Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.05.2022
Share:

By Village Missionary Movement

Monday, 16-May-2022

ಧೈನಂದಿನ ಧ್ಯಾನ(Kannada) – 16.05.2022

 

ಸ್ವಾತಂತ್ರ್ಯದ ಹಕ್ಕಿ

 

"ಯೌವನಸ್ಥನೇ, ಪ್ರಾಯದಲ್ಲಿ ಆನಂದಿಸು; ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ..." - ಪ್ರಸಂಗಿ 11:9

 

“ಸಲಹೆ ನಾ? ಅದು ನಮಗೆ ಇಷ್ಟವಾಗದ ವಿಷಯ. ನಮಗೆ ಇಷ್ಟವಾದದ್ದನ್ನು ನಮ್ಮ ಇಚ್ಛೆಯಂತೆ ಮಾಡುವ ಸ್ವಾತಂತ್ರ್ಯ ನಮಗಿಲ್ಲವೇ? ನಮ್ಮ ಎಲ್ಲಾ ವಿಷಯಗಳಲ್ಲಿ ನೀವು ಮೂಗು ಹಾಕುತ್ತೀರಲ್ಲಾ, ನಾವೇನು ಇನ್ನೂ ಚಿಕ್ಕ ಮಕ್ಕಳಾ? ನಮ್ಮ ಕಾಲ ಬೇರೆ, ನಿಮ್ಮ ಕಾಲ ಬೇರೆ! ಸುಮ್ಮನೆ ಗೊಣ ಗೊಣ ಅನ್ನಬೇಡಿ” ಯೌವನಸ್ಥರು ವಾಸಿಸುವ ಪ್ರತಿಯೊಂದು ಮನೆಯಲ್ಲೂ ಪ್ರತಿಧ್ವನಿಸುವ ಪ್ರಶ್ನೆಗಳು ಇವು. ಇದನ್ನೇ ನಾವು "Generation Gap" ಎಂದು ಹೇಳಿಬಿಡುತ್ತೇವೆ.

 

ಸತ್ಯವೇದವು ಸಹ ಯೌವನಸ್ಥರಿಗೆ ಸ್ವಾತಂತ್ರ್ಯವನ್ನು ನೀಡಿದೆ. ಯೌವನಸ್ಥನೇ! ನಿನ್ನ ಮನಸ್ಸು ಬಯಸಿದ ರೀತಿಯಲ್ಲಿ ನಡೆ ಮತ್ತು ನಿನ್ನ ಕಣ್ಣು ಬಯಸಿದ ಎಲ್ಲವನ್ನೂ ನೋಡು. "ಆದರೆ" ಈ ಎಲ್ಲಾ ವಿಷಯಗಳ ‌ನಿಮಿತ್ತವಾಗಿ ದೇವರು ತೀರ್ಪಿನಲ್ಲಿ ತಂದು ನಿಲ್ಲಿಸುವನೆಂದು ಅರಿತುಕೋ" ಎಂದು ಒಂದು "ಚೆಕ್" ಇಡಲಾಗುತ್ತದೆ. ಅದೇ ಸತ್ಯವೇದ, "ನನ್ನ ಮಗನೇ ಸದುಪದೇಶವನ್ನು ಹಿಡಿ, ಸಡಿಲಬಿಡಬೇಡ; ಅದನ್ನು ಕಾಪಾಡಿಕೋ, ಅದೇ ನಿನ್ನ ಜೀವವು" (ಜ್ಞಾನೋ. 4:13) ಎಂದು ಹೇಳುತ್ತಿದೆ. ಕೆಟ್ಟ ಮಗನ ಸಾಮ್ಯದಲ್ಲಿ, ಶಿಸ್ತುಬದ್ಧವಾಗಿರಲು ಬಯಸದ ಅವನು ತಂದೆಯ ಕಣ್ಣು ದೃಷ್ಟಿಯಿಂದ ಜಾರಿಕೊಂಡು, ಸ್ವತಂತ್ರವಾಗಿ ಬದುಕಲು ಬಯಸಿದನು. ತನ್ನ ಪಾಲಿನ ಆಸ್ತಿಯನ್ನು ಕಿತ್ತುಕೊಂಡು ಸ್ವಾತಂತ್ರ್ಯದ ಹಕ್ಕಿಯಾಗಿ ವಿದೇಶಕ್ಕೆ ಹಾರಿ ಹೋದನು. ಫಲಿತಾಂಶ ನಿಮಗೆ ತಿಳಿದಿದೆ. ಹಾಗೆಯೇ ತನ್ನ ಕಣ್ಣಿನ ಇಚ್ಚೆಯಂತೆ ಮತ್ತು ಮನಸ್ಸಿನ ಕಲ್ಪನೆಯಂತೆ ಜೀವಿಸಿದ ಸಂಸೋನನ ಅಂತ್ಯವು ನಿಮಗೆ ಗೊತ್ತಿರುವ ವಿಷಯವೇ!

