Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.05.2022
Share:

By Village Missionary Movement

Wednesday, 04-May-2022

ಧೈನಂದಿನ ಧ್ಯಾನ(Kannada) – 04.05.2022

 

ಕ್ಷಮಾಪಣೆ

 

"ಕರ್ತನು ನಿಮ್ಮನ್ನು ಕ್ಷವಿುಸಿದಂತೆಯೇ ನೀವೂ ಕ್ಷವಿುಸಿರಿ" - ಕೊಲೊಸ್ಸೆ 3:13

 

ವಯಸ್ಸಾದ ಅಜ್ಜಿಯೊಬ್ಬರು ಬಿಜಿಯಾಗಿರುವ ಒಂದು ರಸ್ತೆಯಲ್ಲಿ ಹಣ್ಣಿನ ಬುಟ್ಟಿಯನ್ನು ಹೊತ್ತುಕೊಂಡು ಹೋಗುತ್ತಿದ್ದರು. ಆಗ ಆ ಬದಿಗೆ ಬಂದ ಪುಂಡ ದಿನೇಶ್ ಬುಟ್ಟಿಗೆ ಬಡಿದಿದ್ದಾನೆ. ಏನೋ ಜಗಳ ನಡೆಯುತ್ತಿದೆ ಎಂದು ನೆನೆಸಿ ಎಲ್ಲರೂ ಸುತ್ತಲೂ ನಿಂತು ಮೋಜು ನೋಡುತ್ತಿದ್ದರು. ಆದರೆ ಆ ಅಜ್ಜಿ ಶಾಂತಚಿತ್ತದಿಂದ ದಿನೇಶನನ್ನು ನೋಡಿ “ತಮ್ಮ, ನೀನು ಗೊತ್ತಿಲ್ಲದೆ ಏನೋ ಬಡಿದಿದ್ದೀಯಾ. ಇನ್ನು ಮುಂದೆ ಯಾರಿಗೂ ಈ ರೀತಿ ಮಾಡಬೇಡ" ಎಂದು ಹೇಳಿ ಬೊಗ್ಗಿ ಹಣ್ಣುಗಳನ್ನೆಲ್ಲಾ ಆಯ್ದುಕೊಂಡು ಬುಟ್ಟಿಯೊಳಗೆ ಹಾಕಿಕೊಳ್ಳುತ್ತಿದ್ದರು. ಅಜ್ಜಿ ಹೇಳಿದ್ದನ್ನು ಕೇಳಿದ ದಿನೇಶ ತಾನು ಮಾಡಿದ್ದಕ್ಕೆ ಪಶ್ಚಾತ್ತಾಪಪಟ್ಟು ಅಜ್ಜಿಯ ಬಳಿ ಕ್ಷಮೆ ಕೇಳಿದನು. ಹಣ್ಣುಗಳನ್ನು ಆಯ್ದು ಅಜ್ಜಿಯ ಬುಟ್ಟಿಗೆ ಹಾಕಲು ಸಹಾಯ ಮಾಡಿದನು. ವಿನೋದವನ್ನು ನೋಡಿದ ಎಲ್ಲರೂ ಅಜ್ಜಿಯ ಕ್ಷಮಿಸುವ ಸ್ವಭಾವವನ್ನು ಹೊಗಳಿದರು.

 

