆಸಕ್ತಿಯನ್ನು ತೋರೋಣವಾ? ದಾವೀದನು ತನ್ನ ಕುರಿಗಳನ್ನು ಕ್ರೂರವಾದ ಮೃಗಗಳಿಂದ ರಕ್ಷಿಸಿದಂತೆ ನಾವು ಹೆಣ್ಣು ಮಕ್ಕಳನ್ನು ಕ್ರೂರವಾದ ಮನುಷ್ಯ ಮೃಗಗಳಿಂದ ರಕ್ಷಿಸಬೇಕಲ್ಲವೇ? ಇದಕ್ಕಾಗಿ ನಾವು ಹಿಂಸಾಚಾರವನ್ನು ಪಾಲಿಸಬೇಕಾಗಿಲ್ಲ. ನಾವು ಪ್ರಾರ್ಥಿಸಿದರೆ, ನಮ್ಮ ದೇಶದ ಪರಿಸ್ಥಿತಿ ಬದಲಾಗುತ್ತದೆ. ಆತ್ಮಗಳು ಕ್ರಿಸ್ತನ ಕಡೆಗೆ ಮುನ್ನಡೆಸಲ್ಪಡುತ್ತಾರೆ. ನಾವು ನಮ್ಮನ್ನು ಕಡಿಮೆ ಅಂದಾಜು ಮಾಡಿಕೊಂಡು ವಿರೋಧಿಯಾದ ಸೈತಾನನನ್ನು ಕಂಡು ಭಯಪಡುವವರಾಗಿದ್ದೇವೆಯೇ? ಯುದ್ಧವು ಕರ್ತನದು ಎಂದು ದಾವೀದನು ಹೇಳಿದಂತೆ, ನಾವು ಕೂಡ ಯುದ್ಧಭೂಮಿಯಲ್ಲಿದ್ದರೆ ಸಾಕು, ನಮ್ಮೊಳಗೆ ಕರ್ತನಿದ್ದು ಕಾರ್ಯನಿರ್ವಹಿಸುತ್ತಾರೆ. ದೇಶದ ಕ್ಷೇಮಾಭಿವೃದ್ಧಿಗಾಗಿ ಮೊಣಕಾಲಿನ ಯುದ್ಧವನ್ನು ಮಾಡೋಣ, ಗೆಲ್ಲೋಣ!

- Bro.ಅನೀಸ್ ರಾಜ

 

ಪ್ರಾರ್ಥನಾ ಅಂಶ:

ಮಾಧ್ಯಮ ಸೇವೆಗಳಲ್ಲಿ ಕೆಲಸ ಮಾಡುತ್ತಿರುವ ಸೇವಕರನ್ನು ದೇವರು ವಿಶೇಷವಾದ ಆತ್ಮದಿಂದ ತುಂಬಿಸಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al