By Village Missionary Movement
Thursday, 12-May-2022ಧೈನಂದಿನ ಧ್ಯಾನ(Kannada) – 12.05.2022
ಆಸಕ್ತರಾಗಿರಿ
“...ಆತ್ಮದಲ್ಲಿ ಆಸಕ್ತರಾಗಿದ್ದು ಕರ್ತನನ್ನು ಸೇವಿಸುವವ ರಾಗಿರ್ರಿ" — ರೋಮಾಪುರ 12:11
ಉತ್ತರ ಭಾರತದ ಪ್ರಾಂತ್ಯದಲ್ಲಿ ರೈಲು ಪ್ರಯಾಣಗಳಲ್ಲಿ ನೋಡಲು ಪ್ರತಿದಿನ ಒಂದು ತಮಾಷೆಯ ವಿಷಯವಿದೆ. ಬೆಳಗ್ಗೆ 7 ಗಂಟೆಗೆ ಸಮೋಸ ಸಿದ್ಧವಾಗುತ್ತದೆ. ತಿನ್ನಲು ಬಿಸಿಯಾಗಿ, ರುಚಿಯಾಗಿ ಇರುತ್ತದೆ. ಅದನ್ನು ಮಾರುವ ವ್ಯಕ್ತಿ "ಘರಂ ಸಮೋಸಾ" ಎಂದು ಕೂಗುತ್ತಾ ಮಾರುತ್ತಾರೆ. ಇದರಲ್ಲಿ ತಮಾಷೆ ಏನೆಂದರೆ ಬೆಳಿಗ್ಗೆ 7 ಗಂಟೆಗೆ ಮಾಡಿದ ಸಮೋಸವನ್ನು ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಎಲ್ಲಾ ಸಮಯದಲ್ಲೂ "ಘರಂ ಸಮೋಸಾ, ಘರಂ ಸಮೋಸಾ" (ಬಿಸಿ ಸಮೋಸಾ) ಎಂದು ಕೂಗುತ್ತಾ ಮಾರುತ್ತಾರೆ. ಇನ್ನೂ ಹೆಚ್ಚಿನ ತಮಾಷೆ ಏನೆಂದರೆ ಮರುದಿನ ಬೆಳಿಗ್ಗೆಯೂ ಅವನು ಉಳಿದ ಸಮೋಸವನ್ನು ಬಿಸಿ ಸಮೋಸಾ ಎಂದು ಕೂಗುತ್ತಲೇ ಮಾರುತ್ತಾನೆ. ನಮ್ಮ ದೃಷ್ಟಿಯಲ್ಲಿ ಆ ಸಮೋಸ ಹೇಗೋ ಏನೋ, ಆದರೆ ಅದನ್ನು ಮಾಡಿದವರ ದೃಷ್ಟಿಯಲ್ಲಿ ಯಾವಾಗಲೂ "ನನ್ನ ಸಮೋಸ ನಾನು ತಯಾರಿಸಿದಾಗ ಹೇಗಿತ್ತೋ ಹಾಗೆಯೇ ಬಿಸಿಯಾಗಿರುತ್ತದೆ" ಎಂದು ನೆನೆಸುತ್ತಾರೆ.
