Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.05.2022
Share:

By Village Missionary Movement

Wednesday, 04-May-2022

ಧೈನಂದಿನ ಧ್ಯಾನ(Kannada) – 05.05.2022

 

ಅಗತ್ಯವಾದದ್ದು ಒಂದೇ

 

 "ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು” - ಲೂಕ 14:11

 

ಭಾರತಕ್ಕೆ ಮಿಷನರಿಯಾಗಿ ಬಂದು ಬೈಬಲ್ ಅನ್ನು ಅನೇಕ ಭಾರತೀಯ ಭಾಷೆಗಳಿಗೆ ಅನುವಾದಿಸಿದ ವಿಲಿಯಂ ಕೇರಿ ಕೋಲ್ಕತಾದಲ್ಲಿ ಜೀವಿಸುತ್ತಿದ್ದರು. ಅಲ್ಲಿನ ಸುಶಿಕ್ಷಿತರು ಮತ್ತು ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಮಧ್ಯದಲ್ಲಿ ಅವರು ಬಹಳ ಪ್ರಭಾವಶಾಲಿಯಾಗಿದ್ದರು. ಒಮ್ಮೆ ಭಾರತದ ಗವರ್ನರ್ ಜನರಲ್ ನೀಡಿದ ಔತಣಕೂಟಕ್ಕೆ ಅವರನ್ನು ಆಹ್ವಾನಿಸಲಾಯಿತು. ಅತಿಥಿಗಳಲ್ಲಿ ಒಬ್ಬರು ಕೇರಿಯವರನ್ನು ತೋರಿಸಿ, “ಇವರು ಶೂ ತಯಾರಿಸುತ್ತಿದ್ದ ಕೇರಿ ತಾನೇ?" ಎಂದು ಕೇಳಿದರಂತೆ. ಈ ಮಾತುಗಳು ಕೇರಿಯವರ ಕಿವಿಗೆ ಬಿದ್ದವು. ವಿಲಿಯಂ ಕೇರಿ ಅವನತ್ತ ಹಿಂತಿರುಗಿ ನೋಡಿ, “ಇಲ್ಲ ಸರ್ ನಾನು ಶೂ ತಯಾರಕನಲ್ಲ; ಚಪ್ಪಲಿ ಹೊಲಿಯುವವನು” ಎಂದರಂತೆ. ಎಂತಾ ಒಂದು ತಾಳ್ಮೆ ಅವರಲ್ಲಿತ್ತು! "ತುಂಬದ ಕೊಡ ತುಳುಕುತ್ತದೆ, ತುಂಬಿದ ಕೊಡ ತುಳುಕುವುದಿಲ್ಲ" ಎಂದರೆ ಇದೇನೆ. ನಾವು ಎಲ್ಲವನ್ನೂ ಕರ್ತನಿಂದಲೇ ತಾನೆ ಸ್ವೀಕರಿಸುತ್ತೇವೆ. ಅದನ್ನು ತಿಳಿದಿರುವವರು ನಿಶ್ಚಯವಾಗಿಯೂ ತಾಳ್ಮೆಯನ್ನು ಬಲ್ಲವರೇ.

 

ತಾಳ್ಮೆಗೆ ಉದಾಹರಣೆ ಎಂದಿದ್ದರೆ ಅದು ಯೇಸು ಕ್ರಿಸ್ತನೇ. ತಾಳ್ಮೆಯನ್ನು ಕಲಿಸಿಕೊಡಲು, ಬದುಕಿ ತೋರಿಸಿದವರು. ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು (ಫಿಲಿಪ್ಪಿ 2: 6-8) ಎಂದು ಸತ್ಯವೇದವು ಹೇಳುತ್ತಿದೆ,

 

ಜ್ಞಾನೋಕ್ತಿ. 15:33 ರಲ್ಲಿ, "ಗೌರವಕ್ಕೆ ಮೊದಲು ವಿನಯ"ಎಂದು ಹೇಳಲ್ಪಟ್ಟಿದೆ. ಕರ್ತನು ತಾಳ್ಮೆಯುಳ್ಳವರನ್ನು ನೋಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ "ದೇವರು ಅಹಂಕಾರಿಗಳನ್ನು ಎದುರಿಸು ತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ ಎಂದು ಹೇಳಲಾಗಿದೆ" (ಯಾಕೋಬ 4: 6). ನಮಗೆ ಚೆನ್ನಾಗಿ ತಿಳಿದಿರುವ ಫರಿಸಾಯನು ಮತ್ತು ಸುಂಕದವನು ಈ ಇಬ್ಬರ ಪ್ರಾರ್ಥನೆಯ ವಿಚಾರದಲ್ಲಿ ತಗ್ಗಿಸಿಕೊಂಡು ಪ್ರಾರ್ಥಿಸಿದ ಸುಂಕದವನೇ ನೀತಿವಂತನೆಂದು ನಿರ್ಣಯಿಸಲ್ಪಟ್ಟನು. (ಲೂಕ 18: 10-14).

