By Village Missionary Movement
Wednesday, 11-May-2022ಧೈನಂದಿನ ಧ್ಯಾನ(Kannada) – 11.05.2022
ಪ್ರಶ್ನೆ ಕೇಳದ ವಿಧೇಯತೆ
"...ನಮ್ಮ ದೇವರಾದ ಯೆಹೋವನ ಮಾತಿನಲ್ಲಿ ಲಕ್ಷ್ಯವಿಟ್ಟು ನೀನು ನೇವಿುಸಿದ್ದನ್ನೆಲ್ಲಾ ಅನುಸರಿಸಿದ್ದೇವೆ." - ಧರ್ಮೋಪದೇಶಕಾಂಡ 26:14
ಒಬ್ಬ ಶ್ರೀಮಂತ ವ್ಯಕ್ತಿ "ಉದ್ಯೋಗಕ್ಕೆ ಜನರು ಬೇಕು" ಎಂದು ಜಾಹಿರಾತು ಮಾಡಿದ್ದರು. ಅನೇಕ ಯೌವನಸ್ಥರು ಜಾಹೀರಾತನ್ನು ನೋಡಿ ಉತ್ಸಾಹದಿಂದ ಓಡಿಬಂದರು. ಎರಡು ದಿನ ಅವರು ಹೇಳಿದ ಕೆಲಸಗಳನ್ನೆಲ್ಲಾ ಮಾಡಿದ ಮೇಲೆ, ನಂತರ ಅವರು ಕೆಲಸಕ್ಕೆ ಬರುವುದನ್ನೇ ನಿಲ್ಲಿಸಿಬಿಟ್ಟರು. ಬಂದವರು ಒಬ್ಬರಾದರೂ ಕೆಲಸದಲ್ಲಿ ಸ್ಥಿರವಾಗಿ ಉಳಿಯಲಿಲ್ಲ. ಕೊನೆಗೆ ಒಬ್ಬ ಯುವಕ ಕೆಲಸಕ್ಕೆ ಬಂದ. ಅವನ ಬಳಿ ಆ ಶ್ರೀಮಂತ ಅಲ್ಲಿ ಬಿದ್ದಿದ್ದ ಜಲ್ಲಿಕಲ್ಲುಗಳನ್ನು ತೆಗೆದುಕೊಂಡು ಹೋಗಿ ಸ್ವಲ್ಪ ದೂರದಲ್ಲಿ ಸುರಿಯಲು ಹೇಳಿದರು. ಹೀಗೆ ಒಂದು ವಾರ ಪೂರ್ತಿ ವಿವಿಧ ಕೆಲಸಗಳನ್ನು ಹೇಳಿದರು. ಆ ಯುವಕ ಒಂದು ಮಾತೂ ಹೇಳದೆ ವಿಧೇಯನಾಗಿ ಎಲ್ಲಾ ಕೆಲಸ ಮುಗಿಸಿ ಆ ವಾರ ಸಂಬಳವನ್ನೂ ಪಡೆದ. ಭಾನುವಾರದ ರಜೆಯನ್ನು ಮುಗಿಸಿಕೊಂಡು ಸೋಮವಾರ ಕೆಲಸಕ್ಕೆ ಬಂದವನನ್ನು ಕಂಡು ಬೆಚ್ಚಿಬಿದ್ದ ಯಜಮಾನನು, ಯಾಕೆ ಏನು ಎಂದೆಲ್ಲಾ ಯಾವ ಪ್ರಶ್ನೆಯನ್ನೂ ಕೇಳದೇ ಯಜಮಾನನ ಆಜ್ಞೆಯನ್ನು ನಿಷ್ಠೆಯಿಂದ ಪಾಲಿಸುತ್ತಿದ್ದ ಆ ಯುವಕನಿಗೆ ತನ್ನ ವಿದ್ಯಾಭ್ಯಾಸಕ್ಕೆ, ಸಾಮರ್ಥ್ಯಕ್ಕೆ ತಕ್ಕ ಉನ್ನತವಾದ ಕೆಲಸವನ್ನು ನೀಡಿ, ಆತನನ್ನು ಕೆಲಸದಲ್ಲಿ ಸ್ಥಿರವಾಗಿರಿಸಿಕೊಳ್ಳಲು ತೀರ್ಮಾನಿಸಿ ರಹಸ್ಯವನ್ನು ಕಾಪಾಡುವಂತೆ ನೇಮಿಸಿದನು. ಅವನು ತನ್ನ ಜೀವನದುದ್ದಕ್ಕೂ ಅವರ ಕುಟುಂಬಕ್ಕೆ ನಂಬಿಗಸ್ತನಾದ ಕಾವಲುಗಾರನಾಗಿದ್ದನು.
"ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನು" ಎಂದು ಕರ್ತನೇ ಮೋಶೆಯ ಬಗ್ಗೆ ಸಾಕ್ಷಿ ಹೇಳಿರುವಾಗ ಆತನ ಜೀವನ ಹೇಗಿದ್ದಿರಬಹುದು. ಯಾಜಕ ಗುಡಾರವನ್ನು ನಿರ್ಮಿಸುವಂತೆ ದೇವರು ತನ್ನ ಯೋಜನೆಯನ್ನು, ಅದರ ಮಾರ್ಗದರ್ಶನವನ್ನು ಹೇಳುವಾಗ, ಗಮನವಿಟ್ಟು ಕೇಳಿ ಅದನ್ನು ಸ್ವೀಕರಿಸಿ, ಅದರಲ್ಲಿ ತನ್ನ ಸ್ವಂತ ಬುದ್ಧಿವಂತಿಕೆಯನ್ನು ಬಹಿರಂಗಪಡಿಸದೆ ತನಗೆ ಕೊಟ್ಟ ಜವಾಬ್ದಾರಿಗಳನ್ನು ಮೀರದೇ ದೇವರ ಮಾತಿಗೆ ವಿಧೇಯನಾಗಿ ನಿಷ್ಠೆಯಿಂದ ಮಾಡಿ ಮುಗಿಸಿದನು.
ಪ್ರಿಯರೇ, ನಮ್ಮ ವೈಯ್ಯಕ್ತಿಕ ಜೀವನದಲ್ಲಿ ನಾವು ದೇವರಿಗೆ ವಿಧೇಯರಾಗುತ್ತಿದ್ದೇವೆಯೇ? ಸತ್ಯವೇದದಲ್ಲಿ ಆತನು ಆಜ್ಞಾಪಿಸಿದ ಪ್ರತಿಯೊಂದು ವಿಷಯಗಳನ್ನು ಪೂರೈಸಲು ನಾವು ಶ್ರಮಿಸುತ್ತಿದ್ದೇವೆಯೇ? ಪ್ರಶ್ನೆ ಕೇಳದೆ, ತನ್ನ ಚಿತ್ತವನ್ನು ಮಾಡಲು ಬಯಸುವವರನ್ನೇ ದೇವರು ಹುಡುಕುತ್ತಿದ್ದಾರೆ. ಹಾಗೆ ವಿಧೇಯರಾಗುವಾಗ ಅನೇಕರಿಗೆ ಪ್ರಯೋಜನವಾಗುವ ಜೀವ ಬುಗ್ಗೆಯಾಗಿ ನಮ್ಮೊಬ್ಬೊಬ್ಬರನ್ನೂ ಅವರು ಖಂಡಿತವಾಗಿಯೂ ಮಾರ್ಪಡಿಸಲು ಶಕ್ತನಾಗಿದ್ದಾರೆ. ಒಂದು ವೇಳೆ ಆಲಯದಲ್ಲಿ ಒಂದು ಚಿಕ್ಕ ಕೆಲಸವನ್ನು ಮಾಡಲು ದೇವರು ನಿಮ್ಮನ್ನು ಕರೆದಿರಬಹುದು, ಅದರಲ್ಲಿ ನೀವು ಯಾವ ಪ್ರಶ್ನೆಯನ್ನೂ ಕೇಳದೇ, ನನಗಿರುವ ವಿದ್ಯಾಭ್ಯಾಸಕ್ಕೂ, ಪ್ರತಿಭೆಗೂ ಇದು ಸರಿಯಾದ ಕೆಲಸವಾ? ಎಂದು ಪ್ರಶ್ನಿಸದೇ, ಉತ್ತಮವಾಗಿ ಅದನ್ನು ಮಾಡುವಾಗ, ನಿಮ್ಮ ಪ್ರಾಮಾಣಿಕತೆಯನ್ನು ನೋಡುವ ದೇವರು ನಿಮ್ಮನ್ನು ಅನೇಕ ವಿಷಯಗಳಲ್ಲಿ ಅಧಿಕಾರಿಗಳಾಗಿ ಮಾಡುತ್ತಾರೆ. ಚಿಕ್ಕ ಚಿಕ್ಕ ವಿಷಯಕ್ಕೆ ಗೊಣಗುತ್ತಿದ್ದರೆ, ಯಾರು ನಿಮ್ಮನ್ನು ನಂಬಿ ಕೆಲಸ ಕೊಡಲು ಸಾಧ್ಯ? ನೀವು ನಿಮ್ಮ ಕೆಳಗಿರುವ ಮೆಟ್ಟಿಲು ಮೇಲೆ ಕಾಲಿಟ್ಟರೆ ಮಾತ್ರವೇ ನೀವು ಮೇಲಿರುವ ಮೆಟ್ಟಿಲುಗೆ ಹೋಗಲು ಸಾಧ್ಯ. ನಾವು ಆತನ ಮಾತಿಗೆ ಕಿವಿಗೊಟ್ಟು ಆತನ ಚಿತ್ತವನ್ನು ಯಾವುದೇ ಪ್ರಶ್ನೆಯಿಲ್ಲದೆ ಮಾಡಿದರೆ, ಆತನು ಖಂಡಿತವಾಗಿಯೂ ನಮ್ಮನ್ನು ಉನ್ನತೀಕರಿಸುತ್ತಾರೆ.
- Bro. ಹನೀಶ್ ಸಮುವೇಲ್
ಪ್ರಾರ್ಥನಾ ಅಂಶ:
2000 ಆಸನಗಳ ಪ್ರಾರ್ಥನಾ ಗುಡಾರದ ನಿರ್ಮಾಣವು ಶೀಘ್ರವಾಗಿ ಪೂರ್ಣಗೊಂಡು ದೇವರ ನಾಮ ಮಹಿಮೆಗಾಗಿ ಪ್ರತಿಷ್ಟೆ ಮಾಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482