By Village Missionary Movement
Tuesday, 10-May-2022ಧೈನಂದಿನ ಧ್ಯಾನ(Kannada) – 10.05.2022
ಎಬೆದ್ಮೆಲೆಕ್ ಎಲ್ಲಿ?
"ಧೈರ್ಯದಿಂದಿರು, ನಮ್ಮ ಜನರಿಗೋಸ್ಕರವೂ ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ನಮ್ಮ ಪೌರುಷವನ್ನು ತೋರಿಸೋಣ" - 2 ಸಮುವೇಲ 10:12
17 ನೇ ವಯಸ್ಸಿನಲ್ಲಿ, ಕುಮಾರ್ ತೀವ್ರ ವಿರೋಧದ ನಡುವೆ ಯೇಸು ಕ್ರಿಸ್ತನನ್ನು ತನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸಿದನು. ನಂತರ ಅವನು ತನ್ನ ಎಲ್ಲಾ ಸಂಬಂಧಿಕರು, ಸ್ನೇಹಿತರು ಮತ್ತು ಪರಿಚಯಸ್ಥರಿಗೆ ಯೇಸುವಿನ ಪ್ರೀತಿಯನ್ನು ಉತ್ಸಾಹದಿಂದ ಹೇಳಿದನು. ಕೆಲವರು ಅದನ್ನು ಗಮನವಿಟ್ಟು ಕೇಳುತ್ತಿದ್ದರು. ಆದರೆ ಅನೇಕರು ಅವನನ್ನು ಗೇಲಿ ಮಾಡಿ ಬೈದು ಕಳುಹಿಸಿಬಿಡುತ್ತಿದ್ದರು. ಇದರಿಂದ ಭಯಪಟ್ಟು ಮನನೊಂದ ಅವನು ಇನ್ನು ಮುಂದೆ ನಾನೊಬ್ಬನೇ ದೇವರನ್ನು ಹುಡುಕುತ್ತೇನೆ, ಹಿಂಬಾಲಿಸುತ್ತೇನೆ, ಯಾರಿಗೂ ದೇವರ ಬಗ್ಗೆ ಹೇಳುವುದಿಲ್ಲ ಎಂದು ನಿರ್ಧರಿಸಿದನು. ನಂತರ ತನ್ನ ಕಾಲೇಜು ಶಿಕ್ಷಣವನ್ನು ಮುಗಿಸಿ ಕಂಪನಿಯೊಂದಕ್ಕೆ ಸೇರಿದನು. ಅಲ್ಲಿ ದೊರೈ ಎಂಬ ಸ್ನೇಹಿತನಿಗೆ ಯೇಸುವಿನ ಬಗ್ಗೆ ಹೇಳುವಂತೆ ಕುಮಾರ್ ಅನ್ನು ದೇವರು ಪ್ರೇರೇಪಿಸಿದರು. ಆದರೆ ಅವನು ತನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡು ದೊರೈ ನನ್ನನ್ನು ಗೇಲಿ ಮಾಡುತ್ತಾನೆ ಎಂದುಕೊಂಡು ತನ್ನ ಗೆಳೆಯನಿಗೆ ಹೇಳಲೇ ಇಲ್ಲ. ಒಂದು ದಿನ ದೊರೈ ಕಾರು ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದನು. ಇದನ್ನು ಕೇಳಿದ ಕುಮಾರ್ ನ ಹೃದಯ ಒಡೆದು ಹೋಯಿತು, ತಪ್ಪು ಮಾಡಿಬಿಟ್ಟೆನೆಂಬ ಆಳವಾದ ವೇದನೆಯಿಂದ, ಮಾನಸಿಕವಾಗಿ ಖಿನ್ನತೆಗೊಳಗಾಗಿ ಅದರಿಂದ ಚೇತರಿಸಿಕೊಳ್ಳಲು ಅವನಿಗೆ ಕೆಲವು ವರ್ಷಗಳೇ ಬೇಕಾಯಿತು. ಇದಕ್ಕೆ ಕಾರಣ ಸುವಾರ್ತೆ ಸಾರುವುದರಲ್ಲಿ ಕುಮಾರನಿಗಿದ್ದ ಭಯ ಮತ್ತು ಧೈರ್ಯದ ಕೊರತೆಯೇ.
ಪ್ರವಾದಿಯಾದ ಯೆರೆಮೀಯನು ತನ್ನ ಕಾಲದಲ್ಲಿ ಜೀವಿಸಿದ ಯೆಹೂದಿ ಜನರಿಗೆ ಮತ್ತು ಅರಸನಿಗೆ ವಿರುದ್ಧವಾಗಿ ಪ್ರವಾದನೆ ನುಡಿದಾಗ, ಅವನನ್ನು ಆಳವಾದ ಬಾವಿಯಲ್ಲಿ ಹಾಕಿಬಿಟ್ಟರು. ಅವನು ಅದರಲ್ಲಿ ಮುಳುಗಿ ನಾಶವಾಗಿ ಮರಣದ ಸಮೀಪದಲ್ಲಿದ್ದಾಗ, ಎಬೆದ್ಮೆಲೆಕನೆಂಬ ವ್ಯಕ್ತಿ ಧೈರ್ಯವಾಗಿ ರಾಜನ ಬಳಿ ಯೆರೆಮಿಯನನ್ನು ಬಿಡುಗಡೆ ಮಾಡುವಂತೆ ಕೇಳಿದನು ಮತ್ತು ಅವನ ಜೀವವನ್ನು ಉಳಿಸಿದನು. ಒಂದು ರಾಜ್ಯವೇ ಯೆರೆಮೀಯನನ್ನು ಕೊಲ್ಲಲು ಪ್ರಯತ್ನಿಸಿದಾಗ ಅವನನ್ನು ರಕ್ಷಿಸಿದ ಎಬೆದ್ಮೆಲೆಕನ ಧೈರ್ಯ ಮತ್ತು ಶೌರ್ಯವು ಮೆಚ್ಚುವಂತದ್ದೇ.
ಪ್ರಿಯರೇ, ಒಂದು ವೇಳೆ ಯೆರೆಮೀಯನು ಸತ್ತಿದ್ದರೆ ದೇವರ ಸನ್ನಿಧಿಯಲ್ಲೇ ಇರುತ್ತಿದ್ದನು. ಆದರೆ ಈಗಿರುವ ಜನರು ಪಾಪದ ಕೆಸರಿನಲ್ಲಿ ಬಿದ್ದು ನಿತ್ಯ ಮರಣಕ್ಕೆ ಹೋಗುತ್ತಲೇ ಇದ್ದಾರೆ. ಇಂಥವರನ್ನು ಮೇಲೆತ್ತಲು ಕುಮಾರ್ ನಂತೆ ಹೆದರಿ ನಾಚಿಕೆಯಿಂದ ಹಿಂದೆ ಸರಿಯುತ್ತಿದ್ದೇವಾ? ಧೈರ್ಯವೂ ಶೌರ್ಯವೂ ತುಂಬಿದ ಎಬೆದ್ಮೆಲೆಕ್ ಎಲ್ಲಿ?
- S. ಮನೋಜ್ ಕುಮಾರ್
ಪ್ರಾರ್ಥನಾ ಅಂಶ:
ಮಿಷನರಿಗಳು ತಂಗಲು ಮತ್ತು ತರಬೇತಿ ಪಡೆಯಲು ಒಂದು “ಮಿಷನರಿ ಮನೆ” ನಿರ್ಮಿಸಲು ಬೇಕಾಗುವ ರೂ. 2 ಲಕ್ಷ ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482