 

ಪ್ರಿಯರೇ! ನಾವು ಪಾಪಿಗಳು ಎಂದು ಒಪ್ಪಿಕೊಳ್ಳಲು ಮತ್ತು ಕೃಪೆಗಾಗಿ ಬೇಡಿಕೊಳ್ಳಲು ತಾಳ್ಮೆಯು ಅಗತ್ಯವಾಗಿದೆ. ನಮ್ಮ ಒಳ್ಳೆಯ ಕಾರ್ಯಗಳ ಕುರಿತು ಮತ್ತು ಬೇರೆ ಯಾವುದರ ಬಗ್ಗೆಯೂ ದೇವರ ಬಳಿ ಹೊಗಳಿಕೊಳ್ಳುವುದಕ್ಕೆ ಅವು ಏನೂ ಅಲ್ಲ. ನಮ್ಮ ನ್ಯಾಯವು ಕೊಳಕು ಚೂರು ಇದ್ದಂತೆ. ಹೆಮ್ಮೆ ಪಡಲು ಮತ್ತು ಶ್ರೇಷ್ಠತೆಯನ್ನು ಹೊಗಳಿಕೊಳ್ಳಲು ನಾವು ಯಾರು? ಅನೇಕ ಸಂದರ್ಭಗಳಲ್ಲಿ ನಾವು ತಗ್ಗಿಸಿಕೊಳ್ಳದೇ ಇರಲು ನಮ್ಮ ಕೆಲವು ಒಳ್ಳೆಯ ಆಧ್ಯಾತ್ಮಿಕ ಅಭ್ಯಾಸಗಳು, ವಿದ್ಯೆ, ಹಣ, ಜ್ಞಾನ, ಪದವಿಗಳು, ವಸ್ತು, ಸ್ಥಾನಮಾನ, ಸೌಂದರ್ಯದಂತಹ ವಿಷಯಗಳು ಕಾರಣವಾಗಿರುತ್ತವೆ. ಆಧ್ಯಾತ್ಮಿಕ ಗುಣಗಳು ಒಳ್ಳೆಯದೇ. ಪ್ರಾರ್ಥನೆ ಮಾಡುವುದು, ಚರ್ಚ್‌ಗೆ ಹೋಗುವುದು, ಅರ್ಪಣೆ ಮಾಡುವುದು ಮತ್ತು ಆಧ್ಯಾತ್ಮಿಕ ಪ್ರತಿಭೆಯನ್ನು ಹೊಂದಿರುವುದು ಎಲ್ಲವೂ ತುಂಬಾ ಒಳ್ಳೆಯದು. ಆದರೆ ಅಂತವುಗಳನ್ನು ಇನ್ನೊಂದು ವಿಶ್ವಾಸಿ ಮತ್ತು ಸ್ನೇಹಿತರೊಂದಿಗೆ ಹೋಲಿಸುವುದು ಮತ್ತು ಆಧ್ಯಾತ್ಮಿಕವಾಗಿ ಹೆಮ್ಮೆಪಡುವುದು ಅಪಾಯಕಾರಿ. ಹಾಗಾಗಿ ನಮ್ಮಲ್ಲಿ ಎಷ್ಟೇ ಪ್ರತಿಭೆ ಇದ್ದರೂ ವಿಲಿಯಂ ಕೇರಿಯಂತೆ ತಾಳ್ಮೆಯನ್ನು ಧರಿಸಿಕೊಳ್ಳೋಣ. ಮರಣವನ್ನು ಹೊಂದುವಷ್ಟು ತನ್ನನ್ನು ತಗ್ಗಿಸಿಕೊಂಡ ಯೇಸು ಕ್ರಿಸ್ತನಿಗೆ ನಮ್ಮನ್ನು ಸಮರ್ಪಿಸಿಕೊಳ್ಳೋಣ. ಆತನೇ ನಮ್ಮನ್ನು ನೇರವಾಗಿ ತಾಳ್ಮೆಯ ಕಡೆಗೆ ಮುನ್ನಡೆಸುತ್ತಾರೆ.

- P. ಶಿವ

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯಲಿರುವ VBS ಸೇವೆಗಳಲ್ಲಿ ಯೋಜಿಸಲ್ಪಟ್ಟಂತೆ 3000 ಹಳ್ಳಿಗಳಲ್ಲಿ ಈ ಸೇವೆಯನ್ನು ಪೂರ್ಣಗೊಳಿಸಲು ದೇವರು ಕೃಪೆ ತೋರಿಸಿ, ಹಳ್ಳಿಗಳಲ್ಲಿ ದ್ವಾರಗಳನ್ನು ತೆರೆದು ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş grandpashabet hepsibet hepsibet giriş betnano betnano giriş betparibu betparibu giriş