 

ಪ್ರೀತಿಯ ಯೌವನಸ್ಥನೇ! ನಾವು ಬಯಸಿದಂತೆ ಬದುಕುವುದರಲ್ಲಿ ನಿಜವಾದ ಸ್ವಾತಂತ್ರ್ಯವಿಲ್ಲ. "ಕ್ರಿಸ್ತನಿಗೆ ದಾಸನಾಗಿ ತನ್ನನ್ನು ಒಪ್ಪಿಸಿಕೊಟ್ಟವನು ಎಲ್ಲಾ ವಿಷಯದಲ್ಲೂ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದವನು." ನಮ್ಮ ಕಣ್ಣೆದುರಿಗಿರುವ ಎಲ್ಲವನ್ನೂ ಅನುಭವಿಸುವ ಅಧಿಕಾರ ನಮಗಿದೆ. ಆದರೂ ಎಲ್ಲವೂ ನಮಗೆ ಅರ್ಹವಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನೀವು ಸ್ವಾತಂತ್ರ್ಯವಾಗಿ ಆಕಾಶದಲ್ಲಿ ಹಾರಿದರೆ, ಪಾಪದ ಗಾಳಿಯನ್ನು ಉಸಿರಾಡಿ ದಾರಿ ತಪ್ಪಿದರೆ, ಸೈತಾನನ ಕಣ್ಣುಗಳಿಗೆ ಆಹಾರವಾಗಿ ಮಾರ್ಪಡುತ್ತೀರ. ಮಧ್ಯಪಾನ, ಧೂಮಪಾನ, ಸಿನಿಮಾ, ಹಿಂಸೆ ಮತ್ತು ವೇಶ್ಯಾವಾಟಿಕೆಯಂತಹ ಪಾಪದ ದಾಸತ್ವದಿಂದ ಕ್ರಿಸನ ಅಮೂಲ್ಯವಾದ ರಕ್ತದ ಮೂಲಕ ಬಿಡುಗಡೆ ಹೊಂದುವುದೆ ನಿಜವಾದ ಸ್ವಾತಂತ್ರ್ಯ. ಸತ್ಯವೇದ ವಾಕ್ಯಗಳು ಮತ್ತು ಪೋಷಕರ ಸಲಹೆಗಳು ಎರಡು ರೆಕ್ಕೆಗಳಾಗಿ ಮಾರ್ಪಡುವಾಗ ನೀನು ಸುರಕ್ಷಿತವಾಗಿ ಹಾರಲು ಸಾಧ್ಯ.

- R. ಗ್ರೇಸ್

 

ಪ್ರಾರ್ಥನಾ ಅಂಶ:

ಪ್ರತಿದಿನವೂ ಮುಂಜಾನೆ 5 ಗಂಟೆಗೆ YouTube-ನಲ್ಲಿ ನೇರ ಪ್ರಸಾರವಾಗುವ Healing service-ನಲ್ಲಿ ಭಾಗವಹಿಸುವ ವ್ಯಕ್ತಿಗಳು ಸ್ವಸ್ಥತೆಯನ್ನು ಹೊಂದಿಕೊಳ್ಳುವಂತೆ ಪ್ರಾರ್ಥಿಸಿರಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet