Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.05.2022
Share:

By Village Missionary Movement

Friday, 06-May-2022

ಧೈನಂದಿನ ಧ್ಯಾನ(Kannada) – 06.05.2022

 

ಆರೋಗ್ಯಕರ ಜೀವನವನ್ನು ಜೀವಿಸುವುದು

 

"ಆತನ ಆಜ್ಞೆ ಯಾವದೆಂದರೆ ನಾವು... ಯೇಸು ಕ್ರಿಸ್ತನ ಹೆಸರನ್ನು ನಂಬಿ ... ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ" — 1 ಯೋಹಾನ 3:23

 

ಕವಿಟ್ಜರ್‌ಲ್ಯಾಂಡ್‌ನ ಹೋಟೆಲ್‌ಗಳು ರಜೆಯ ದಿನಗಳನ್ನು ಕಳೆಯಲು ಬಂದವರಿಂದ ತುಂಬಿ ತುಳುಕುತ್ತಿದ್ದವು. ಹದಿನೈದು ದಿನಗಳ ಕಾಲ ಹಗಲಿನ ಬಹುಪಾಲು ಸ್ಕೀಯಿಂಗ್ ಆಡಲು ಮತ್ತು ರಾತ್ರಿಯ ಹೆಚ್ಚಿನ ಸಮಯ ನೃತ್ಯವನ್ನು ಆಡಲು ಹೀಗೆ ಹತ್ತು ಹದಿನೈದು ದಿನಗಳನ್ನು ಕಳೆದ ನಂತರ, ವಿಶ್ರಾಂತಿಗಾಗಿ (Rest cure) ಮನೆಗೆ ಹಿಂದಿರುಗುವ ದಿನ ಸಮೀಪಿಸುತ್ತಿತ್ತು. ಒಂದು ಭಾನುವಾರ ಸಂಜೆ ಕೆಲವು ಗೆಳೆಯರು ಸೇರಿ ಆರಾಧನೆಯನ್ನು ಏರ್ಪಡಿಸಿದರು. ಹೋಟೆಲ್ ಮಾಲೀಕರು ಸಹ ಅದಕ್ಕೆ ಒಪ್ಪಿಕೊಂಡರು. ಅಂದು ಸಂಗೀತ ಕಚೇರಿ ಮತ್ತು ನೃತ್ಯ ಮಂದಿರವನ್ನು ಮುಚ್ಚುವಂತೆ ಒತ್ತಾಯಿಸಿದರು. ಲಿಂಡ್ಸೆ ಕ್ಲೆಗ್ ಎಂಬ ದೇವ ಸೇವಕರನ್ನು ವಿಶೇಷ ಸಂದೇಶವನ್ನು ನೀಡಲು ಆಹ್ವಾನಿಸಲಾಯಿತು. ಸಭೆ ಪ್ರಾರಂಭವಾಗುವ ಸ್ವಲ್ಪ ಸಮಯದ ಮುಂಚೆ, ಸ್ನೇಹಿತರೊಬ್ಬರು ಕ್ಲೆಗ್ ನ ಬಳಿಗೆ ಬಂದು ಅವರು ಮಾತನಾಡಬೇಕಾದ ಅಂಶವನ್ನು ನೀಡಿದರು. ಅಂಶವೇನೆಂದರೆ: "Life with the capital 'L' ". ಕ್ಲೆಗ್ ಅವರು ಪ್ರಾರ್ಥನೆಯೊಂದಿಗೆ ತಮ್ಮ ಸಂದೇಶವನ್ನು ಪ್ರಾರಂಭಿಸಿದರು, "ಇಂಗ್ಲಿಷ್ ಕ್ಯಾಪಿಟಲ್ ಅಕ್ಷರ 'L' ನಲ್ಲಿ ಲಂಬವಾಗಿರುವ ರೇಖೆಯು ನಾವು ನಮ್ಮ ದೇವರೊಂದಿಗೆ ಹೊಂದಿರುವ ಸಂಬಂಧವನ್ನು ಸೂಚಿಸುತ್ತದೆ ಮತ್ತು ಅಡ್ಡ ಗೆರೆಯು ನಮ್ಮ ಸಹವರ್ತಿಗಳೊಂದಿಗೆ ನಾವು ಹೊಂದಿರುವ ಸಂಬಂಧವನ್ನು ಸೂಚಿಸುತ್ತದೆ" ಎಂದು ಹೇಳಿದರು. ಲೋಕವನ್ನು ನೋಡದೇ,

 

"ನಾನು ಮತ್ತು ನನ್ನ ದೇವರು ಮಾತ್ರ" ಎಂಬ ಸಂಕುಚಿತ ಮನಸ್ಸಿನಿಂದ ಎಲ್ಲವನ್ನೂ ತ್ಯಜಿಸಿ ಮಠದಲ್ಲಿ ವಾಸಿಸುವ ಸನ್ಯಾಸಿಯ ಜೀವನವು "ಆರೋಗ್ಯಕರವಾದ ಜೀವನ" ಆಗುವುದಿಲ್ಲ. ಇದು ಸ್ವಾವಲಂಬನೆಯ ಜೀವನವಾಗಿದೆ. ಹಾಗೆಯೇ ದೇವರನ್ನು ಮರೆತು ಸಮಾಜ ಸೇವೆಯಲ್ಲಿ ತೃಪ್ತಿ ಹೊಂದುವ ಜೀವನ ಖಾಲಿ ಗೆರೆ (blank dash) ಆಗಿದೆ. ಲಂಬ ರೇಖೆ ಮತ್ತು ಅಡ್ಡ ಗೆರೆ ಎರಡನ್ನೂ ಸಂಯೋಜಿಸಿದಾಗ ಮಾತ್ರ Capital ‘L’ ಬರೆಯಬಹುದು ಮತ್ತು ಆರೋಗ್ಯಕರ ಜೀವನವನ್ನು ಜೀವಿಸಲು ಸಾಧ್ಯ. ಅಲ್ಲದೆ ‘L’ ಬರೆಯುವಾಗ ಮೊದಲನೆಯದನ್ನು ಲಂಬ ರೇಖೆಯಿಂದ ಮತ್ತು ಎರಡನೆಯದನ್ನು ಅಡ್ಡ ಗೆರೆಯಿಂದ ಎಳೆಯಲಾಗುತ್ತದೆ. ಅದರಂತೆ, ಅವರು ಮೊದಲು ದೇವರೊಂದಿಗಿನ ಸಂಬಂಧದ ಅಗತ್ಯವನ್ನು ಒತ್ತಿಹೇಳಿದರು.

 

ಒಂದು ಹಾಸ್ಯಮಯ ಪರಿಕಲ್ಪನೆಯು ಪತ್ರಿಕೆಯಲ್ಲಿ ಕಾಣಿಸಿಕೊಂಡಿತು. ಪೋಲೀಸರೊಬ್ಬರು ಒಂದು ಮೂಲೆಯಲ್ಲಿದ್ದ ಸುಸ್ತಾದ ಭಿಕ್ಷುಕನ ಬಳಿಗೆ ಬಂದು, "ಪಕ್ಕಕ್ಕೆ ಹೋಗು ಇಲ್ಲಿ ನಿನಗೇನು ಕೆಲಸ?" ಎಂದು ಗದರಿಸಿದರು ಆಗ ಭಿಕ್ಷುಕನು ಅಳುತ್ತಾ "ಕೋಟ್ಯಾಧಿಪತಿ ಆಂಡ್ರ್ಯೂ ಸತ್ತುಹೋದರು" ಎಂದು ಹೇಳಿದರು. ತಕ್ಷಣ ಪೋಲೀಸರು, “ಅದರಿಂದ ನಿನಗೇನು? ಅವರೇನು ನಿನಗೆ ಸಂಬಂಧಿಕರಾ?” ಎಂದು ಕೇಳಲು, ಭಿಕ್ಷುಕನು ಬಹಳ ಜೋರಾಗಿ ಅಳುತ್ತಾ, "ಅವರು ನನ್ನ ಸಂಬಂಧಿಕರು ಅಲ್ಲ ಎಂಬುದನ್ನು ನೆನೆಸಿಕೊಂಡೇ ಅಳುತ್ತಿದ್ದೇನೆ" ಎಂದನು. ಹೌದು ಸಂಬಂಧ ಅತ್ಯಗತ್ಯ. ನಾವು ದೇವರೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿದ್ದರೆ ಮಾತ್ರವೇ ಅದು ನಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಹೌದು, ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವುದು, ಒಬ್ಬರಲ್ಲೊಬ್ಬರು ಪರಸ್ಪರ ಪ್ರೀತಿಯಿಂದಿರುವುದು ಇದೇ ಆರೋಗ್ಯಕರ ಜೀವನವಾಗಿದೆ.

- Mrs. ಬ್ಯೂಲಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

"ದೇವರು ಸೃಷ್ಟಿಸಿದ ಜೀವನ" ಎಂಬ ಅಂಶದಡಿಯಲ್ಲಿ ಎರಡು ಭಾಗಗಳಾಗಿ ನಾವು ಹೊರಬಿಟ್ಟಿರುವ ಪುಸ್ತಕಗಳ ಮೂಲಕ ಅನೇಕ ಜನರು ಯೇಸುವಿನ ಪ್ರೀತಿಯನ್ನು ಕಂಡುಕೊಳ್ಳಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin