Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.05.2022
Share:

By Village Missionary Movement

Friday, 13-May-2022

ಧೈನಂದಿನ ಧ್ಯಾನ(Kannada) – 13.05.2022

 

ಒಂದೇ ಒಂದು ಸಾರಿ

 

"ನನ್ನನ್ನು ಕಳುಹಿಸಿದಾತನ ಕಾರ್ಯಗಳನ್ನು ನಾವು ಹಗಲಿರುವಾಗಲೇ ನಡಿಸಬೇಕು..." - ಯೋಹಾನ 9: 4

 

ಒಂದು ಸೂಚನಾ ಫಲಕದಲ್ಲಿ ಬರೆದಿದ್ದ ಮಾತನ್ನು ಓದಿದಾಗ, ಆ ಮಾತು ನನ್ನನ್ನು ಹೆಚ್ಚಾಗಿ ಯೋಚಿಸುವಂತೆ ಮಾಡಿತು, “ನೀನು ಒಮ್ಮೆ ಮಾತ್ರ ಈ ಜಗತ್ತಿನ ಮಾರ್ಗದಲ್ಲಿ ಹಾದು ಹೋಗುತ್ತೀಯ. ಆ ಪ್ರಯಾಣವನ್ನು ಸಾಧ್ಯವಾದಷ್ಟು ಇತರರಿಗೆ ಉಪಯುಕ್ತವಾಗುವಂತೆ ಮಾಡು ” ಇದೇ ಅಲ್ಲಿ ಬರೆದಿದ್ದ ಮಾತು.

 

ಹೌದು, ಜೀವನವು ನಮ್ಮ ಕೈಯಲ್ಲಿ ಕೊಡಲ್ಪಟ್ಟ ಅಮೂಲ್ಯವಾದ ಸಂಪತ್ತು. ಒಮ್ಮೆ ಮಾತ್ರ ನಾವು ಈ ಜಗತ್ತಿನಲ್ಲಿ ಹಾದು ಹೋಗುತ್ತೇವೆ. ನಿರ್ಲಕ್ಷ್ಯವಾಗಿ ಜೀವನವನ್ನು ವ್ಯರ್ಥ ಮಾಡಿಕೊಳ್ಳಬಾರದು. ಪ್ರತಿ ಸೆಕೆಂಡ್ ಅನ್ನು ನಾವು ದೇವರಿಗಾಗಿ ಹೇಗೆ ಮತ್ತು ಎಷ್ಟು ಖರ್ಚು ಮಾಡುತ್ತಿದ್ದೇವೆ? ಆತ್ಮಗಳನ್ನು ಆದಾಯ ಮಾಡುತ್ತಾ, ಹೂಡಿಕೆ ಮಾಡುತ್ತಿದ್ದೇವೆಯೇ? ಈ ಜೀವನದಲ್ಲಿ ದೇವರು ಅನುಮತಿಸುವ ಸಂಕಟಗಳನ್ನು ನಾವು ಹೇಗೆ ನೋಡುತ್ತಿದ್ದೇವೆ?

 

ಕ್ರಿಸ್ತನು ಶಿಲುಬೆಯಲ್ಲಿ ನಮಗಾಗಿ ಪಾಡಪಟ್ಟರು. ಅದರ ಮೂಲಕ ಪರಿಪೂರ್ಣ ಶಾಂತಿ, ಪ್ರೀತಿ, ಪಾಪಕ್ಷಮಾಪಣೆ ಮತ್ತು ನಿತ್ಯಜೀವವನ್ನು ನಮಗೆ ನೀಡಿದರು. ಯೇಸುಕ್ರಿಸ್ತನು ಶಾರೀರಿಕ ಪಾಡುಗಳು ಮತ್ತು ಶಿಲುಬೆಯ ವೇದನೆಗಳನ್ನು ಸಹಿಸಲಾಗದಿದ್ದರೂ ಸಹ ಆತನು ಅದನ್ನೆಲ್ಲಾ ನಮ್ಮ ಪ್ರಯೋಜನಕ್ಕಾಗಿ ಅಂಗೀಕರಿಸಿದರೇ! ಅವರು ಈ ಲೋಕಕ್ಕೆ ಬಂದ ಉದ್ದೇಶವನ್ನು ನೆರವೇರಿಸಿ ಇಂದು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾರೆ. (ಇಬ್ರಿ. 12:2).

 

ಸತ್ಯವೇದದಲ್ಲಿ, ಅಪೊಸ್ತಲನಾದ ಪೌಲನ ಬಗ್ಗೆ ನಾವು ಓದುತ್ತೇವೆ. ಅವರು ದೇವರಿಂದ ಆರಿಸಲ್ಪಟ್ಟು, ಕರೆಯಲ್ಪಟ್ಟು ಸೇವೆ ಮಾಡಿದವರು. ಆದರೆ ಅವರ ಜೀವನದಲ್ಲೂ ಪಾಡುಗಳಿಲ್ಲದೇ ಇರಲಿಲ್ಲ. ಆದರೂ ಅವರನ್ನು ಕಳುಹಿಸಿದವರ ಕೆಲಸಕ್ಕಾಗಿ (2 ಕೊರಿಂಥ 11:28) ಅವರು ಅನುಭವಿಸಿದ ಕಷ್ಟ ಇದರಲ್ಲಿ ಕಾಣುತ್ತದೆ. ಹಾಗಾದರೆ ಆತನ ಸಂಕಟಗಳಲ್ಲಿ ಕ್ರಿಸ್ತನನ್ನೂ ನೋಡುತ್ತೇವೆ. ಅವರಿಂದ ಆರಿಸಲ್ಪಟ್ಟ ಅಪೊಸ್ತಲರೂ ಇಷ್ಟು ಕಷ್ಟದಿಂದಲೇ ಜೀವಿಸುತ್ತಿರುವಾಗ ನಾವು ಎಷ್ಟು ಮಾತ್ರದವರು?

 

ದೇವರ ಮಕ್ಕಳೇ, ನೀವು ಬಹುಶಃ ಕಷ್ಟಗಳನ್ನು ಅನುಭವಿಸುತ್ತಿದ್ದರೆ ಜೀವನವನ್ನು ನಿರಾಕರಿಸಬೇಡಿರಿ. ಅವು ನಿಮ್ಮನ್ನು ದೇವರ ರಾಜ್ಯಕ್ಕೆ ತಾನೇ ಕರೆದೊಯ್ಯುತ್ತದೆ. ಈ ಲೋಕದ ಕಷ್ಟಗಳು ಶಾಶ್ವತವಲ್ಲ. ಆದ್ದರಿಂದ, ಈ ಒಂದೇ ಒಂದು ಜೀವನ ದುರಂತಗಳ ನಡುವೆಯೂ ಪರಲೋಕದ ತಂದೆಗೂ, ಇತರರಿಗೂ ಪ್ರಯೋಜನಕಾರಿಯಾಗಿ ಜೀವಿಸಿ ಜೀವನವನ್ನು ಮುಕ್ತಾಯಗೊಳಿಸೋಣ. 

- Mrs. ಗ್ರೇಸ್ ಜೀವಮಣಿ

 

ಪ್ರಾರ್ಥನಾ ಅಂಶ:

ಸರಪಳಿ ಪ್ರಾರ್ಥನೆಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರನ್ನೂ ದೇವರು ಪ್ರಾರ್ಥನೆಯ ಆತ್ಮದಿಂದಲೂ, ಆತ್ಮ ಭಾರದಿಂದಲೂ ತುಂಬಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş