Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.05.2022
Share:

By Village Missionary Movement

Monday, 09-May-2022

ಧೈನಂದಿನ ಧ್ಯಾನ(Kannada) – 09.05.2022

 

ಯೌವನಸ್ಥಳ ತೀರ್ಮಾನಗಳು

 

“...ಬಹುಮಂದಿ ಸ್ತ್ರೀಯರು ಗುಣವತಿಯರಾಗಿ ನಡೆದಿದ್ದಾರೆ, ಅವರೆಲ್ಲರಿಗಿಂತಲೂ ನೀನೇ ಶ್ರೇಷ್ಠಳು ಎಂದು ಆಕೆಯನ್ನು ಕೊಂಡಾಡುವನು" - ಜ್ಞಾನೋಕ್ತಿ 31:29

 

1. ನಾನು ಯೌವನದ ಇಚ್ಛೆಗಳಿಂದ ದೂರವಿರಲು ನಿರ್ಧರಿಸುತ್ತೇನೆ. ನನ್ನ ಆಲೋಚನೆಗಳನ್ನು ಸ್ವಚ್ಛವಾಗಿಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ನನ್ನ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತೇನೆ. ಯಾವುದೇ ರೀತಿಯ ಅನಗತ್ಯ ಸ್ಪರ್ಶವನ್ನು ನಿರಾಕರಿಸುತ್ತೇನೆ. ಕಾಮದ ನೋಟದಿಂದ ದೂರವಿರಲು ನಾನು ನನ್ನ ಕಣ್ಣುಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇನೆ.

 

2. ಭಾವನೆಗಳನ್ನು ಮೂಡಿಸುವ ಚಿತ್ರಗಳು, ಕಥೆಗಳು, ಸಂಭಾಷಣೆಗಳು, ಪದಗಳು, ಹುಡುಕಾಟದ ಮಾತುಗಳು ಇವುಗಳನ್ನೆಲ್ಲಾ ನನ್ನಿಂದ ನೀಗಿಸಲು ನಿರ್ಧರಿಸುತ್ತೇನೆ. ನನ್ನನ್ನು ಪಾಪಕ್ಕೆ ಕರೆದೊಯ್ಯುವ ಜನರು ಮತ್ತು ಸ್ಥಳಗಳನ್ನು ನಾನು ನಿರಾಕರಿಸುತ್ತೇನೆ.

 

3. ನನ್ನ ಹಿಂದಿನ ಪಾಪಗಳ ಬಗ್ಗೆ ಸೈತಾನನು ನನ್ನ ಮೇಲೆ ಆರೋಪ ಹೊರಿಸಲು ಅವಕಾಶ ಕೊಡದೆ, ಹಿಂದೆ ನಡೆದ ಕಾರ್ಯಗಳನ್ನೆಲ್ಲಾ ಹೂತುಹಾಕಲು ನಾನು ನಿರ್ಧರಿಸಿದ್ದೇನೆ. ನನ್ನ ಪಾಪವನ್ನು ಪರೀಕ್ಷಿಸಿ ನೋಡಿ ನಾನು ಎಡವಲು ಕಾರಣವಾಗಿದ್ದ ಆ ಕಾರ್ಯವನ್ನು ಯಾವಾಗಲೂ ನನ್ನ ಮುಂದಿಟ್ಟುಕೊಂಡು ಪುನಃ ಅಂತಹ ಪರಿಸ್ಥಿತಿ ಉದ್ಭವಿಸದಂತೆ ವರ್ತಿಸುತ್ತೇನೆ.

 

4. ಯಾವ ಮನುಷ್ಯನನ್ನೂ ಶೋಧನೆಗೆ ಒಳಪಡಿಸದೇ ಇರುವಂತೆ ನಿರ್ಧರಿಸುತ್ತೇನೆ. ನಾನು ನಯವಾಗಿ ಡ್ರೆಸ್ ಮಾಡುತ್ತೇನೆ ಮತ್ತು ನನ್ನ ಕಾರ್ಯಗಳಲ್ಲಿ ಬಹಳ ಎಚ್ಚರಿಕೆಯಿಂದ ಇರುತ್ತೇನೆ. ಯಾರಿಗಾದರೂ ನನ್ನ ಮೇಲೆ ಮೋಹವಿದೆ ಎಂದು ನಾನು ಭಾವಿಸಿದರೆ ನಾನು ಅವರಿಗಾಗಿ ಪ್ರಾರ್ಥಿಸಿ ಅವರನ್ನು ಬಿಟ್ಟು ದೂರ ಹೋಗುವುದರ ಮೂಲಕ ಅವರಿಗೆ ಸಹಾಯ ಮಾಡುತ್ತೇನೆ. ಹಾಗಾಗಿ ಅವರು ಅಸಮಾಧಾನಗೊಂಡರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಅವರೊಂದಿಗೆ ಒಂಟಿಯಾಗಿರುವುದನ್ನು ನಿರಾಕರಿಸುತ್ತೇನೆ.

 

5. ನಾನು ಕಲಿಕೆಯಲ್ಲಿ ನಂಬಿಕೆಯುಳ್ಳವರಿಗೆ ಒಂದು ಮೂಲ ಮಾದರಿಯಾಗಿರಲು ನಿರ್ಧರಿಸುತ್ತೇನೆ. ನನಗೆ ಪಾಪ ಅನಿಸದಿದ್ದರೂ ಅವರಿಗೆ ಅಡ್ಡಿಯಾಗುವ ಯಾವುದನ್ನಾದರೂ ತ್ಯಾಗ ಮಾಡುತ್ತೇನೆ. ನಾನು ದೇವರಿಂದ ಮತ್ತು ಮನುಷ್ಯರಿಂದ ಒಳ್ಳೆಯ ಸಾಕ್ಷಿಯನ್ನು ಪಡೆದುಕೊಳ್ಳುತ್ತೇನೆ. ಇತರರು ನನ್ನನ್ನು ಖಂಡಿಸಿದಾಗ ನಾನು ನಮ್ರತೆಯಿಂದ ಅದನ್ನು ಸ್ವೀಕರಿಸುತ್ತೇನೆ.

 

6. ಯಾವ ದೇವ ಸೇವಕರಾಗಿದ್ದರೂ ದೇವದೂತನೆಂದು ಪರಿಗಣಿಸದೆ ಬಿದ್ದು ಹೋಗುವಂತಹ ಮನುಷ್ಯನಂತೆಯೇ ನೋಡಲು ನಿರ್ಧರಿಸುತ್ತೇನೆ. ಸೇವಕರೊಂದಿಗೆ ವೈಯಕ್ತಿಕ ಸಂಬಂಧವನ್ನು ರಚಿಸುವುದನ್ನು ನಾನು ನಿರಾಕರಿಸುತ್ತೇನೆ. ಪತ್ರ ಬರೆದರೂ ಅದು ಸಂಕ್ಷಿಪ್ತವಾಗಿರುತ್ತದೆ.

 

7. ಪರಿಶುದ್ಧತೆಯನ್ನೇ ನನ್ನ ಜೀವನದ ಗುರಿಯಾಗಿರುವಂತೆ ನಿರ್ಧರಿಸುತ್ತೇನೆ. 

 

8. ಬಹುಮಂದಿ ಸ್ತ್ರೀಯರು ಗುಣವತಿಯರಾಗಿ ನಡೆದದ್ದುಂಟು, ನಾನೋ ಅವರೆಲ್ಲರಿಗಿಂತಲೂ ಶ್ರೇಷ್ಠಳಾಗಿರಲು ನಿರ್ಧರಿಸಿದ್ದೇನೆ.

 

- ಅವಳ ನಿರ್ಣಯಗಳು ”Dr. ಲಿಲಿಯನ್ ಸ್ಟಾನ್ಲಿ ಅವರು ಬರೆದ ಪುಸ್ತಕದಿಂದ ಸಂಕಲಿಸಿದ್ದಾರೆ.

 

ಪ್ರಾರ್ಥನಾ ಅಂಶ:

ಒಂದು ಹಳ್ಳಿಯಲ್ಲಿ VBS ಅನ್ನು ನಡೆಸಲು ಅಗತ್ಯವಿರುವ ರೂ. 5000/- ನೀಡಿ ಬೆಂಬಲಿಸುವಂತಹ ವ್ಯಕ್ತಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al