By Village Missionary Movement
Friday, 13-May-2022ಧೈನಂದಿನ ಧ್ಯಾನ(Kannada) – 14.05.2022
ಕರುಣೆ
“ಕರುಣೆಯುಳ್ಳವರು ಧನ್ಯರು; ಅವರು ಕರುಣೆಹೊಂದುವರು" - ಮತ್ತಾಯ 5: 7
ಪಶ್ಚಿಮ ಮಿಕ್ಸಿಗನ್‌ನಲ್ಲಿ ಹದಿನೈದು ವರ್ಷದ ಹುಡುಗನೊಬ್ಬ ಕ್ಯಾನ್ಸರ್ ನಿಂದ ನರಳುತ್ತಿದ್ದನು. ಕಿಮೋಥೆರಪಿ ಚಿಕಿತ್ಸೆ ಪಡೆದ ಬಾಲಕನಿಗೆ ಸಹಿಸಲಾಗದ ನೋವು. ಏಕೆಂದರೆ ಅವನ ತಲೆಯ ಮೇಲಿನ ಕೂದಲೆಲ್ಲಾ ಉದುರಿಹೋಗಿತ್ತು. ರೋಗದ ಫಲಿತಾಂಶ ಏನಾಗಬಹುದು ಎಂದು ತಿಳಿಯದೆ, ಬಹುತೇಕ ಬೋಳು ತಲೆಯೊಂದಿಗೆ ಶಾಲೆಗೆ ಹೋಗುವುದು ನಾಚಿಕೆಗೇಡಿನ ಸಂಗತಿ ಎಂದು ಅವನು ಹಿಂಜರಿದನು. ಆದರೆ ಶಾಲೆಯ ಮೊದಲ ದಿನ ಅವನಿಗೆ ಆಶ್ಚರ್ಯ ಕಾದಿತ್ತು. ಅವನ ತರಗತಿಯಲ್ಲಿ ಅನೇಕರು ತಲೆ ಬೋಳಿಸಿಕೊಂಡು ಬಂದಿದ್ದರು. ಅವನನ್ನು ಪ್ರೀತಿಸಿದ ಹುಡುಗರು ಹೊಸ ರೀತಿಯಲ್ಲಿ ತಮ್ಮ ಕರುಣೆಯನ್ನು ತೋರ್ಪಡಿಸಿದರು. ಸ್ನೇಹಿತರ ಈ ಕಾರ್ಯ ಬಾಲಕನ ನೋವನ್ನು ಕಡಿಮೆ ಮಾಡಿತು.
ಸತ್ಯವೇದದಲ್ಲಿ ಫರೋಹನ ಮಗಳು ಸ್ನಾನಕ್ಕಾಗಿ ನದಿಯ ಬಳಿಗೆ ಇಳಿದು ಬಂದಳು; ಆಕೆಯ ಗೆಳತಿಯರು ನದಿಯ ದಡದಲ್ಲಿ ತಿರುಗಾಡುತ್ತಿದ್ದರು. ಆಕೆ ಜಂಬುಹುಲ್ಲಿನಲ್ಲಿ ಪೆಟ್ಟಿಗೆಯನ್ನು ಕಂಡು ದಾಸಿಯನ್ನು ಕಳುಹಿಸಿ ತರಿಸಿದಳು. ಆಕೆ ಅದರ ಮೇಲೆ ಕನಿಕರಪಟ್ಟು - ಇದು ಇಬ್ರಿಯರ ಮಕ್ಕಳಲ್ಲಿ ಒಂದಾಗಿರಬಹುದೆಂದು ಹೇಳಿದಳು. (ವಿಮೋಚನಕಾಂಡ 2: 5,6) ಫರೋಹನ ಮಗಳು ಆ ಮಗುವಿನ ಮೇಲೆ ಕರುಣೆ ತೋರಿದಳು. ಆ ದಿನ ಆ ಮಗುವನ್ನು ರಕ್ಷಿಸಲಾಯಿತು. ಕರ್ತನಾದ ಯೇಸು ಕ್ರಿಸ್ತನು ಸಹ ತಾನು ಪರ್ವತದ ಮೇಲೆ ಮಾಡಿದ ಪ್ರಸಂಗದಲ್ಲಿ ಕರುಣೆಯ ಬಗ್ಗೆ ಮಾತನಾಡುತ್ತಾರೆ. ನಮ್ಮ ದೇವರು ಕರುಣೆಯುಳ್ಳವರು. ಅವರು ಸಾವಿರ ತಲೆಮಾರುಗಳಿಗೆ ಕರುಣೆ ತೋರುವವರು.
ಪ್ರಿಯರೇ! ನಮ್ಮ ಜೀವನದಲ್ಲಿ ಅಂಗೀಕರಿಸುವ ಸ್ವಭಾವ ಇಲ್ಲದಿರಬಹುದು. ಆದರೆ ಕರುಣೆಯಿಲ್ಲದೆ ಮಾತ್ರ ಇರಲೇಬಾರದು. ಪಾಪದಲ್ಲೂ ಮತ್ತು ಶಾಪದಲ್ಲೂ ಜೀವಿಸುತ್ತಿದ್ದ ನಮ್ಮ ಮೇಲೆ ಯೇಸು ಕರುಣೆ ತೋರಿಸಿ, ಕರುಣೆಯಿಂದ ರಕ್ಷಿಸಿದರು. ನಾವಿರುವ ಸ್ಥಳದಲ್ಲೂ, ಬೀದಿಗಳಲ್ಲೂ ಇರುವ ಜನರ ಮೇಲೆ ನಾವು ಅದೇ ರೀತಿ ಕರುಣೆಯುಳ್ಳವರಾಗಿದ್ದೇವಾ? ಅವರು ನಮ್ಮ ಕರುಣೆಯ ಮೂಲಕ ಕರುಣೆಯುಳ್ಳ ತಂದೆಯನ್ನು ಕಂಡುಕೊಳ್ಳಲು ಸಾಧ್ಯವಾ?
- Mrs. ಶಕ್ತಿ ಶಂಕರ್ ರಾಜ್
ಪ್ರಾರ್ಥನಾ ಅಂಶ:
ನಂಬಿಕೆ ಟಿವಿ ಮತ್ತು ಸತ್ಯಂ ಟಿವಿಯಲ್ಲಿ ಪ್ರಸಾರವಾಗುವ ನಮ್ಮ ಕಾರ್ಯಕ್ರಮಗಳ ಮೂಲಕ ಅನೇಕರು ಕ್ರಿಸ್ತನಿಗಾಗಿ ವೈರಾಗ್ಯದಿಂದ ಕಾರ್ಯ ನಿರ್ವಹಿಸುವವರಾಗಿ ಎದ್ದೇಳಬೇಕೆಂದು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482