By Village Missionary Movement
Tuesday, 17-May-2022ಧೈನಂದಿನ ಧ್ಯಾನ(Kannada) – 17.05.2022
ಸರಳತೆ
"ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ" – 1 ತಿಮೊಥಿ 6: 6
ಒಂದು ಸುಂದರವಾದ ಶುಭ ಸಾಯಂಕಾಲ. ನಿವೃತ್ತ ಶಿಕ್ಷಕರನ್ನು ನೋಡಲು ಹಿರಿಯ ವಿದ್ಯಾರ್ಥಿಗಳು ಬಂದಿದ್ದರು. ಶಿಕ್ಷಕರು ಅವರನ್ನೆಲ್ಲಾ ಸ್ವಾಗತಿಸಿ ನಿಮ್ಮ ಕೆಲಸ ಮತ್ತು ಜೀವನ ಹೇಗೆ ನಡೆಯುತ್ತಿದೆ ಎಂದು ವಿಚಾರಿಸಿದರು. ಹತ್ತಿರದಲ್ಲಿದ್ದ ತನ್ನ ಹೆಂಡತಿಗೆ ಟೀ ತರುವಂತೆ ಹೇಳಿದರು. ಒಂದು ರಹಸ್ಯವನ್ನೂ ಹೇಳಿ ಕಳುಹಿಸಿದರು. ಮಾತುಕತೆ ಮುಂದುವರೆಯಿತು. ಎಷ್ಟೇ ದುಡಿದರೂ ಸಾಲದು ಎಂಬ ಹತಾಶೆಯಲ್ಲಿ ಜೀವನ ಸಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಚಹಾ ಬಂತು. ಆದರೆ ವಿಭಿನ್ನ ಕಪ್ ಗಳಲ್ಲಿ ಬಂದಿತು. ವಿದ್ಯಾರ್ಥಿಗಳು ಒಬ್ಬರಿಗಿಂತ ಒಬ್ಬರು ಸುಂದರವಾದ ಕಪ್ ಗಳನ್ನು ಆಯ್ಕೆ ಮಾಡಿಕೊಂಡರು, ಶಿಕ್ಷಕರು ಮಾತು ಮುಂದುವರಿಸಿದರು, “ವಿದ್ಯಾರ್ಥಿಗಳೇ, ನೀವು ಒಬ್ಬರಿಗಿಂತ ಒಬ್ಬರು ಅತ್ಯುತ್ತಮವಾಗಿ ಆಯ್ಕೆಮಾಡಿಕೊಂಡಿರಿ. ನಿಮಗೊಂದು ಗೊತ್ತಾ? ಎಲ್ಲಾ ಕಪ್‌ಗಳಲ್ಲಿರುವ ಚಹಾವನ್ನು ಒಂದೇ ರೀತಿಯಲ್ಲಿ ತಯಾರಿಸಲಾಗಿದೆ. ಅತಿಯಾದ ನಿರೀಕ್ಷೆ ಮತ್ತು ಆಸೆ ನಿಮ್ಮ ಜೀವನವನ್ನು ಅತೃಪ್ತಿಗೊಳಿಸಬಹುದು ಮತ್ತು ನಿಮ್ಮನ್ನು ಕೊರಗುವಂತೆ ಮಾಡುತ್ತದೆ. ಸಾಕು ಎಂಬ ಮನಸ್ಥಿತಿಯೊಂದಿಗೆ ಜೀವಿಸಲು ಅಭ್ಯಾಸ ಮಾಡಿಕೊಳ್ಳಿರಿ ಆಗ ಜೀವನ ಸುಲಭವಾಗಿರುತ್ತದೆ" ಎಂದರು.
ನಮ್ಮ ಸತ್ಯವೇದದಲ್ಲಿಯೂ ಸಹ ಎಸ್ತೇರಳ ಪುಸ್ತಕದಲ್ಲಿ ಓದಿದ್ದೇವಲ್ಲಾ? ಮೊರ್ದೆಕೈ ತನ್ನ ಚಿಕ್ಕಪ್ಪನ ಮಗಳಾದ ಎಸ್ತೇರ್ ಅನ್ನು ಬೆಳೆಸಿ ಅರಸನ ಅರಮನೆಯಲ್ಲಿ127 ರಾಷ್ಟ್ರಗಳಿಗೆ ರಾಣಿಯನ್ನಾಗಿ ಮಾಡಿದ ನಂತರ ತಾನೂ ಕೂಡ ರಾಜಮನೆತನದವನೆಂದು ಹೇಳಿಕೊಳ್ಳದೇ ತಾನು ಮೊದಲು ಅರಮನೆಯಲ್ಲಿ ಮಾಡುತ್ತಿದ್ದ ಅದೇ ಕಾವಲು ಕಾಯುವ ಕೆಲಸವನ್ನು ಮುಂದುವರಿಸಿದನು. ಅವರ ಸರಳತೆಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಮೊರ್ದೆಕೈಯ ಸರಳತೆ, ದೇವರ ಮೇಲಿನ ಅವನ ಭಕ್ತಿ, ರಾಜನ ಜೀವವನ್ನು ಉಳಿಸುವ ಅವನ ಅಚಲ ಬದ್ಧತೆ ಮತ್ತು ಅವನ ವಿನಮ್ರ ಸ್ವಭಾವ ಇಂತಹ ಒಳ್ಳೆಯ ಗುಣಗಳೇ ಅವರನ್ನು ಶೂಷನ್ ಅರಮನೆಯಲ್ಲಿ ಉನ್ನತನನ್ನಾಗಿ ಮಾಡಿತು.
ಹೌದು, ನನ್ನ ದೇವರ ಪ್ರೀತಿಯ ಮಕ್ಕಳೇ! ಅತೃಪ್ತ ಜೀವನವೋ? ಕಹಿಯಾಗಿ ತೋರುತ್ತಿದೆಯೋ? ನಿಮಗೆ ಬೇಸರವಾಗಿದೆಯೋ? ದೇವರನ್ನು ಪ್ರೀತಿಸುವವರಿಗೆ ಎಲ್ಲವೂ ಒಳ್ಳೆಯದಕ್ಕಾಗಿಯೇ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಆತ್ಮದಲ್ಲಿ ಬಡವರಾಗಿರುವವರು ಧನ್ಯರು ಎಂದು ಸತ್ಯವೇದವು ಹೇಳುತ್ತಿದೆ. ಅವರು ... ದೀನನನ್ನು ಧೂಳಿಯಿಂದ ಎತ್ತಿ ದರಿದ್ರನನ್ನು ತಿಪ್ಪೆಯಿಂದ ಎಬ್ಬಿಸಿ ಪ್ರಭುಗಳೊಂದಿಗೆ ಕುಳ್ಳಿರಿಸುವವನು ನಮ್ಮ ಕರ್ತನಲ್ಲವೇ! ಮೊರ್ದೆಕೈಯ ಸರಳ ಗುಣವು ನಮ್ಮ ಬಳಿ ಇದೆಯೇ? ಸಾಮಾನ್ಯ ದ್ವಾರದ ಕಾವಲುಗಾರನಾದ ಮೊರ್ದೆಕೈಯನ್ನು ಹೆಚ್ಚಿಸಿದವರು ಖಂಡಿತವಾಗಿಯೂ ನಿಮ್ಮನ್ನು ಉನ್ನತ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಹಲ್ಲೇಲೂಯ!
- Sis. ಮಂಜುಳಾ
ಪ್ರಾರ್ಥನಾ ಅಂಶ:
ನಮ್ಮ ಗೆತ್ಸೆಮನೆ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ವೈದ್ಯಕೀಯ ಸೇವೆಯ ಮೂಲಕ ಭೇಟಿಯಾಗುತ್ತಿರುವ ಗ್ರಾಮಸ್ಥರ ಪ್ರಾಣ, ಆತ್ಮ, ಶರೀರದಲ್ಲಿ ಸ್ವಸ್ಥತೆ ಹೊಂದಿ ರಕ್ಷಿಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482