ಅಪೊ. ಪೌಲನು ರೋಮಾಪುರದಲ್ಲಿರುವ ಸಭೆಯ ವಿಶ್ವಾಸಿಗಳಿಗೆ ಅನೇಕ ವಿಷಯಗಳನ್ನು ಬರೆಯುತ್ತಾರೆ. ಅದರಲ್ಲೂ ರೋಮಾ 12 ನೇ ಅಧ್ಯಾಯದಲ್ಲಿ, "ಆತ್ಮದಲ್ಲಿ ಆಸಕ್ತರಾಗಿದ್ದು" ಎಂದು ಬರೆಯುತ್ತಾರೆ. ಅಂದರೆ ಒಬ್ಬ ಸೇವಕನಾಗಿ ತನ್ನ ಸಭೆಗೆ ಯಾವ ರೀತಿಯ ಮಾತುಗಳನ್ನು ಬರೆಯುತ್ತಿದ್ದಾರೆ ಎಂಬುದನ್ನು ಗಮನಿಸಿ ನೋಡಿರಿ. ತನ್ನ ಜನರು ಯಾವಾಗಲೂ ಆತ್ಮದಲ್ಲಿ ಆಸಕ್ತರಾಗಿ (ಬೆಂಕಿಯಾಗಿ) ಇರಬೇಕು ಎಂಬುದೇ ಪೌಲನ ಉದ್ದೇಶವಾಗಿತ್ತು. ಅವರು ಆಧ್ಯಾತ್ಮಿಕ ಜೀವನದಲ್ಲಿ ಬೆಳೆಯಬೇಕು, ಉತ್ಸಾಹಭರಿತರಾಗಿರಬೇಕು, ಏಕ ಮನಸ್ಸಿನವರಾಗಿರಬೇಕು ಮತ್ತು ಲೌಕಿಕ ಆಶೀರ್ವಾದಗಳಿಗಿಂತ ಇಂತಹ ಆಶೀರ್ವಾದಗಳೊಂದಿಗಿದ್ದು ಹೇಗಾದರೂ ದೇವರಿಗಾಗಿ ಜೀವಿಸಬೇಕು. ದೇವರ ಸೇವೆಯನ್ನು ಮಾಡಬೇಕು, ಮತ್ತು ದೇವರ ಹೆಸರನ್ನು ಮಹಿಮೆಪಡಿಸಬೇಕು ಎಂಬುದೇ ಪೌಲನ ಬಯಕೆಯಾಗಿತ್ತು.
ಪ್ರಿಯರೇ! ಇದನ್ನು ಓದುತ್ತಿರುವ ನಿಮ್ಮ ಹೃದಯ ಹೇಗಿದೆ? ಸಮೋಸ ಮಾರಾಟಗಾರನು ತನ್ನ ಸಮೋಸ ಯಾವಾಗಲೂ ಬಿಸಿಯಾಗಿದೆ ಎಂದು ಭಾವಿಸುತ್ತಾನೆ. ಒಬ್ಬ ದೇವ ಸೇವಕರು ತನ್ನ ಸಭೆಯ ಜನರು ಆತ್ಮದಲ್ಲಿ ಆಸಕ್ತರಾಗಿರಬೇಕು ಎಂದು ನಿರೀಕ್ಷಿಸುತ್ತಾರೆ. ಇಂದು ಕ್ರಿಸ್ತನನ್ನು ಹೊಂದಿಕೊಂಡು ಕ್ರೈಸ್ತರಾಗಿರುವ ನಾವು ಯಾವಾಗಲೂ ಆಸಕ್ತರಾಗಿರಬೇಕು. ಅಂದರೆ ನಾವು ಯಾವಾಗಲೂ ಮಾತನಾಡುವುದರಲ್ಲಿ, ಆಲೋಚನೆಯಲ್ಲಿ ಮತ್ತು ಕ್ರಿಯೆಗಳಲ್ಲಿ ಇತರರಿಗೆ ಮಾದರಿಯಾಗಿರಬೇಕು. ಯಾವುದೇ ಸಮಸ್ಯೆಯನ್ನು ಕಂಡು ಬೇಸತ್ತು ಒಂದು ಕಡೆ ಕುಳಿತುಬಿಡಬಾರದು. ದೇವರು ನಿಮ್ಮನ್ನು ಹುಡುಕಿ ಬಂದು ರಕ್ಷಿಸಿದ ದಿನದಲ್ಲಿ ಹೇಗೆ ಪ್ರೀತಿಸಿದರೋ, ಅದರಂತೆಯೇ ಇಂದಿನವರೆಗೂ ನಿಮ್ಮನ್ನು ಪ್ರೀತಿಸುತ್ತಿದ್ದಾರೆ. ಆದ್ದರಿಂದ ಯಾವಾಗಲೂ ದೇವರಿಗಾಗಿ ನಿಲ್ಲೋಣ! ಓಡೋಣ! ನಾವು ಓಡುತ್ತಲೇ ಇರೋಣ! ನಾವು ಕೆಲಸ ಮಾಡುತ್ತಲೇ ಇರೋಣ! ಆಮೆನ್.
- T.ಶಂಕರ್ ರಾಜ್
ಪ್ರಾರ್ಥನಾ ಅಂಶ:
ಸಹ ಮಿಷನರಿಗಳು 5 ಹಳ್ಳಿಗಳಲ್ಲಿ ಕ್ರಮವಾಗಿ ಸೇವೆ ಮಾಡಲು; ಏಕ ದೃಷ್ಟಿಯಲ್ಲಿ ಕಾರ್ಯನಿರ್ವಹಿಸಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482