ನಮ್ಮ ಮನೆಯಲ್ಲಿ, ಕೆಲಸದಲ್ಲಿ ಮತ್ತು ನಾವು ಎಲ್ಲಿಗೆ ಹೋದರೂ ಈ ರೀತಿಯ ಕೋಪವನ್ನು ಕೆರಳಿಸುವ ಅನೇಕ ವಿಷಯಗಳು ನಮಗೂ ಎದುರಾಗಬಹುದು. ಆಗ ಸಿಟ್ಟು ಮಾಡಿಕೊಳ್ಳದೆ ಯೇಸುಕ್ರಿಸ್ತನು ಆ ಜಾಗದಲ್ಲಿದ್ದರೆ ಏನು ಮಾಡುತ್ತಿದ್ದರೋ ಅದನ್ನೇ ನಾವು ಸಹ ಮಾಡಿದರೆ ಪರಿಸ್ಥಿತಿ ತಲೆಕೆಳಗಾಗುತ್ತದೆ. ನಾವು ಪರಸ್ಪರ ಒಬ್ಬರನ್ನೊಬ್ಬರು ಕ್ಷಮಿಸಿದಾಗ ಮತ್ತು ಶಾಂತವಾಗಿ ಪ್ರತಿಕ್ರಿಯಿಸಿದಾಗ ಪರಿಸ್ಥಿತಿ ಸುಗಮವಾಗುತ್ತದೆ. ಯೋಬನು ಎಲ್ಲವನ್ನೂ ಕಳೆದುಕೊಂಡು ದೇಹದಾದ್ಯಂತ ಹುಣ್ಣುಗಳನ್ನು ಹೊಂದಿದ್ದನು. ಈ ವೇಳೆ ಸಾಂತ್ವನ ಹೇಳಲು ಬಂದಿದ್ದ ಸ್ನೇಹಿತರು ಆತನನ್ನು ಪಾಪಿ ಎಂದು ಆರೋಪಿಸಿ ಆತನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾನೆ ಎಂದು ಅವರ ಮೇಲೆ ಅಪರಾಧ ಹೊರಿಸುತ್ತಿದ್ದರು. ಅವರನ್ನು ಮತ್ತಷ್ಟು ಖಿನ್ನತೆಗೆ ಒಳಪಡಿಸಿದರು. ಆದರೆ ಅವರು ದೇವರೇ ಕೊಟ್ಟರು, ದೇವರೇ ತೆಗೆದುಕೊಂಡರು ದೇವರ ನಾಮಕ್ಕೆ ಸ್ತೋತ್ರವಾಗಲಿ ಎಂದು ಕೃತಜ್ಞತೆ ಸಲ್ಲಿಸಿ ತಮ್ಮ ಪರಿಸ್ಥಿತಿಯನ್ನು ಸ್ವೀಕರಿಸಿ ರಮ್ಯವಾಗಿದ್ದರು ಇಂತಹ ಯೋಬನನ್ನು ತನ್ನ ಹುಟ್ಟಿದ ದಿನವನ್ನೇ ಶಪಿಸುವ ಮಟ್ಟಿಗೆ ಬೇಸರಗೊಳಿಸಿದರು. ಆದರೆ ಯೋಬನು ಅಂತಿಮವಾಗಿ ಅವರನ್ನು ಕ್ಷಮಿಸಿದರು ಮತ್ತು ಅವರಿಗಾಗಿ ಪ್ರಾರ್ಥಿಸಿದರು. ದೇಹ ಮತ್ತು ಮನಸ್ಸಿಗೆ ಗಾಯಗಳಾದರೂ ಕ್ಷಮಿಸಿದರು. ಎರಡರಷ್ಟು ಆಶೀರ್ವಾದ ಪಡೆದರು.

 

ಇದನ್ನು ಓದುತ್ತಿರುವ ಸ್ನೇಹಿತರೇ! ಅಜ್ಜಿಯ ಕ್ಷಮಾಗುಣ ನೋಡಿದ ದಿನೇಶನಿಗೆ ತನ್ನ ತಪ್ಪಿನ ಅರಿವಾಯಿತು. ಯೋಬನ ಕ್ಷಮಿಸುವ ಸ್ವಭಾವವು ಎರಡರಷ್ಟು ಆಶೀರ್ವಾದವನ್ನು ತಂದಿತು. ನಮಗೆ ತಪ್ಪು ಮಾಡುವವರನ್ನು ಮತ್ತು ನಮ್ಮ ವಿರುದ್ಧ ಮಾತನಾಡುವವರನ್ನು ಕ್ಷಮಿಸುವುದು ಕಷ್ಟವೇ. ಆದರೆ ಕ್ಷಮಿಸುವಾಗ ಅವರು ಮಾನಸಾಂತರ ಹೊಂದುವ ಅವಕಾಶವಿದೆ. ನಾವೂ ನೆಮ್ಮದಿಯಿಂದ ಬದುಕಬಹುದು. ನೀವು ಯಾರನ್ನಾದರೂ ಕ್ಷಮಿಸದಷ್ಟು ಮಟ್ಟಿಗೆ ಹಗೆತನ ಹೊಂದಿದ್ದೀರಾ? ದೇವರ ಬಳಿ ಕ್ಷಮಿಸುವಂತಹ ಮನೋಭಾವನಾ ಶಕ್ತಿಯನ್ನು ಕೇಳಿ ಪಡೆಯಿರಿ. ಪರಿಸ್ಥಿತಿಯನ್ನು ಸಿಹಿಗೊಳಿಸೋಣ.

- Mrs. ಅನ್ಬು ಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

10 ಮತ್ತು 12ನೇ ತರಗತಿಯ ಸಾಮಾನ್ಯ ಪರೀಕ್ಷೆ ಬರೆಯಲಿರುವ ಮಿಶಿನರಿಗಳ ಮಕ್ಕಳು ಹಾಗೂ ಅನಾಥಾಶ್ರಮದ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş